ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)
- ಕನ್ನಡ ನಾಟ್ಕ ಇನ್ ತೆಲುಗು ದೇಶಂ ..! - ನವೆಂಬರ್ 22, 2023
- ಕನ್ನಡ ನಾಟ್ಯ ರಂಗ - ನವೆಂಬರ್ 21, 2023
- ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು - ನವೆಂಬರ್ 1, 2023
ಫೇಸ್ ಬುಕ್ಕಿನಲ್ಲಿ ಕೆಲವು
ಹೆಸರು ಬಸಿರ ಮಾಡಿಕೊಂಡ
ಫೇಮಸ್ ಮಂದಿ,
ಬರೆದ ಎಲ್ಲ ಕಸ ಕಡ್ಡಿ,
ಮುಸುರೆಗಳ ದಿಣ್ಣೆ…
ಸುತ್ತ ಮುತ್ತ ನಾಯಿಗಳ ಹಿಂಡು..!
ಡೈರೆಕ್ಟ್ ನೆಲದ ಮೇಲೇ
ನಡೆಯೋದ್ ಕಷ್ಟ..
ಅವರದು ನೂರಾರು ಹಿಂಬಾಲಕರ
ಹೆಗಲುಗಳ ಮೇಲೆ ಸವಾರಿ..!
ನಂದೂ ಒಂದು ಹೆಗಲಿತ್ತು ನಡುವೆ…
ಅಂತರ್ಜಾಲದ ಹರಿದ ಚಿಂದಿಗಳ ನಡುವೆ
ಇನ್ನೂ ಹುಡುಕುವೆ ನನ್ನ..
ಫೇಸ್ ಇಲ್ಲದ ಮೇಲೆ
ಮಾತು ಹುಟ್ಟೀತು ಹೇಗೆ?
ಎಂದ ಮೇಲೂ ತಿಳಿದೆ ಒಮ್ಮೆ..
ಲೈಕ್ ಮಾಡಿಯೂ ಬದುಕಬಹುದು..
ಮತ್ತೆ, ಮೌನ ಶೇರ್ ಮಾಡುವ ಕೆಲಸ ಮಾತ್ರ ದೊಡ್ಡದು.. ಸುಲಭ ಕೂಡ
…
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ