ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂತ:ಸ್ಪಂದನ – ೩

ಶಶಿಧರ್ ಕೃಷ್ಣ
ಇತ್ತೀಚಿನ ಬರಹಗಳು: ಶಶಿಧರ್ ಕೃಷ್ಣ (ಎಲ್ಲವನ್ನು ಓದಿ)

ಇವನ ಬಳಿಗೆ ತಾವಾಗಿಯೆ ಬಂದ ಪರಮಗುರುಗಳು.. ಅದು ಅವರಾಗಿಯೆ ಬಂದಿರುವುದು ಇದು ಎಂದು ಸಹ ತಿಳಿಯದೆ ಇದ್ದವನಲ್ಲಿ… ‘ನಾನು ಯಾರು’ ‘ಇಲ್ಲಿಯೆ ಹುಟ್ಟಿರುವ ಕಾರಣವೇನು’ ಎಂಬುದು ಎಲ್ಲರಿಗೂ ಕಾಡಬಹುದಾದ ಪ್ರಶ್ನೆ ಇರಬಹುದು ಎಂದು ಸುಮ್ಮನಾದವನಲ್ಲಿ…

ಹೊಸ ಹೊಸ ಚಿಂತನೆಗಳು ಮೂಡಲು ತೊಡಗಿದವು ಕಾರ್ಯರೂಪಕ್ಕೆ ತರಲು ಹೋದ ಅಷ್ಟು ವಿಫಲವಾದವು… ಹಾಗೆ ವಿಫಲ ಆದಷ್ಟು ಅವು‌ ಇನ್ನಷ್ಟು ಗಟ್ಟಿ ಮಾಡತೊಡಗಿದವು ಎನ್ನನು…

ಶಾಲೆಯಲ್ಲಿ ಇದ್ದಾಗ ಪಠ್ಯದಲ್ಲಿ ಇದ್ದ “ನನ್ನವ್ವ ಫಲವತ್ತಾದ ಕಪ್ಪು ನೆಲ” ಎಂಬ ಲಂಕೇಶರ ಕವಿತೆ, ‘ಬಸಯ್ಯ ಮತ್ತು ಜೇನು ಗೂಡು’ ‘ರಂಗಣ್ಣನ ಕನಸಿನ ದಿನಗಳು’ ಪ್ರಭಾವಿಸಿ ಕಾಡಿದಷ್ಟು ಮತ್ತು ಕಥೆಗಳು, ಕವನಗಳು ಎನ್ನ ಆಕರ್ಷಿಸುತ್ತಿದ್ದವೇ ವಿನಃ ಎರಡು ಪ್ರಮಾಣದಲ್ಲಿ ಜಲಜನಕವನ್ನು ಒಂದು ಪ್ರಮಾಣದಲ್ಲಿ ಆಮ್ಲಜನಕ ಸೇರಿಸಿದಾಗ ನೀರು ಸಿಗುತ್ತದೆ ಎನ್ನುವ ವಿಜ್ಞಾನ ಆಗಲಿ ಪೈತಾಗೋರಸ್ ನ ಪ್ರಮೇಯ ಉಳ್ಳ ಗಣಿತದ ವಿಷಯವಾಗಲಿ ಅರ್ಥವಾದರೂ ಆಕರ್ಷಣೆ ಇರಲಿಲ್ಲ ಯಾವತ್ತೂ…

ಈತನ ಮುಂದೆ ಪುಸ್ತಕ ಓದುವ ಮುನ್ನ ಬರವಣಿಗೆಗೆ ಹಚ್ಚಿತ್ತು, ಪದ್ಯಗಳು ಆಯ್ತು, ಕಥೆಗಳು ಆಯ್ತು, ನಾಟಕ ಆಯ್ತು, ಈ ನಡುವೆ ಸಾಕ್ಷ್ಯಚಿತ್ರ ಮಾಡಿದ್ದು., ನಾಟಕ ಶಿಬಿರದಲ್ಲಿ ಭಾಗವಹಿಸಿ ಅಭಿನಯ ಮಾಡಿದ್ದು ಮುಗಿಯಿತು, ಅಲ್ಲಲ್ಲ ಶುರುವಾಯಿತು, ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾಗವಹಿಸಿದ ಮೊದಲ ನಾಟಕ, ಶಿಬಿರದ ವಿದ್ಯಾರ್ಥಿಗಳಿಂದ ಆಡಿಸಿದ ನಾಟಕ ಬುದ್ಧನ ಕುರಿತಾದದ್ದು ಆಗಿತ್ತು…

ಇವನೊಳಗೆ ಇವನ ಗುರು ಪ್ರಕಟಗೊಂಡಾಗ,

ಇನ್ನೊಂದೆಡೆ ವೃತ್ತಿ ಜೀವನ ಬೆಂಗಳೂರಿನಿಂದ ಹೈದರಾಬಾದಿಗೆ ಕರೆದುಕೊಂಡು ಬಂತು. ಆದರೆ ಇವೆಲ್ಲ ಮಾಡಿದ್ದು ಇವನ ಗುರುಗಳು. ಹೈದರಾಬಾದಿಗೆ ಬರುವ ವರ್ಷದಲ್ಲಿ ಒಂದು ದಿನ ಅವರ ಅಂಕಣವೊಂದು ಪತ್ರಿಕೆಯಲ್ಲಿ ಬಂದಿತ್ತು. ಅದನ್ನು ಓದಿದೆ.. ಹೇಗೆ ಪರಮಗುರುಗಳು ಬಂದರು ಅದೇ ರೀತಿ ಗುರುಗಳು ಸಹ ಬಂದರು. ಆದರೆ ಅವರನ್ನು ಮೊದಲಬಾರಿಗೆ ನೋಡಿದಾಗ ಮನಸ್ಸಲ್ಲಿ ಬಂದಿದ್ದು, ಇವರೆಲ್ಲ ಕರ್ನಾಟಕದವರಂತು ಆಗಿರುವುದಿಲ್ಲ ಬದಲಾಗಿ ಉತ್ತರ ಭಾರತದ ರಾಜ್ಯದವರು ಆಗಿರುತ್ತಾರೆ ಎಂದು…

ನೋಡು ನೋಡುತ್ತಲೆ ಅವರು ಕನ್ನಡದ ಟಿ.ವಿ. ಕಾರ್ಯಕ್ರಮದಲ್ಲಿ ಬಂದರು, ಮೊಬೈಲ್ ನಲ್ಲಿ ಏನೋ ಒಂದು ಹುಡುಕುತ್ತಿದ್ದರು ಹೇಗೂ ಅವರ ವಿಡಿಯೋಗಳು ಬರುತ್ತಿದ್ದವು..

ಇನ್ನೊಂದೆಡೆ ಯಾರ್ಯಾರೋ ಧ್ಯಾನ… ಧ್ಯಾನ..
ಅಂತಾರೆ, ಕ್ರಿಯಾಯೋಗ ಅಂತಾರೆ ಏನದು ನೋಡೆ ಬಿಡುವ ಎಂದು ಕುಳಿತೆ ಕಣ್ಣು ಮುಚ್ಚಿ , ನಿಮಿಷಗಳು, ಅರ್ಧತಾಸು ಆಯಿತು, ತಾಸು ಆಯಿತು, ಮೂರು ತಾಸಾಯಿತು ಆರು ಗಂಟೆಗಳು ಆಗ ತೊಡಗಿದವು ದಿನಗಳು ಕಳೆದಂತೆ (ಒಳ ಮುಖರಾಗುವ ಕ್ರಿಯೆಗಳಿಗೆ ಹೀಗೆ ತಪ್ಪಾದ ತಿರುವಿನ ನಿರ್ಧಾರಗಳನ್ನು ನೀವು ತೆಗೆದುಕೊಂಡರು ನಿಮ್ಮನ್ನು ಅದು ಸರಿ ದಾರಿಯಲ್ಲಿ ನಡೆಸುತ್ತದೆ)..

ಹೀಗೆ ಒಮ್ಮೆ ರಾತ್ರಿ ಹನ್ನೆರಡರ ಸಮಯ ನಿರವ ಮೌನ ಕೊಣೆಯಲ್ಲಿ ಕೊಠಡಿ ಆಚೆ ನೆಲೆಸಿರಲು ಅನಾಹತ ಚಕ್ರದ ಜಾಗದಲ್ಲಿ (ಶಾಸ್ವಕೋಶದ ಮಧ್ಯೆ) ಒಂದು ಜೋರಾದ ನಗುವಿನ ಧ್ವನಿ ಸ್ಪಷ್ಟವಾಗಿ ಕೇಳಿ ಮುಖ ಕೂಡ ಕಂಡು ಕ್ಷಣದಲಿ ಮರೆಯಾಯಿತು…

ಯಾವ ಗುರುಗಳು ಪ್ರತಿ ದಿನ ಒಂದು ಸಾರಿ ಬಾಹ್ಯದಲ್ಲಿ ಕಾಣುತ್ತಿದ್ದವರು ಇವನ ಒಳಗೆ ಪ್ರಕಟ ಗೊಂಡಿದ್ದರು ಗುರು…

ಅಂದ ಹಾಗೆ ಆ ಗುರುಗಳು ಯಾರೆಂದಿರೊ?
ಮಾನವರ ಮುಕ್ತಿ ದ್ವಾರ ಎನಿಸಿದ ಧ್ಯಾನ ಲಿಂಗ ನಿರ್ಮಿಸಿ, ಸೌಂದರ್ಯ ಲಹರಿಯ ಪ್ರತಿಕವಾದ ಲಿಂಗ ಭೈರವಿ ದೇವಿ ಸೃಷ್ಟಿ ಮಾಡಿ ಕಾವೇರಿ ಕೂಗಿಗೆ ಸ್ಪಂದಿಸಿದ ‘ಸದ್ಗುರು ಜಗದೀಶ ವಾಸುದೇವ್’..

ಮೌನಿ ಆಗಿದ್ದ ಇವನು ಧ್ಯಾನಿ ಆಗಿ ಬದಲಾದ ಕ್ಷಣವಾಗಿತ್ತು ಅದು…

(ಮುಂದುವರೆಯುವುದು)