ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಳೆದು ಹೋಗುತ್ತಿದ್ದೇವೆ

ಸಖಾರಾಮ ಉಪ್ಪೂರು
ಇತ್ತೀಚಿನ ಬರಹಗಳು: ಸಖಾರಾಮ ಉಪ್ಪೂರು (ಎಲ್ಲವನ್ನು ಓದಿ)

ಬದುಕು ಏಕೋ ಬರೀ ಶೂನ್ಯವಾದಂತೆ
ಬಾಳಿನ ಅಂದ-ಚಂದ, ಸುಂದರ ಕ್ಷಣಗಳು
ಎಲ್ಲಾ ಬರಡಾದಂತೆ ಭಾಸವಾಗುತ್ತಿದೆ.
ಬೆಳಗಾಗುತ್ತದೆ ದಿನ ಕಳೆಯುತ್ತದೆ
ಬೆಳಕು ಮುಳುಗುತ್ತದೆ ರಾತ್ರಿ ಆವರಿಸುತ್ತದೆ
ಮುಂಜಾವಿನ ತಂಗಾಳಿ ಹಸಿರು ಹುಲ್ಲಿನ ಮೇಲೆ
ಇಬ್ಬನಿಗಳು ಎಲ್ಲೋ ಮಾಯವಾದಂತೆ ಅನ್ನಿಸುತ್ತಿದೆ

ಯಾವುದೋ ಭರಾಟೆಯ ಸುದ್ದಿ
ಟಿ.ವಿ. ಚಾನೆಲ್‌ಗಳ ತುಂಬೆಲ್ಲಾ ಆರ್ಭಟಿಸುತ್ತಿದೆ
ವರ್ತಮಾನ ಪತ್ರಿಕೆಗಳ ಮುಖಪುಟಗಳೆಲ್ಲಾ
ಕೆಂಪು-ಕೆಂಪು, ಬಾರೀ ಬೇಸರ, ಹೆದರಿಕೆ
ನಾಚಿಕೆ ತರುವಂತಹ ವಾತಾವರಣ
ಯಾರಿಗೂ ಯಾರ ಮೇಲೂ ಭಯ-ಭೀತಿ
ದಯ-ಧರ್ಮ, ಪ್ರೀತಿ-ಆದರ-ಗೌರವಗಳಿಲ್ಲ.

ಎಲ್ಲೆಲ್ಲೂ ಸ್ವೇಚ್ಛಾಚಾರ! ಹಣ-ತೋಳ್ಬಲದ ಉಬ್ಬರ
ಅಹಂಕಾರ-ಅಟ್ಟಹಾಸ, ಪರಸ್ಪರ ಕಾಲೆಳೆಯುವ ಪೈಪೋಟಿ
ಮುಗಿಲೆತ್ತರಕ್ಕೆ ಬೆಳೆದು ನಿಂತ ಕಾಂಕ್ರಿಟ್ ಕಾಡು
ಶುದ್ಧಗಾಳಿ-ನೀರಿಗಾಗಿ, ಪ್ರೀತಿ-ವಾತ್ಸಲ್ಯಕ್ಕಾಗಿ ತಡಕಾಟ
ಕಾರು-ಮೋಟಾರು, ಮೆಟ್ರೋ ರೈಲುಗಳಲ್ಲಿ
ತುಂಬಿತುಳುಕುತ್ತಿರುವ ಜನಸಂದಣಿ
ಯಾರು ಯಾರಿಗೂ ಪರಿಚಿತರಿಲ್ಲ
ಓಡಾಟ-ಹೊಡೆದಾಟ, ಅರೆಚಾಟ-ಬೊಬ್ಬೆ
ಟ್ವಿಟರ್, ವಾಟ್ಸ್‌ಆಪ್, ಫೇಸ್‌ಬುಕ್,
ಮೊಬೈಲ್ ಮೆಸೇಜುಗಳಲ್ಲಿ ಕಳೆದು ಹೋಗುತ್ತಿದ್ದೇವೆ