- ಇಸ್ರೇಲ್ ಕೆಣಕಿ ಗೆದ್ದವರಿಲ್ಲ - ಡಿಸಂಬರ್ 10, 2021
- ಅಂತಃಸ್ಪಂದನ ೧೪ - ಆಗಸ್ಟ್ 8, 2021
- ಅಂತಃಸ್ಪಂದನ ೧೩ - ಆಗಸ್ಟ್ 1, 2021
ಚಕ್ರಗಳು
ನಮ್ಮ ದೇಹದಲ್ಲಿ ಎಪ್ಪತ್ತೆರಡು ಸಾವಿರ ನರನಾಡಿಗಳು ಇರುತ್ತವೆ. ಇದರಲ್ಲಿ ಮೂವತ್ತಾರು ಸಾವಿರ ನಾಡಿಗಳು ದೇಹದ ಎಡಭಾಗದಲ್ಲಿ ಹಾಗೂ ಮೂವತ್ತಾರು ಸಾವಿರ ನಾಡಿಗಳು ದೇಹದ ಬಲಭಾಗದಲ್ಲಿ ಇರುತ್ತವೆ, ಇವನ್ನು ಇಡ, ಪಿಂಗಳ/ ಚಂದ್ರ, ಸೂರ್ಯ/ ಎಡ, ಬಲ ನಾಡಿಗಳು ಎಂದು ಕರೆಯುವುದು ಗೊತ್ತಿದೆ ನಿಮಗೆ.
ಇವುಗಳು ನೂರ ಹದಿನಾಲ್ಕು ಕೇಂದ್ರ ಪ್ರದೇಶಗಳಲ್ಲಿ ಸಂದಿಸುತ್ತವೆ (ಎರಡು ತ್ರಿಭುಜಗಳ ಯುಕ್ತಿ). ಇನ್ನು ಪ್ರಧಾನವಾಗಿ ಇವನ್ನು ಏಳು ಪ್ರದೇಶದಲ್ಲಿ ಚಕ್ರಗಳಾಗಿ ಗುರುತಿಸುವರು. ವಾಸ್ತವದಲ್ಲಿ ಅವು ತ್ರಿಕೋನವಾಗಿ ಇರುತ್ತವೆ, ಆದರೆ ಅವನ್ನು ಗುರುತಿಸುವುದು ಚಕ್ರಗಳ ರೂಪದಲ್ಲಿ.
ಮೊದಲಿನಿಂದ ಆರನೇ ಚಕ್ರದವರೆಗೆ, ನೂರೆಂಟು ಕೇಂದ್ರಗಳು ಬರುತ್ತವೆ, ಉಳಿದ ನಾಲ್ಕು ತಾವಾಗಿಯೆ ಅವುಗಳ ಕಾರ್ಯ ಮಾಡಿಕೊಳ್ಳುತ್ತವೆ. ಇನ್ನು ಉಳಿದ ಎರಡು ದೇಹದಿಂದ ಆಚೆ ಇದ್ದು ಸಹಜವಾಗಿ, ಆವಾಗಿಯೆ ಅರಳುತ್ತವೆ ಹಾಗಾಗಿ ನೂರೆಂಟು ಚಕ್ರಕ್ಕೆ ಕೆಲಸ ಮಾಡುವುದು,
ಹೇಗೆ ಅಂದರೆ ನೂರೆಂಟು ಬಾರಿ ಸೂರ್ಯ ನಮಸ್ಕಾರ ಇರಲಿ, ಮಂತ್ರ ಉಚ್ಛಾರಣೆ ಇರಬಹುದು, ಈ ರೀತಿ ಇನ್ನು ಇತ್ಯಾದಿ ಕೇಳಿರಬಹುದು ನೀವು.
ಈ ಪ್ರಧಾನ ಏಳು ಚಕ್ರಗಳು
೧ ಮೂಲಾಧಾರ
೨ ಸ್ವಾಧಿಷ್ಟಾನ
೩ ಮಣಿಪೂರಕ
೪ ಅನಾಹತ
೫ ವಿಶುದ್ಧ
೬ ಆಜ್ಞೇಯಾ ಅಥವಾ ಆಜ್ಞಾ
೭ ಸಹಸ್ರಾರ
೧. ಮೂಲಾಧಾರ – ಇದು ದೇಹದ ಆಧಾರ, ಒಂದು ಕಟ್ಟಡಕ್ಕೆ ತಳಪಾಯ ಹೇಗೆ ಆಧಾರವೋ ಆ ರೀತಿ ದೇಹಕ್ಕೆ ಮೂಲದ ಆಧಾರ ಈ ಚಕ್ರ. ಇದು ಹೊರಹೊಮ್ಮಿಸುವ ಬಣ್ಣ ಕೆಂಪು, ಈ ಚಕ್ರ ಜಾಗ್ರತೆ ಆಗಿ ಶಕ್ತಿ ಪ್ರಧಾನವಾಗಿದ್ದರೆ, ಅಂತವರಿಗೆ ಜೀವನದಲ್ಲಿ ತಿನ್ನುವುದು ಮಲಗುವುದಷ್ಟೆ (ಊಟ, ನಿದ್ರೆ ಗಳು) ಮುಖ್ಯ.
ಊಟ, ನಿದ್ರೆಯಲ್ಲಿ ಸಮಸ್ಯೆ ಇದೆ ಅನ್ನುವವರು ಈ ಚಕ್ರ ಗಮನಿಸಬೇಕು.
೨. ಸ್ವಾಧಿಷ್ಟಾನ – ಈ ಚಕ್ರ ಜಾಗರೂಕ ಆಗಿದ್ದು ಶಕ್ತಿ ಹರಿಯುವಿಕೆ ಪ್ರಧಾನ ಆಗಿದ್ದರೆ, ಆಗ ಜನರು ಬದುಕನ್ನು ಸ್ವಾದಿಷ್ಟವಾಗಿ, ಸುಖಮಯವಾಗಿ, ಮನೋರಂಜನಾ ರೀತಿಯಲ್ಲಿ, ಜೀವಿಸಲು ಇಚ್ಛಿಸುವವರು, ಇದು ಹೊರಹೊಮ್ಮಿಸುವ ಬಣ್ಣ ಕೇಸರಿ.
ಇನ್ನು ಇಲ್ಲಿ ಶಕ್ತಿ ಜಾಗ್ರತೆ ಇಲ್ಲದೆ ಹೊದಲ್ಲಿ, ಅಂತವರಿಗೆ ಚರ್ಮಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು, ಹಾಗೂ ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಸ್ಯೆ ಅಥವಾ ಅವರ ಋತು ಚಕ್ರ ಏರುಪೇರಾಗಿ ಅದರಿಂದ, ಅವರಿಗೆ ಮೈಗ್ರೇನ್ ನಂತಹ ಸಮಸ್ಯೆಗಳನ್ನು ತರಬಹುದು, ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶ, ದೇಹದ ಎಪ್ಪತ್ತು ಭಾಗದಷ್ಟು ಇರುವ ನೀರನ್ನು ಸರಿದೂಗಿಸಲು, ಈ ಭಾಗ ಪ್ರಧಾನ ಆಗುತ್ತದೆ. ಇದರಿಂದ ಮಧುಮೇಹ ಸಮಸ್ಯೆ ನಿವಾರಣೆ ಮಾಡಬಹುದು, ಬಹಳಷ್ಟು ಜನರಿಗೆ ಮಧುಮೇಹದ ಸಮಸ್ಯೆ ಬಂದಿದ್ದು, ನಂತರ ಕುಂಡಲಿನಿ ಧ್ಯಾನದ ಸಾಧನೆಯ ಮೂಲಕ ಸಮಸ್ಯೆ ನಿವಾರಣೆ ಮಾಡಿಕೊಂಡವರು ಬಹಳಷ್ಟು ಜನ ದೊರೆಯುವರು ನಮಗೆ.
ಇನ್ನು ಇದರ ಮೇಲಿನ ಚಕ್ರ ಮಣಿಪೂರಕ, ಇಲ್ಲಿ ಶಕ್ತಿ ಪ್ರಧಾನವಾದಲ್ಲಿ, ಅಂತವರು ತಾವು ಇರುವ ಕಾರ್ಯಕ್ಷೇತ್ರದಲ್ಲಿ, ಹಾಗೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವರು, ಹಳದಿ ಬಣ್ಣವನ್ನು ಈ ಚಕ್ರ ಹೊರಹಾಕುತ್ತದೆ.
ಈ ಚಕ್ರ ಜಾಗ್ರತೆ ಇಲ್ಲದೆ ಹೋದಲ್ಲಿ, ಏನಾದರೂ ಮಾಡಲು ಹಿಂಜರಿಕೆ ಇರುತ್ತದೆ. ಮತ್ತು ಅಜೀರ್ಣದ ಸಮಸ್ಯೆಗಳು ಬರುತ್ತವೆ.
ಇದಾದ ಮೇಲೆ ನಾಲ್ಕನೇ ಚಕ್ರ ಅನಾಹತ, ಅಥವಾ ಹೃದಯ ಚಕ್ರ. ಇದು ಹೊರಹೊಮ್ಮಿಸುವ ಬಣ್ಣ ಹಸಿರು, ಇದಕ್ಕೆ ಕಾರಣ ಇದು ಭಾವನೆಗಳ ಭಂಡಾರ ಈ ಚಕ್ರದ ಗುಣವೆಂದರೆ ವ್ಯಕ್ತಿಯನ್ನು ಕ್ರಿಯಾತ್ಮಕವಾಗಿ ಆಲೋಚನೆ ಮಾಡುವಂತೆ ಮಾಡುತ್ತದೆ, ವ್ಯಕ್ತಿಯನ್ನು ಕಲೆಗಾರ ಆಗುವಂತೆ ಮಾಡುತ್ತದೆ ಈ ಚಕ್ರ.
ಮತ್ತು
ಈ ಚಕ್ರ ಕೆಳಗಿನ ಮೂರು ಚಕ್ರಗಳಿಗೆ ಮತ್ತು ಮೇಲಿನ ಮೂರು ಚಕ್ರಗಳಿಗೆ ಸೇತುವೆ.
ಸಾಮಾನ್ಯ ಜೀವನ ನಡೆಸಲು ಇರಬೇಕಾದ ಅಂಶಗಳು, ಬಹುತೇಕರಿಗೆ ಜಾಗ್ರತೆಯಾಗಿ ಇರುತ್ತವೆ, ಇದರ ಕಾರಣ ಕೆಳಗಿನ ಮೂರು ಮೂಲಭೂತ ಚಕ್ರಗಳ ಜಾಗರೂಕ ಸ್ಥಿತಿ.
ಹಾಗೆ ಮಾನವರನ್ನು ಹೊರತು ಪಡಿಸಿ, ಇತರೆ ಜೀವಿಗಳಿಗೆ ಈ ಮೂರು ಚಕ್ರಗಳು ಸಹಜವಾಗಿ ಜಾಗರೂಕವಾಗಿ ಇರುತ್ತವೆ. ಆದ್ದರಿಂದ ಅವಕ್ಕೆ ಮೊದಲು ಆಹಾರ, ನಂತರ ನಿದ್ರೆ, ನಂತರದ್ದು ಮೀಲನ, ತಿಂದಿದ್ದು ಜೀರ್ಣಿಸಿಕೊಳ್ಳಲು, ಜೀರ್ಣಕ್ರಿಯೆ ವ್ಯವಸ್ಥೆಯನ್ನು ಅದ್ಬುತವಾಗಿ ಇರಿಸಿಕೊಳ್ಳುತ್ತವೆ, ನಿರಂತರ ಚಟುವಟಿಕೆಗಳ ಮೂಲಕ.
ನೀವು ಇನ್ನೊಂದು ಗಮನಿಸಿರಬಹುದು, ಸಾಹಿತಿಗಳು, ಕವಿಗಳಲ್ಲಿ ಸಹಜವಾಗಿ ಅವರಲ್ಲಿ ಯಾವಾಗಲೂ ಒಳ ಮುಖರಾಗುವ ಒಂದು ತುಡಿತ ಇರುತ್ತದೆ, ಇದಕ್ಕೆ ಕಾರಣ ನಾಲ್ಕನೇ ಚಕ್ರ ಅನಾಹತ, ಜಾಗರೂಕವಾಗಿ ಶಕ್ತಿ ಮೇಲ್ಮುಖವಾಗಿ ಹರಿಯುವಿಕೆ.
ಇನ್ನುಳಿದ ಚಕ್ರಗಳ ಬಗ್ಗೆ ಮುಂದಿನ ಬರಹದಲ್ಲಿ ನೋಡೋಣ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್