- ಇಸ್ರೇಲ್ ಕೆಣಕಿ ಗೆದ್ದವರಿಲ್ಲ - ಡಿಸಂಬರ್ 10, 2021
- ಅಂತಃಸ್ಪಂದನ ೧೪ - ಆಗಸ್ಟ್ 8, 2021
- ಅಂತಃಸ್ಪಂದನ ೧೩ - ಆಗಸ್ಟ್ 1, 2021
ಧ್ಯಾನಿ ಆದ ಮೇಲೆ ಶಿವ ಕೂಡ ಗೋಚರ ಆದ ನಂತರವೂ ಇಂದಿನ ದಿನದವರೆಗೆ ಧ್ಯಾನ ಮಾಡುತ್ತಿರುವೆ. ಮತ್ತು ದೇಹದ ಪ್ರತಿಯೊಂದು ಭಾಗಕ್ಕೂ ಸಂಚಾರ ಮಾಡುತ್ತಾ ಸಾಗುತ್ತಿದ್ದೆ.
ಹೀಗೆ, ಸಾಗುತ್ತಾ… ಸಾಗುತ್ತಾ,
ಬೆನ್ನುಹುರಿಯ ಕೆಳಭಾಗದ ತುದಿ(೧), ಇದರ ನಂತರ ಪಿತ್ತಜನಕಾಂಗ (೨), ಇದರ ಮೇಲಿನ ಜಠರದ ಅಗ್ನಿಯ ಭಾಗ(೩), ಶ್ವಾಸಕೋಶದ ಮಧ್ಯ ಭಾಗದ ಬೆನ್ನುಹುರಿ (೪), ಬೆನ್ನುಹುರಿಯ ಮೇಲಿನ ತುದಿಯ ಭಾಗ (೫), ತದನಂತರ ಪಿನಿಯಲ್ ಗ್ರಂಥಿ ಮತ್ತು ಹುಬ್ಬಿನ ನಡುವೆ (೬) ಕೊನೆಗೆ ನಡು ನೆತ್ತಿಯ ಮೇಲ್ಭಾಗ(೭) ಇಷ್ಟು ಜಾಗಗಳನ್ನು ಗಮನಿಸುತ್ತಾ ಕುಳಿತಿರುತ್ತಿದ್ದೆ.
ಇದನ್ನು ಚಕ್ರ ಧ್ಯಾನ ಅಥವಾ ಕುಂಡಲಿನೀ ಧ್ಯಾನ ಎನ್ನುವರು. ಮತ್ತು ಪತಂಜಲಿ ಮಹರ್ಷಿಗಳು ಭಗವದ್ಗೀತೆಯಲ್ಲಿ ಮುಚ್ಚಿ ಹೋಗಿದ್ದು, ಜನ ಸಾಮಾನ್ಯರಿಗೆ ಅನುಕೂಲ ಆಗಲೆಂದು ಆಚೆ ತಂದ ಅಷ್ಟಾಂಗ ಯೋಗದ ಸಾಧನೆ ಕೂಡ ಇದೆ ಆಗಿದೆ.
ಅವುಗಳು
- ಯಮ
- ನಿಯಮ
- ಆಸನ
- ಪ್ರಾಣಾಯಾಮ
- ಪ್ರತ್ಯಾಹಾರ
- ಧ್ಯಾನ
- ಧಾರಣ
- ಸಮಾಧಿ
ಇದು ಇಂದು ಬಹುತೇಕರಿಗೆ ತಿಳಿದಿರುವುದು ಮತ್ತು ಇದರ ಸಾಧನೆ ಹೇಗೆ ಎಂಬುದನ್ನು ಸಂಕ್ಷಿಪ್ತವಾಗಿ ನೋಡುವುದಾದರೆ
ಯಮ – ಅಸಂಬದ್ಧಗಳನ್ನು ಕಡಿಮೆ ಮಾಡುವುದು
ನಿಯಮ – ಏನು ಮಾಡಬೇಕು ಅವು
ಆಸನ – ಇದರಲ್ಲಿ ಕೆಲವು ರೀತಿಯವೆ ಇವೆ, ಸರಳವಾಗಿ ಹೇಳುವುದಾದರೆ ನಾವು ಕೂರುವ, ನಿಲ್ಲುವ ಹಾಗೆ ಮಲಗುವ ಭಂಗಿಗಳ ಮೂಲಕ ದೇಹ ವಿಷಮಯ ಆಗದಂತೆ ನೋಡಿಕೊಳ್ಳುವುದು.
ಪ್ರಾಣಾಯಾಮ – ಇದರಲ್ಲಿ ಐದು ರೀತಿಯ ಪ್ರಾಣಗಳು ಇವೆ ಅವು ಪ್ರಾಣ, ಅಪಾನ,ವ್ಯಾನ,ಉದಾನ,ಸಮಾನ ಗಳ ಬಗ್ಗೆ ಗಮನ ನೀಡಿ ಸರಿಯಾದ ಕ್ರಮದಲ್ಲಿ ಉಸಿರಾಡಿ ಉಸಿರಾಟದ ಮೇಲೆ ನಿಯಂತ್ರಣ ಸಾಧಿಸುವುದಾಗಿದೆ.
ಇಲ್ಲಿ ಇನ್ನೊಂದು ರೀತಿಯ ತಂತ್ರವನ್ನು ಉಪಯೋಗಿಸುವರು ಹೇಗೆ ಎಂದರೆ ಉಸಿರೆಳೆದು ಕೊಳ್ಳುವಾಗ ದೇಹದ ಒಳಗೆ ಆಮ್ಲಜನಕ ಬಂದಾಗ ಉಸಿರು ಕೆಳಮುಖವಾಗಿ ಬರುತ್ತದೆ ಆಗ ಶಕ್ತಿ ಆಜ್ಞಾ ಚಕ್ರದಿಂದ ಮೂಲಾಧಾರ ಕ್ಕೆ ಹರಿಯುತ್ತದೆ ಎಂದುಕೊಳ್ಳುವುದು.
ಅದೆ ರೀತಿಯಾಗಿ ಉಸಿರು ಬಿಡುವಾಗ ಶಕ್ತಿ ಮೂಲಾಧಾರ ದಿಂದ ಆಜ್ಞಾ ಚಕ್ರದವರೆಗೆ ಹರಿಯುತ್ತದೆ ಎಂದುಕೊಳ್ಳುವುದು. ಇದರ ಮಧ್ಯೆ ಅಂದರೆ ಉಸಿರು ತೆಗೆದುಕೊಂಡು ಉಸಿರು ಬಿಡುವ ನಡುವಿನ ಅವಧಿಯಲ್ಲಿ ಕೆಲವು ಸೆಕೆಂಡುಗಳ ಕಾಲ ನೀವು ಉಸಿರನ್ನು ಹಿಡಿದರೆ
ಪ್ರಾಣಾಯಾಮ ಆಗುತ್ತದೆ ಇವನ್ನು ಪೂರಕ, ಕುಂಭಕ, ರೇಚಕ ಅನ್ನುವರು.
ಈ ಒಂದು ತಂತ್ರದಲ್ಲಿ ಪ್ರಾಣಾಯಾಮ ದಿಂದ ಆಗುವ ಪ್ರಯೋಜನ ಆಗುವುದು
ಇನ್ನು ಇದರ ನಂತರದ್ದು ಪ್ರತ್ಯಾಹಾರ
ದೇಹ ಮನಸ್ಸು ಗಳಿಂದ ಒಂದು ಅಂತರವನ್ನು ಕಾಯ್ದುಕೊಳ್ಳುವುದು.
ಆರನೆಯದ್ದು ಧ್ಯಾನ ಅರ್ಥಾತ್ ಗಮನ ನೀಡುವುದು.
ಇದರ ಮೇಲಿನದ್ದು ಅಂದರೆ ಏಳನೇ ಸಾಧನೆ ಏಕಾಗ್ರತೆ ಅಂದರೆ ಧಾರಣ.
ಇನ್ನು ಕೊನೆಯದಾಗಿ ಸಮಾಧಿ, ಇದರ ಬಗ್ಗೆ ಮುಂದಿನ ಬರಹದಲ್ಲಿ ನೋಡೋಣ.
ವೈಯಕ್ತಿಕವಾಗಿ ಅನಿಸುತ್ತದೆ ಅಷ್ಟಾಂಗ ಯೋಗದಲ್ಲಿ ಐದು ಸಾಧನೆಗಳು ಬಹುಷಃ ದೇಹ ಮತ್ತು ಮನಸ್ಸನ್ನು ಒಂದು ಐಕ್ಯತೆಗೆ ತರಲು ಇರುವ ತಂತ್ರಗಳು ಎಂದು.
ಮೇಲೆ ಹೇಳಿದಂತೆ ಚಕ್ರಗಳ ಧ್ಯಾನ ಮಾಡಲು ಮೊದಲುಗೊಳ್ಳಲು ಅಷ್ಟಾಂಗ ಯೋಗದಲ್ಲಿ ನೇರವಾಗಿ ಆರನೆಯ ಹಂತದಿಂದ ಆರಂಭವಾಯಿತು ಇವನ ಸಾಧನೆ.
ಕ್ರಮ ಸಂಖ್ಯೆ ಹಾಕಿ ಮೇಲೆ ಹೇಳಿದ ದೇಹದ ಭಾಗಗಳನ್ನು ಯೋಗದಲ್ಲಿ ಪ್ರಧಾನವಾದ ಏಳು ಚಕ್ರಗಳೆಂದು ಗುರುತಿಸುವರು, ಅವು ಈ ಕೆಳಗಿನಂತಿವೆ.
(೧) ಮೂಲಾಧಾರ
(೨) ಸ್ವಾಧಿಷ್ಟಾನ
(೩) ಮಣಿಪೂರಕ
(೪) ಅನಾಹತ
(೫) ವಿಶುದ್ಧ
(೬) ಆಜ್ಞೇಯಾ ಅಥವಾ ಆಜ್ಞಾ
(೭) ಸಹಸ್ರಾರ
ಸೂಚನೆ : ಇಲ್ಲಿ ಹೇಳಿದ ಸಾಧನೆಯನ್ನು ವೈಯಕ್ತಿಕವಾಗಿ ಒಬ್ಬರ ಮಾರ್ಗದರ್ಶನ ಇಲ್ಲದೆ ಅಭ್ಯಾಸ ಮಾಡುವುದು ಬೇಡ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್