- ಝೀಬ್ರಾ ಕ್ರಾಸಿಂಗ್ - ಸೆಪ್ಟೆಂಬರ್ 3, 2022
- ಕೇವಲ ನೆನಪು… - ಮೇ 28, 2022
- ನಾನೆಂಬ ಒಂದು IDEA [ಇದೀಯ-?!] - ಮೇ 12, 2022
ಎಲ್ಲಾ ನೆನಪುಗಳೇ-ಸರ್-ಗೆಲುವು-ಸೋಲು-ವಿರಸ
we r all just memories-nothing else-yes!
ಛೆ-ಛೆ-ಛೆ ಛೇಡಿಸಿ ನಡು-ನಡುಗಿಸೋ ಈ ರಾತ್ರಿಯ ಚಳಿ
ಹಗಲಿನ ಕೆಂಡದ ಸುಡುಸುಡುಬಿಸಿಲ ಕಡು-ಬಳುವಳಿ
ಈಗಲೇ ಒಮ್ಮೆಲೇ ತೀವ್ರ-ಮೇಲಿಂದ ಮೇಲೆ-ಅವಳ ನೆನಪು
ಒಂದಲ್ಲ-ಎರಡಲ್ಲ-ಹತ್ತೆಂಟು-ಹಲವಾರು-ಅದೆಷ್ಟೊಂದು
ಬಿಸಿಲು-ಚಳಿ-ನಿಜ-ಸಹಜ ಎಲ್ಲಾ ಕಾಲ-ನ್ಯಾಯ
ಹಗಲೂ-ರಾತ್ರಿಗೇ ಬಾಳು-ಬದುಕಿನ ಕೃತಿ-ಸ್ವಾಮ್ಯ
ಎಲ್ಲಿ ಕಾಲವೋ ಅಲ್ಲಿ ನ್ಯಾಯ-ಸೋಮನದೇ ಸ್ವಾಮ್ಯ
ಜೀವಿಗೆ ಸದಾ ತುಡಿತ-ದಡ ದಾಟಿ ಸೇರುವೆನೇ ಅಗಮ್ಯ
ಅಂತರ-ದೂರ-ದೂರತ್ವ ನೆನಪಿನ ಒಂಟಿ ಪೇರೆಂಟು
ಸನಿಹ-ಇಲ್ಲೇ ಪಕ್ಕಕ್ಕೆ ಹಿಂದೆಯೇ ಅದಕೆ ಹತ್ತಿರದ ನಂಟು
ಹೇಗಾಯ್ತು ನಿಮಿಷಗಳಲಿ ನೂರೆಂಟು ಅಂಟು-ಗಂಟು
ಹೆದರಿ ಬೆದರಿ ಹೌಹಾರಿ ಹಿಂದಿರದಿರೆ ಇಲ್ಲ ಯಾವ ಕಗ್ಗಂಟು
ಅಲ್ಲೀ-ಆ-ಗಾಲಿಕುರ್ಚಿ! ಈಗಿವಳೇ ಅಲ್ಲಿ ಕೂತಿರೋದು
ಅವಳಿಗೀಗ ನನ್ನದಷ್ಟೆ ಅಲ್ಲ–ಇಲ್ಲ ಯಾವುದೇ ನೆನಪು
ಹಿಂದೆ ನೋಡಿ! ನಾನೀಗಿಲ್ಲ-ನಮ್ಮದೇ ಫೋಟೋ ಅದು
ಫೋಟೋದಲ್ಲೂ ಇದ್ದಾಳವಳು-ಅದೂ ಒಂದು ನೆನಪು
ರಾತ್ರಿ-ಹಗಲು-ಚಳಿ-ಬಿಸಿಲು-ಕಾಲ-ಸೋಮ-ಜೀವ-
ನ್ಯಾಯ-ಸ್ವಾಮ್ಯ-ಅಗಮ್ಯ-ನಂಟು-ದೂರ-ಹತ್ತಿರ-
ಆ ದುಬಾರಿ ಗಾಲಿಕುರ್ಚಿ-ಅದರಂಬಾರಿ ಮೇಲಿನ ಅವಳು-
ನಿಮ್ಮ ಹಿಂದಿನ ಜಂಟೀ-ಫೋಟೋ-ಈಗ ಕೇವಲ ನೆನಪು
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಮಹಾಸಾಗರವಾದಳು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..