ಇತ್ತೀಚಿನ ಬರಹಗಳು: ಮೌನ ಹೃದಯ (ಸ್ನೇಹಾ) (ಎಲ್ಲವನ್ನು ಓದಿ)
- ನಾನು ಕಾಡು ಅದೇ ಮೌನ - ಮೇ 28, 2022
ಕಾಡ ಹೊಳೆಯ ಹಳೆಯ ಹಾಡು
ಹೆಜ್ಜೆ ಮರೆತ ಹಳೆಯ ಜಾಡು
ಗೂಡು ತೊರೆದ ಒಂಟಿ ಹಕ್ಕಿ
ಕಾಡ ಹಾದಿ ಹಸಿರ ಚುಕ್ಕಿ..!!
ಎಂದು ಕಾಡೋ ಏನೋ ನೋವು
ಹಾದಿ ತುಂಬಾ ಕಾಡ ಹೂವು
ಘಮಿಸೋ ನೆಳಲು ಏನೋ ಅಳಲೊ
ಹೆಜ್ಜೆ ಬಿಗಿದ ಬಳ್ಳಿ ಬಿಳಲು..!!
ಗೆಲ್ಲು ಗೆಲ್ಲು ಪ್ರೀತಿ ಸಾಲು
ಹಸಿರ ಎಲೆಗೂ ಇಲ್ಲಿ ಪಾಲು
ತಂಪುಗಾಳಿ ರಾಯಭಾರಿ
ಬೀಸಿ ತಂತು ಪ್ರೇಮ ತಂತಿ..!!
ಯಾರೋ ಬಿಟ್ಟ ಪ್ರೀತಿ ದೋಣಿ
ನೀಲಿ ನೀರು ಇಲ್ಲಿ ವಿರಹಿ
ಒಂಟಿ ಮನೆಯ ಮಿಣುಕು ದೀಪ
ಕಪ್ಪು ಮನಕೆ ತುಣುಕು ಚಂದ್ರ..!!
ಸ್ತಬ್ಧ ತೀರ ನಿಲ್ಲದ ಯಾನ
ಕರೆದ ಕಡಲು ಎಲ್ಲೋ ದೂರ
ಒಂಟಿ ಹೆಜ್ಜೆ ಕಾಡ ಹಾದಿ
ನಾನು ಕಾಡು ಅದೇ ಮೌನ..!!
ಕಾಡ ಹಾದಿ ಹಳೆಯ ಸಂಘ
ಯಾವ ನಂಟು ಏನೀ ಬಂಧ…??
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಮಹಾಸಾಗರವಾದಳು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..