ಇತ್ತೀಚಿನ ಬರಹಗಳು: ಅಂಜನಾ ಹೆಗಡೆ (ಎಲ್ಲವನ್ನು ಓದಿ)
- ★ ಗ್ರೀಟಿಂಗ್ ಕಾರ್ಡುಗಳ ನೆನಪಿನಲ್ಲಿ ★ - ಜನವರಿ 14, 2021
- ಬಾಲ್ಕನಿಯ ಬೆಳಗು? - ಸೆಪ್ಟೆಂಬರ್ 22, 2020
- ಹಳೆ ಮಾರ್ಗಗಳ ಮಧ್ಯದಲ್ಲಿ - ಸೆಪ್ಟೆಂಬರ್ 10, 2020
ಪ್ರತಿದಿನದ ಬೆಳಗೂ
ಬಾಲ್ಕನಿಯಲ್ಲೇ ಎದುರಾಗುತ್ತದೆ
ಮೆಣಸು ಬಸಳೆ ಮೂಲಂಗಿ
ಒಗ್ಗರಣೆಗೆ ಕರಿಬೇವು
ಚಿಟ್ಟೆ ದುಂಬಿ ಪಾರಿವಾಳ
ಎಲ್ಲ ಸಂಧಿಸುತ್ತವೆ ಅಲ್ಲಿ
ಹೊಸ ಚಿಗುರಿನ ಕನಸಿನಲ್ಲಿ
ಕಣ್ಣುಗಳಲ್ಲೇ ಹೃದಯವಿರುವ
ಇಮೋಜಿಯಂಥ ಹುಡುಗ
ತಪ್ಪದೆ
ಗುಡ್ ಮಾರ್ನಿಂಗ್ ಮೆಸೇಜು ಕಳಿಸುತ್ತಾನೆ
ನನ್ನ ಹೃದಯವೋ
ಆತನ ಪಾದದಡಿಗಳಲ್ಲಿ
ಮಧ್ಯರಾತ್ರಿಯ ನೀರವತೆಯಲ್ಲಿ
ಒಣಎಲೆಯೊಂದು ಗಾಳಿಯಲ್ಲಿ ತೇಲಿ
ಬಾಲ್ಕನಿಯ ಬಾಗಿಲಲ್ಲಿ
ಕನಸುಗಳ ಕಾಯುತ್ತಿದೆ
ಆಸ್ಪತ್ರೆಗಳ ಬಾಗಿಲ ಹಿಂದೊಂದು
ತೆರೆದ ಹೃದಯ
ಅಲಾರ್ಮ್ ಸದ್ದಿಗೆ
ಅರ್ಧಕ್ಕೇ ಮುಗಿದುಹೋದ ಕನಸುಗಳೆಲ್ಲ
ಕಂಗಾಲಾಗಿವೆ..
ಹಣ್ಣಿನ ಚೀಲಗಳು ರಿಕ್ಷಾದಲ್ಲಿ ಕುಳಿತು
ಸುಪ್ರಭಾತ ಆಲಿಸುತ್ತಿವೆ
ಗೂಡಂಗಡಿಯ ಮುಂದೆ ಬದುಕುಗಳು
ಸಾಲುಗಟ್ಟಿ ಕಾಯುತ್ತಿವೆ
ಒಂದೊಂದೇ ಬಾಗಿಲುಗಳು ತೆರೆದು
ಬಾಲ್ಕನಿಯ ಬೆಳಗನ್ನು ಬಳಸಿ ನಿಂತಿವೆ
ಪಾದಗಳಡಿಯ ಕನಸುಗಳು
ಒಂದೊಂದಾಗಿ
ಬೆಳಗಿನ ಕಣ್ಣುಗಳಲ್ಲಿ ಹರಡಿಕೊಳ್ಳುತ್ತವೆ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ