- ಇಸ್ರೇಲ್ ಕೆಣಕಿ ಗೆದ್ದವರಿಲ್ಲ - ಡಿಸಂಬರ್ 10, 2021
- ಅಂತಃಸ್ಪಂದನ ೧೪ - ಆಗಸ್ಟ್ 8, 2021
- ಅಂತಃಸ್ಪಂದನ ೧೩ - ಆಗಸ್ಟ್ 1, 2021
ಅನಾಹತ ಚಕ್ರ ಸೇತುವೆ ಆಗಿರುತ್ತದೆ, ಕೆಳಗಿನ ಮೂರು ಚಕ್ರಗಳಿಗೆ ಮತ್ತು ಮೇಲಿನ ಮೂರು ಚಕ್ರಗಳಿಗೆ ಎಂಬಲ್ಲಿಗೆ ಬರಹ ನಿಂತಿತ್ತು.
ಇಲ್ಲಿ ಇನ್ನೊಂದು ಮಾತು, ಎಲ್ಲ ಚಕ್ರಗಳಲ್ಲಿ ಎಡ, ಬಲ ನಾಡಿಗಳು ಸಂದಿಸುತ್ತವೆಯಾದರೂ, ಈ ಚಕ್ರದ ಮಧ್ಯೆ ಒಂದು ಬಿಂದು ಮತ್ತು ಇಲ್ಲಿ ಇನ್ನೊಂದು ನಾಡಿ ಇರುವುದು (ಅದರ ಬಗ್ಗೆ ಮುಂದೆ ನೋಡೋಣ).
ಇನ್ನು ಅನಾಹತ ಚಕ್ರದ ಮೇಲೆ ದೇಹವನ್ನು ಪರಿಶುದ್ಧವಾಗಿ ಇಡುವ ವಿಶುದ್ಧ ಚಕ್ರ ಇರುವುದು. ಇಲ್ಲಿ ಶಕ್ತಿ ಜಾಗರುಕವಾಗಿ ಪ್ರಧಾನ ಆಗಿದ್ದಲ್ಲಿ, ಅಂತವರು ಇತರರಿಗಿಂತ ಹೆಚ್ಚು ಸಾಮಾರ್ಥ್ಯ ಹೊಂದಿರುತ್ತಾರೆ ಎಲ್ಲಾ ವಿಷಯಗಳಲ್ಲಿ. ಮತ್ತು ಇದರ ವಿಶೇಷತೆ ಎಂದರೆ ಅದು ನಿಮಗೆ ಬೇಕಾದ ಸಂಗತಿಗಳನ್ನು ನಿಮ್ಮೊಳಗೆ ಇಳಿಸಲುಬಹುದು, ಬೇಡವಾಗಿದ್ದಲ್ಲಿ ಅದನ್ನು ಹೊರಹಾಕಲು ಬಹುದು ಹಾಗಾಗಿ ಗಂಟಲಿನ ಭಾಗದ ಸ್ಥಾನ ಬೆನ್ನುಹುರಿಯಲ್ಲಿ ಇದಕ್ಕೆ.
ಸಾಮಾನ್ಯ ಜನರನ್ನು ಎತ್ತರದ ಸ್ಥರಕ್ಕೆ ಕೊಂಡೊಯ್ಯುವ ಸೋಸುವ ಸಲಕರಣೆ, ಇದಕ್ಕೆ.., ಶಿವ ವಿಷವನ್ನು ಕುಡಿದು ಇಲ್ಲಿ ಇರಿಸಿಕೊಂಡ ಎನ್ನುವ ಉದಾಹರಣೆ ಕೊಡುತ್ತಾ, ಅವನು ಇಲ್ಲಿ ಇರುತ್ತಾನೆ ಎನ್ನುವರು, ಇದು ಹೊರಹೊಮ್ಮಿಸುವ ಬಣ್ಣ ಕಡು ನೀಲಿ.
ಇದರ ಮೇಲೆ ಬರುವ ಚಕ್ರ ಆಜ್ಞೇಯಾ ಅಥವಾ ಆಜ್ಞಾ ಚಕ್ರ ಮೂರನೆ ಕಣ್ಣು ಎಂದು ಕರೆಯಲ್ಪಡುತ್ತದೆ. ಇಲ್ಲಿ ಶಕ್ತಿ ಜಾಗರುಕವಾಗಿ ಪ್ರಧಾನ ಆಗಿರುವವರು, ಎಲ್ಲಾ ವಿಷಯಗಳಲ್ಲಿ ಮೂಲವಾಗಿ ಇರುವುದರ ಬಗ್ಗೆ ಮಾತಾನಾಡಬಲ್ಲರು. ಮತ್ತು ಯಾವುವು ಬೆಳಕನ್ನು ತಡೆಯುತ್ತವೆ ಅವು ಬಾಹ್ಯ ಕಣ್ಣಿಗೆ ಕಾಣುತ್ತವೆ, ಆದರೆ ಈ ಚಕ್ರ ಜಾಗ್ರತೆ ಇದ್ದವರು ಬೆಳಕು ಯಾವುದರಲ್ಲಿ ಹರಿಯುತ್ತದೆ ಅವನ್ನು ಸಹ ನೋಡುವರು.
ಮತ್ತು ನಮ್ಮ ಅನ್ನಮಯ ಕೋಶ (ದೇಹ) ಇದರ ಕಣಕಣದಲ್ಲೂ ಇರುವ ಮನೋಮಯ ಕೋಶ (ಮನಸ್ಸು) ಒಂದು ರೀತಿಯಲ್ಲಿ ನೆನಪಿನ ರಾಶಿಯಿಂದ ನಿರ್ಮಿತವಾಗಿದೆ.
ಗಂಡಿನ ದೇಹದ ಜಲ (ವೀರ್ಯ), ಹೆಣ್ಣಿನ ದೇಹದ ಭೂಮಿಯನ್ನು (ಅಂಡಾಣು), ಸ್ಪರ್ಶಿಸಿದಾಗ ಜೀವಾಣು ಹುಟ್ಟಿ ಬರುವುದು ಗೊತ್ತೆ ಇದೆ ನಿಮಗೆ, ಆ ರೀತಿಯ ಜಲ ಮತ್ತು ಭೂಮಿ ಒಂದು ಮಟ್ಟದ ನೆನಪಿನಿಂದ ಉಂಟಾಗಿದ್ದು ನಮ್ಮ ದೇಹ ನೆನಪು ಇಲ್ಲದ್ದನ್ನು ಗುರುತಿಸಲಾರದು.
ಆಜ್ಞಾ ಚಕ್ರ ತೆರೆದುಕೊಂಡವರು ಈ ರೀತಿಯ ದೇಹ ಉಂಟಾಗಲು ಸಹಕಾರ ನೀಡಿದ ಎಲ್ಲ ಪೂರ್ವಜರ ನೆನಪನ್ನು ಬದಿಗಿಟ್ಟು, ವಿಶ್ವದ ತಾಯಿ, ತಂದೆ ಎನಿಸಿದ ಚಂದಿರ, ಸೂರ್ಯ ರಿಂದ ವಿಷಯ ಗ್ರಹಿಸುವರು.
ಯಾವಾಗ ಈ ರೀತಿ ಆಗುವುದು, ಈ ಚಕ್ರದ ತರಂಗದ ಒಂದು ಗೆರೆಯಿಂದ ಪೀನಿಯಲ್ ಗ್ರಂಥಿಗೆ ಸಂಪರ್ಕ ಹೊಂದಿ ಅವರದ್ದೆ ಒಂದು ದಾರಿ ನಿರ್ಮಾಣ ಪ್ರಕೃತಿಯಿಂದ ಆಗುವುದು ಅಂದರೆ ಅರ್ಥಾತ್ ನಡು ಮೆದುಳು ಜಾಗೃತವಾಗುವುದು೧, ಇವೆರಡೂ ಸೇರಿ ನೆತ್ತಿಯ ಮೇಲಿನ ಬ್ರಹ್ಮ ರಂಧ್ರವನ್ನು೨, ಜಾಗ್ರತೆ ಮಾಡುತ್ತವೆ
ಇದು ಹೊರಹೊಮ್ಮಿಸುವ ಬಣ್ಣ ತಿಳಿ ನೀಲಿ.
ಇಲ್ಲಿ ಇನ್ನೊಂದು ವಿಶೇಷವಿದೆ ಸಾಮಾನ್ಯವಾಗಿ ಆಜ್ಞಾ ನಂತರದ ಚಕ್ರ ಸಹಸ್ರಾರ ಎನ್ನುವರು. ಆದರೆ ಇವೆರಡರ ಮಧ್ಯೆ ಒಂಭತ್ತು ಚಕ್ರಗಳು ಇರುತ್ತವೆ. ನೆತ್ತಿಯ ಮೇಲೆ ಇರುವ ಬ್ರಹ್ಮರಂಧ್ರ ದ ಕೆಳಗೆ ಗುರು ಚಕ್ರ (ಹಳದಿ ಬಣ್ಣ) ಇರುತ್ತದೆ. ಅಂದರೆ ನಿಮ್ಮ ಗುರು ಇಲ್ಲಿ ಇರುತ್ತಾರೆ ಎಂಬ ಮಾತಿದೆ, ಶಕ್ತಿ ಇಲ್ಲಿಗೆ ಮುಟ್ಟಿದ ನಂತರ ಬ್ರಹ್ಮ ರಂಧ್ರ ಜಾಗ್ರತೆ ಆಗುವ ಮೂಲಕ ಸಹಸ್ರಾರವನ್ನು ಮುಟ್ಟುವುದು. ಹಾಗಾಗಿ ಯೋಗದಲ್ಲಿ ಗುರು ಒಬ್ಬ ವ್ಯಕ್ತಿ ಅಲ್ಲ, ಒಂದು ಸಾಧ್ಯತೆ ಎಂದು ಹೇಳುವರು.
ಇನ್ನು ಕೊನೆಯದಾಗಿ ದೇಹದ ಮೇಲೆ ಇರುವುದು ಸಹಸ್ರಾರ ಚಕ್ರ ಇಲ್ಲಿ ಶಕ್ತಿ ಜಾಗರುಕವಾಗಿ ಇದ್ದಲ್ಲಿ ನೀವು ಕಾರಣ ಇಲ್ಲದೆ ಪರಮಾನಂದ ದಲ್ಲಿ ತೇಲಾಡುವಿರಿ (ನಿಮ್ಮೊಳಗೆ ನೀವು ಐದಾರು ವರುಷದವರಾಗಿದ್ದಾಗಿನ ಸ್ಥಿತಿ ನಿರ್ಮಾಣವಾಗುವುದು).
ಈ ಚಕ್ರ ಜಾಗರುಕವಾಗಲು ನೀವು ಬದುಕನ್ನು ತೀವ್ರವಾಗಿ ಪ್ರೀತಿಸಿದರೆ, ಸಹಜವಾಗಿ ಜಾಗ್ರತೆ ಆಗಿರುತ್ತದೆ. ಈ ಚಕ್ರದ ಬಣ್ಣ ಗುಲಾಬಿ light pink.
ಆದರೆ ಸಾಧನೆ ಯಿಂದ ಒಬ್ಬರಿಗೆ, ಶಕ್ತಿ ಮೂಲಾಧಾರ ಚಕ್ರದಿಂದ ಆಜ್ಞಾ ವರೆಗೆ ಬಂದು ಸಹಸ್ರಾರ ಚಕ್ರವನ್ನು ಮುಟ್ಟಿದ್ದರೆ, ಆಗ ಒಂದು ತಂತ್ರಜ್ಞಾನ ಉಳ್ಳ ಅದ್ಬುತ ಯಂತ್ರ ಪ್ರಪಂಚಕ್ಕೆ ತೆರೆದುಕೊಳ್ಳುವ ಕ್ರಿಯೆ ಆಗುತ್ತದೆ. ಅಂದರೆ ನಿಮ್ಮೊಳಗೆ ಇರುವ ಶಕ್ತಿ ಬ್ರಹ್ಮಾಂಡದ ಕಾಸ್ಮಿಕ್ ಶಕ್ತಿ ಜೊತೆಗೆ ಒಂದಾಗುವ ಮಹತ್ವದ ಕ್ಷಣ…, ಅರ್ಥಾತ್ ಜ್ಞಾನದ ಉದಯ*೩.
ಇನ್ನು ಈ ಚಕ್ರಗಳಲ್ಲಿ ಹರಿವ ಶಕ್ತಿಯನ್ನು ಕುಂಡಲಿನಿ ಎನ್ನುವರು ಹಾಗಾದರೆ ಏನಿದು? ಕುಂಡಲಿನಿ ನೋಡೋಣ ಮುಂದಿನ ಬರಹದಲ್ಲಿ.
- ೧* – ನಾಲ್ಕನೇಯ ಕಣ್ಣು (ತಲೆಯ ಹಿಂಭಾಗದಲ್ಲಿ ಇರುವುದು).
- ೨* – ಐದನೇ ಕಣ್ಣು ಆದರೆ ಇದನ್ನು ಬ್ರಹ್ಮರಂಧ್ರ ಎಂದು ಕರೆಯುತ್ತಾರೆ.
- ೩*- ಆರನೇ ಕಣ್ಣು, ಸಹಸ್ರಾರ ಚಕ್ರ ಜಾಗತ್ರೆ ಆದ ಸ್ಥಿತಿ ಅಥವಾ ಜ್ಞಾನೋದಯ ಆಗಿರುವವರು.
ಹೀಗೆ ಒಟ್ಟು ದೈಹಿಕವಾಗಿ ಇರುವ ಎರಡು ಕಣ್ಣುಗಳು ಸೇರಿದಂತೆ, ಒಟ್ಟಾರೆ ಆರು ಕಣ್ಣುಗಳು ಇದ್ದು, ಮೂರರಿಂದ ಆರನೇ ಕಣ್ಣು ತೆರೆದುಕೊಳ್ಳಲು ಒಳಮುಖವಾಗಿ ನಡೆವ ಅಂತರಂಗದ ಅನ್ವೇಷಣೆ ಯಿಂದ ಸಾಧ್ಯ. ಆದರೆ ಈ ನಾಲ್ಕುಕಣ್ಣು ಬಾಹ್ಯವಾಗಿ ಕಾಣುವುದಿಲ್ಲ ಬದಲಾಗಿ ಅಂತಪ್ರಜ್ಞೆಯಲ್ಲಿ ತಿಳಿಯುವುದು ಎಂಬುದು ಸೃಷ್ಟಿಯ ವಿಶೇಷ.
ವಿಶೇಷ ಸೂಚನೆ : ಇಲ್ಲಿ ತಿಳಿಸಿದ ಚಕ್ರಗಳ ಬಗ್ಗೆ ನೀವು ಜನಜೀವನ ಗಮನಿಸುವಂತೆ ಸಹಜವಾಗಿ ಗಮನಿಸುವುದಾದರೆ, ಒಮ್ಮೆ ಇವುಗಳ ಬಗ್ಗೆ ತಿಳಿದು ಗಮನ ನೀಡುವುದು ಒಳಿತು. ಆದರೆ ನೀವು ಸಾಧನೆಗೆ ಇಳಿಯುವುದಾದರೆ ಖಂಡಿತ ನಿಮಗೆ ವೈಯಕ್ತಿಕ ಮಾರ್ಗದರ್ಶನ ಮಾಡುವವರು (ಗುರು) ಒಬ್ಬರು ಇರಬೇಕು. ನೀವು ಗುರು ಇಲ್ಲದೆ ಹಾಗೆ ಸಾಧನೆ ಗೆ ತೊಡಗಿದರೆ ಈಜು ಬಾರದೆ ನೀರಿಗೆ ಇಳಿದಂತೆ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್