- ಕನ್ನಡ ನಾಟ್ಕ ಇನ್ ತೆಲುಗು ದೇಶಂ ..! - ನವೆಂಬರ್ 22, 2023
- ಕನ್ನಡ ನಾಟ್ಯ ರಂಗ - ನವೆಂಬರ್ 21, 2023
- ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು - ನವೆಂಬರ್ 1, 2023
ಉರ್ದುವಿನ ಸುಪ್ರಸಿದ್ಧ ಕವಿ ರಾಹತ್ ಇಂದೋರಿಯವರ ಬಹಳ ವೈರಲ್ ಒಂದು ಕವಿತೆ ” ಬುಲಾತಿ ಹೈ, ಮಗರ್ ಜಾನೆ ಕಾ ನಹಿ…” ಇದನ್ನು ಉತ್ತರಕನ್ನಡ ಜಿಲ್ಲೆಯ, ಅಂಕೋಲೆ ತಾಲ್ಲೂಕಿನ ಒಂದು ಆಡು ಭಾಷೆಯಲ್ಲಿ ಅನುವಾದ ಮಾಡುವ ಒಂದು ಬಾಲಿಶ ಪ್ರಯತ್ನ. ಹೋಗುಕಾಗಾ ಅಂದರೆ ಹೋಗ ಕೂಡದು ಅಥವಾ ಹೋಗಬಾರದು ಎಂದರ್ಥ. ಹಾಗೆ, ನಿಲ್ಲುಕಾಗಾ ಅಂದರೆ ನಿಲ್ಲ ಕೂಡದು ಎಂದರ್ಥ.
ಕರೀತಿದು ಆದ್ರೆ, ಹೋಗುಕಾಗಾ..
ಅದು ಪ್ರಪಂಚ..! ಆ ಬದಿ ಹೋಗುಕಾಗಾ..
ಯಾರ್ಗರೂ ಪ್ರೀತಿ ಮಾಡ್ಕಾ ಮಗಾ,
ಹದ್ದ್ ಮೀರ್ ಮಾತ್ರ್, ಹೋಗುಕಾಗಾ..
ನೆಲಾ ತಲೆ ಮ್ಯಾಲ್ ಬೇಕಾರ್ ಇಟ್ಕ..
ನಡೆಯುಕ್ ಹತ್ರೆ , ನಿಲ್ಲುಕಾಗಾ..
ನಕ್ಷತ್ರ ಬೇಕಾರ್ ಕಿತಕಂಡ್ ಬತ್ತೆ,
ಖಾಲಿ ಮನೆಗ್ ಹೋಗುಕಾಗಾ..
ಊರ್ ತುಂಬಿ, ರೊಗ ರಾಶ್ಶೀ.
ಆದ್ರ್ ಆಗ್ಲಿ- ಸಾಯುಕಾಗಾ…
ಅದ್ ಕುತ್ಗಿ ಅಳತೆ ಮಾಡ್ತಿದು !
ಆ ಪಿಶಾಚಿಗೆಲ್ಲ ಹೆದ್ರುಕಾಗಾ..
ಕರೀತಿದು ಆದ್ರೆ, ಹೋಗುಕಾಗಾ..
ಅದ್ ಪ್ರಪಂಚ..! ಆ ಬದಿ ಹೋಗುಕೇ ಆಗಾ..!
ಮೂಲ: ಉರ್ದು, ಕವಿ: ರಾಹತ್ ಇಂದೋರಿ
बुलाती है मगर जाने का नहीं
ये दुनिया है इधर जाने का नहीं
मेरे बेटे किसी से इश्क़ कर
मगर हद से गुज़र जाने का नहीं
ज़मीं भी सर पे रखनी हो तो रखो
चले हो तो ठहर जाने का नहीं
सितारे नोच कर ले जाऊंगा
मैं खाली हाथ घर जाने का नहीं
वबा फैली हुई है हर तरफ
अभी माहौल मर जाने का नहीं
वो गर्दन नापता है नाप ले
मगर जालिम से डर जाने का नहीं
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ