ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಾಗರದೊಳಗಿನ ಮೌನ

ರೇಶ್ಮಾ ಗುಳೇದಗುಡ್ಡಾಕರ್
ಇತ್ತೀಚಿನ ಬರಹಗಳು: ರೇಶ್ಮಾ ಗುಳೇದಗುಡ್ಡಾಕರ್ (ಎಲ್ಲವನ್ನು ಓದಿ)

ವಿಶಾಲ ಬಯಲಲ್ಲಿ ಹರಡಿದ
ಬದುಕು ಚಿಗುರುವದು ಕಾಲನ
ಆರೈಕೆಯಲಿ ಕವಲೂಡೆದು
ಮನ್ನುಗ್ಗುವುದು ತಡೆಗಳ ಸರಿಸಿ …..

ಎಷ್ಟು ಮಾತುಗಳು ಲೆಕ್ಕವಿಲ್ಲದಷ್ಟು ದನಿಗಳು ,
ಲಕ್ಷಾಂತರ ಕಣ್ಣುಗಳು ,ಮನದೊಳಗಣ
ಮನಸ್ಸು ಎದುರಾದರೂ
ಒಡಲಾಳದ ಮೌನ ತಣ್ಣಗೆ ಮಡುಟ್ಟಿದೆ
ದಿನ ದಿನಕ್ಕೂ ಗಟ್ಟಿಯಾಗಿ ಮತ್ತೇ
ನಿರಾಳವಾಗಿ ಗದ್ದಲದ ಜಗತ್ತಿನಲ್ಲೆ
ಉಸಿರಾಡುತ್ತದೆ ! ನಿರುತ್ತರವಾಗಿ

ಸಂಘರ್ಷದ ಅಲೆಗಳು ನಿತ್ಯವು
ನೂರಾರು ಬಂದು ಅಪ್ಪಳಿಸುವವು
ಭಾವನೆಯ ದಡಕ್ಕೆ ,ತಿರು ತಿರುಗಿ
ಬರುವ ಉದ್ವೇಗಗಳು ಸಹ ಆರ್ಭಟಿಸಿ
ತೆಪ್ಪಗೆ ಶರಣಾಗುವವು ತಣ್ಣನೆಯ ಮೌನಕ್ಕೆ…..

ಈ ಮೌನವೆಂಬ ಗುರುವೇನು ಸಿದ್ದಾರ್ಥನ ಬುದ್ದ ಮಾಡಿದುದು ?
ರೌದ್ರವಿಸಿದ ಅಂಗುಲಿಮಾಲನನ್ನು
ಮಗುವಾಗಿಸಿದ್ದು ?
ತ್ರೇತಾಯುಗ ಸೀತೆಯನ್ನು ಕಷ್ಟಗಳಿಗೆ
ಕಲ್ಲಾಗಿಸಿ ರಾಮನಿಗೆ ದಿಟ್ಟೆಯಾಗಿಸಿದ್ದು ?
ಯುಗ ಯುಗಳಿಗೆ ಅಳಿಯದೇ ರೂಪಕವಾಗಿ
ಎಲ್ಲರೊಳಗೂ ಅಡಗಿರುವದು.

ನೋವಿನ ಪರಿಚಯ ಬೇಕು
ಜೀವಕೆ ಒಲವಿನ ಆಳ ತಿಳಿಯಲು
ಎಲ್ಲ ಭಾವಗಳಲಿ ಬೆರೆತು
ನಿರ್ಮಲವಾಗಿ ಹರಿಯಲು ಬತ್ತದೆ,
ಯುಗಯುಗಗಳಿಗೂ
ಎದೆಯೊಳಗೆ ಮೌನ
ಪ್ರತಿಧ್ವನಿಸುತ… ಹೊಸ
ಹೊಸ ಜನನಕ್ಕೆ ಆಧಾರವಾಗಿ