ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬಯಲ ಭಿಕ್ಕು

ಡಿ.ಎಮ್. ನದಾಫ್
ಇತ್ತೀಚಿನ ಬರಹಗಳು: ಡಿ.ಎಮ್. ನದಾಫ್ (ಎಲ್ಲವನ್ನು ಓದಿ)
 
ಬಿಸಿಲ ನಾಡಿಂದ ನೀ ಬರೆದೊಂದು ಪತ್ರ
ಬದಲಿಸಿತು ಕನ್ನಡ ಸಾಹಿತ್ಯ ರಂಗದ ಚಿತ್ರ!
"ಹಸಿವ ಹಾಸಿ ಬಿಸಿಲ ಹೊದ್ದವರಮೂಳೆ 
ಚಕ್ಕಳಗಳ ಮೇಲೆ ಬಂಗಲೆಗಳ ಕಟ್ಟಿದವರಎದೆಗೆಒದ್ದು
ಹೊಟ್ಟೆ ಬೆನ್ನಿಗಂಟಿದವರು ಬರಬೇಕು ಮೇಲೆದ್ದು"
ನಿನ್ನ ಕನಸು ನಿನ್ನೆದುರೇ ನುಚ್ಚು ನೂರಾಯ್ತು
ಲೂಟಿಕೋರರು ಲೀಡರಾದಾಗ, ಅರಸಂಬೇಡಕರರ ಆಶಯವೆಲ್ಲ ಅಕ್ಷರದಿ ನೀನು ಅಚ್ಚೊತ್ತ ಬಯಸಿದೆ, ಅರಿವಿನ ಪರಿಮಳ ಸೂಸುವ ಗಂಧದ ತೋಟವಾ ನೆಟ್ಟು ಬೆಳೆಸಿದೆ. ನಿನ್ನೊಡಲ ಕುಡಿಗಳೇ ನಿನ್ನೆದುರು ಗಂಧದ ತೋಟದೊಳಗಿನ ವಿಷಜಂತುಗಳಾದಾಗ ವಿಷಯಕೆಳೆಸುವ ಮೃಗವಾಗದೆ ವಿಷವನ್ನೆಲ್ಲ ಕುಡಿದು ವಿಷಕಂಠನಾದೆ ಕೆಂಪು ದೀಪದ ಕೆಳಗೆ ಮೈಮಾರಿದರೇನು ಮನುಜರಲ್ಲವೇ? ಜಗದವರೆಲ್ಲ ಸೇರಿ ಪತಿತೆಯರೆಂದು ಪಟ್ಟಗಟ್ಟಿದವರನು ಪ್ರೀತಿಯಿಂದ ಅಪ್ಪಿ "ವೇಶ್ಯಾ ಸೋದರಿಯರು" ಎಂದೆ. ಅವರ ಕಣ್ಣೀರ ಕಥೆಯ ಕಾವ್ಯ ಬರೆದೆ. ಜಗವ ಸುತ್ತಿ ಸುಳಿದಾಗ ಸಿಕ್ಕಿದ್ದು ನಿನಗೆ "ವ್ಯೋಮಾ ವ್ಯೋಮ " ಕನ್ನಡ ಕಾವ್ಯ ಲೋಕಕ್ಕೆ ದಕ್ಕಿದ್ದು ಹೊಸ ಆಯಾಮ ಚದುರಿ ಚಿಂದಿಯಾಗಿ ಹೋದವು ದಂತಗೋಪುರದ ಕಾವ್ಯನಿಯಮ ನಿನ್ನೊಡಲೇ ಒಂದು ಕನ್ನೆ ನೆಲ ಹರಡಿದೆ ಎಲ್ಲೆಡೆ ಹೊಕ್ಕುಳ ಪರಿಮಳ ಬೆಳೆಸಿದೆ ಬೋಧಿವೃಕ್ಷದ ಹೂವುಗಳ ಕರುಣೆ ಶೀಲ ಪ್ರಜ್ಞೆಗಳ ಉಳಿಸಿದೆ ಬುದ್ಧ ಗುರುವಿನ ನೆರಳಿನಲ್ಲಿ ಬಯಲ ಭಿಕ್ಕುವಾದೆ! ಬಯಲ ಭಿಕ್ಕುವಾದೆ!