- ಝೀಬ್ರಾ ಕ್ರಾಸಿಂಗ್ - ಸೆಪ್ಟೆಂಬರ್ 3, 2022
- ಕೇವಲ ನೆನಪು… - ಮೇ 28, 2022
- ನಾನೆಂಬ ಒಂದು IDEA [ಇದೀಯ-?!] - ಮೇ 12, 2022
ಎಲ್ಲಾ ಕನಸು ನೆನಪೇ ಎಲ್ಲಾ ನೆನಪು ಕನವರಿಕೆ
ಅನ್ಯರ (ನಿಮ್ಮ?) ಕನಸಲ್ಲಿ ನಾನು ಪಾತ್ರವಾದರೆ
ದಿಬ್ಬಣ ಮುಗಿದ ಮೇಲೆ-ಹಾಡುಹಸೆ ಎಲ್ಲಿರುತ್ತೆ….
ಇದೀಗ ಅನುಕ್ಷಣವೂ ಅಂದಿನಂದಿನ ಲೆಕ್ಕಾಚಾರ
ಆಗಾಗಿನ ಆತ್ಮಾವಲೋಕನ ಇನ್ನು ಕೇವಲ ವ್ಯವಕಲನ
ಅನ್ಯಗ್ರಹಗಳಲಿ ಜೀವ? ಅದೊಂದೇ ಬಾಕಿ ಕೌತುಕ!
ನಾನು ಏನೇ ಆಗಿರಬಹುದು ಒಳಗು ಬೆಳಗಲಿಲ್ಲಾರಿ-
ಒಳಗೊಳಗೆ ಖಾಲಿ ಏನೂ ಇಲ್ಲ ಖಂಡಿತ-ಶೂನ್ಯವು
ಒಂದರ್ಥದಲಿ ಇಂದೂ ನಾನಿನ್ನೂ ಹುಟ್ಟಿಲ್ದ ಭಾವವು..
ನನ್ನದು ವ್ಯತಿರಿಕ್ತ ತೀರಾ ವೈಯಕ್ತಿಕ ಕಾಮಿಡಿಯ?
ನೆನಪು ಕನಸು ಭಾವ ನಿರರ್ಥಕ ಯುಟೋಪಿಯ
ಒಂದಂತೂ ಖಾತ್ರಿ ‘ನಾವೆಲ್ಲಾ ಕೇವಲ ಒಂದು-idea’
ಬದುಕು ಕ್ಷಣಕ್ಷಣ ಜೀವಿಸು, ಒಳ್ಳೇ ‘ಥಿಯರಿ-ಯು’
ಈಗ ನೋಡಿ ಒಂದು ಸೊಳ್ಳೆ ಕೈ ಬೆರಳನೇ ಕಚ್ಚಿತು!
ಅಂದ್ರೆ ಪರಮಾರ್ಥಕ್ಕೆ ಎರಡೂ ಜೀವ ಸರಿಸಮವು!
ಹುಟ್ಟು ,ಏರು, ಸೋಲೂ, ಸಾವು- ಹೇಗಿಬ್ರೂ ವಿಭಿನ್ನರು ?
ಸೊಳ್ಳೆ ಇದೆ, ದುಡಿಮೆ ಹಾರತ್ತೆ, ರಕ್ತಾಹಾರ,ಕಡೆಗೆ ಸಾವು
ಜೀವ-ಗಾತ್ರ-ತತ್ವ-ಇಬ್ರಿಗೂ-‘ಒಂದೇ ಜೀವಾವಧಿ ಶಿಕ್ಷೆಯು’
ಅದು ನಾನು-ನಾನು ಅದು ಆಗದ್ದು ಆಕಸ್ಮಿಕವೇನು?
ಇಲ್ಲಿಯದೆಲ್ಲಕ್ಕೂ ಒಂದೇ ಒಂದು ಸೂತ್ರ ಎಲ್ಲಿದೆ ಹೇಳು
ಓಂ-ಪ್ರಥಮ-‘ನಾನು’-ಯಾರಂತ ತಿಳಿಯಬಾರದೇನು?
ಥತ್! it is a std.drill : birth-growth-death..
ಚೆಹ್ರೆ ಪಹ್ರೆ-ನಾಜೂಕು…cutout ಬಿದ್ರೆ ಮುಗಿಯಿತು..
u suffer in idea-lization and in reality-too!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ