ಇತ್ತೀಚಿನ ಬರಹಗಳು: ಡಾ. ಎಸ್.ಎನ್. ಗಣನಾಥ (ಎಲ್ಲವನ್ನು ಓದಿ)
- ಮೂರು ವಿಲಕ್ಷಣ ಪದಗಳು - ಏಪ್ರಿಲ್ 3, 2021
ಭವಿಷ್ಯ ಎಂಬ ಪದ
ನನ್ನ ನಾಲಗೆಯಿಂದ ಹೊರಬೀಳುವ
ಮೊದಲೇ
ಅದರ ಮೊದಲಕ್ಷರ
ಭೂತಕ್ಕೆ ಜಾರಿಹೋಗಿರುತ್ತದೆ
ಮೌನ ಎಂದು ನಾನು
ಉಚ್ಚರಿಸುತ್ತ ಇರುವಾಗಲೇ
ಅದನ್ನು ಕೊಂಚ ಕೊಂಚವೇ
ಕೊಲ್ಲುತ್ತಾ ಹೋಗುತ್ತೇನೆ…
ಶೂನ್ಯ ಎಂದು
ಹೇಳುತ್ತಿರುವಾಗಲೇ
ಬೊಗಸೆಯಲ್ಲಿ ಹಿಡಿಯಲಾಗದ ಭಾವವೊಂದು
ನನ್ನಲ್ಲಿ ಮೂಡಿಬಿಡುತ್ತದೆ
ಮೂಲ : ವಿಸ್ಲಾವ ಸಿಂಬೋರ್ಸ್ಕಾ (ನೊಬೆಲ್ ಪ್ರಶಸ್ತಿ ಪುರಸ್ಕೃತ ಪೋಲಿಷ್ ಕವಯಿತ್ರಿ)
ಇಂಗ್ಲಿಷಿಗೆ : ಬಾರನ್ಜಕ್ ಮತ್ತು ಕಾವಾನಾಗ್
ಕನ್ನಡಕ್ಕೆ : ಎಸ್. ಎನ್. ಗಣನಾಥ , ಮೈಸೂರ
The Three Oddest Words
When I pronounce the word Future,
the first syllable already belongs to the past.
When I pronounce the word Silence,
I destroy it.
When I pronounce the word Nothing,
I make something no non-being can hold.
By Wisława Szymborska
Translated by S. Baranczak & C. Cavanagh
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ