ಬಿ ಎಸ್ಸಿ ಮತ್ತು ಎಮ್ ಎ ಓದಿರುವ ಇವರು ಕನ್ನಡ ಬೋಧಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡೂವರೆ ವರ್ಷ ಹಾಸನ ಆಕಾಶವಾಣಿ ಎಫ್ ಎಮ್ ಕೇಂದ್ರದಲ್ಲಿ ಉದ್ಘೋಷಕಿಯಾಗಿ, ಬೆಂಗಳೂರು ದೂರದರ್ಶನ ಚಂದನವಾಹಿನಿಯಲ್ಲಿ ವಾರ್ತಾವಾಚಕಿಯಾಗಿಯೂ ಕೆಲಸ ಮಾಡಿದ್ದಾರೆ. 'ಲೋಹಕಾರ್ಯ' ಎಂಬ ತಾಂತ್ರಿಕ ಮಾಸಿಕ ಪತ್ರಿಕೆಯ ಸಂಪಾದನೆಯ ಕಾರ್ಯವನ್ನೂ ಸಹ ನಿರ್ವಹಿಸಿದ್ದಾರೆ.
ಕವನ ರಚನೆ ಮತ್ತು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸುವುದು ಇವರ ಮೆಚ್ಚಿನ ಹವ್ಯಾಸಗಳು. ಅದರ ಭಾಗವಾಗಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪಿ.ಹೆಚ್. ಡಿ ಪ್ರಬಂಧವನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.
ಇವರ ಕೃತಿಗಳು :
ಕವನ ಸಂಕಲನಗಳು
೧. ಮಲ್ಲಿಗೆ ಮತ್ತು ಇತರ ಕವಿತೆಗಳು
೨. ದೀಪಹಚ್ಚು
೩. ಕಲ್ಲೆದೆ ಬಿರಿದಾಗ
೪. ಬಾಲ್ಕನಿ ಕಂಡ ಕವಿತೆಗಳು
೫. ಜೀವನ ಯಾತ್ರೆ ( ಡಾ.ಯಶೋದಾ ಭಟ್ಟ ಅವರ ಜೀವನಚರಿತ್ರೆ)
ಪ್ರಶಸ್ತಿಗಳು :
- ೨೦೧೫ ರಲ್ಲಿ ಇವರ ಮೊದಲನೇ ಕವನಸಂಕಲನಕ್ಕೆ 'ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ
ಪ್ರಶಸ್ತಿ' ಪಡೆದಿದ್ದಾರೆ.
- ೨೦೧೯ರಲ್ಲಿ 'ಕಲ್ಲೆದೆ ಬಿರಿದಾಗ' ಕಾವ್ಯ ಕೃತಿಗೆ ಕನ್ನಡಸಾಹಿತ್ಯಪರಿಷತ್ತಿನ'ರತ್ನಾಕರವರ್ಣಿ ಮುದ್ದಣಅನಾಮಿಕದತ್ತಿಪ್ರಶಸ್ತಿ' ದೊರಕಿದೆ.
- ಬೆಂಗಳೂರು ನಗರಜಿಲ್ಲೆ ಕನ್ನಡಸಾಹಿತ್ಯಪರಿಷತ್ತಿನ'ಕನ್ನಡಸೇವಾರತ್ನ' ಪ್ರಶಸ್ತಿ ೨೦೨೦ರಲ್ಲಿ ಲಭಿಸಿದೆ ಹಾಗೂ 'ಬಾಲ್ಕನಿ ಕಂಡಕವಿತೆಗಳು' ಕವನಸಂಕಲನಕ್ಕೆ ಲೇಖಿಕಾ ಕಾವ್ಯ ಪ್ರಶಸ್ತಿಲಭಿಸಿದೆ.
- ಧಾರವಾಡದ೮೪ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನವಾಚನವನ್ನೂ ಮಾಡಿದ್ದಾರೆ.
ಅದೇ ಲಿಫ್ಟು
ಅದೇ ಟ್ರಾಫಿಕ್
ಅದೇ ಯಂತ್ರಗಳ
ಜಡೋಪಾಖ್ಯಾನ
ಜಂಜಡದ ಬದುಕು
ಭಾವಜಡತೆಯ ಉದರದಲಿ
ಕುಡಿಯೊಡೆಯುವದೇ ಅಪರೂಪ
ಮೂಡಿದ್ದು ಫಲವಾಗುತಿಲ್ಲ
ದಿನಗುರುಡೆಮಗೆ
ಅದೆಷ್ಟೋ ಕವಿತೆಗಳ
ನೊರೆ ತುಂಬುವುದು
ನೆರೆವುದೇಯಿಲ್ಲ !
ತೊನೆತು ತನಿವುದೇಯಿಲ್ಲ!
ಅಡರಿದ ಕತ್ತಲೆಗೆ
ಸೊಡರಿನ ಮೂಕಸ್ಪಂದ
ಹಗಲಿರುಳಿನ ಕೋ ಕೋ
ಬದುಕ ಮೈದಾನದಲಿ
ಕಾಯವೆಂಬ
ಉಸಿರನೂದುವ ಮುರಲಿಗೆ
ಅನ್ನವೆಂಬ ಬೆರಳ ನೀಡುತ್ತಾ
ಸಣ್ಣಗೆ ಉಲಿಯುತಿದೆ
ಜೀವಸ್ವರ
ಹೊಸೆಯುತ್ತ ಹಸೆಯುತ್ತ
ಸಾಗುತಿದೆಯಾದರೂ
ಹೊಸ ಬೆಳಕಿಗೆ
ಕಾಯುತಿದೆ
ಒಳಮನ !!!
ದಿನದ ಪ್ರಾರ್ಥನೆಯಲಿ
ನಲಿವು ನೋವುಗಳ
ಹೂವುಗಳನೇರಿಸುತ
ಮಿಸುಕಾಟದಲ್ಲೇ
ಜೀವಧೇನು
ಧೇನಿಸುತಿದೆ
ಇನ್ನಿಲ್ಲದ
ಬದುಕ ಮೋಹ
ಬಗೆ ಬಗೆಯ ಬಣ್ಣದ
ದಿನದಿನದ ದೀಪದೋಕುಳಿಯಲಿ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ