- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
- ಗಣೇಶನ ಕೈಯಲ್ಲಿಯ ಲಾಡು - ಸೆಪ್ಟೆಂಬರ್ 22, 2024
- ನೋ ಪಾರ್ಕಿಂಗ್ - ಆಗಸ್ಟ್ 29, 2024
ಕನ್ನಡ ಸಾಹಿತ್ಯ ಪ್ರಿಯರಿಗೆ ಅದೂ ವಿಶೇಷವಾಗಿ ಕಾವ್ಯ ಪ್ರಿಯರಿಗೆ ಡಾ. ಕೆ.ವಿ.ತಿರುಮಲೇಶ ಅವರ ಬಗ್ಗೆ ಪರಿಚಯ ನೀಡುವುದು ಅನಗತ್ಯ ಎಂದೇ ನನ್ನ ಅನಿಸಿಕೆ. ೧೯೬೦ರಲ್ಲಿ ಮುಖವಾಡಗಳು ಕವನ ಸಂಕಲನದೊಂದಿಗೆ ಆರಂಭವಾದ ಅವರ ಕಾವ್ಯ ಜೀವನ ಅನೇಕ ಕವನ ಸಂಕಲನಗಳು, ಕಥಾ ಸಂಕಲನಗಳು, ಕಾದಂಬರಿ, ವಿಮರ್ಶಾ ಗ್ರಂಥಗಳು, ಅನುವಾದಗಳನ್ನೊಳಗೊಳ್ಳುತ್ತ ಅವರ “ಅಕ್ಷಯ ಕಾವ್ಯ” ಕ್ಕೆ ಬಂದ ಕೇಂದ್ರ ಸಾಹಿತ್ಯ ಅಕೆಡೆಮಿಯ ಪ್ರಶಸ್ತಿಯೊಂದಿಗೆ ತುರೀಯಾವಸ್ಥೆಗೆ ತಲುಪಿದೆ ಎನ್ನಬಹುದು. ಅವರ ಕಾವ್ಯ ಕೃಷಿ ನಡೆಯುತ್ತಲೇ ಇದೆ. ಅವರ ೮೦ ನೆಯ ಜನ್ಮದಿನದಂದು ಅವರಿಗೆ ಶುಭಾಶಯ ತಿಳಿಸುತ್ತಾ ಅವರು ಕನ್ನಡ ಸಾಹಿತ್ಯದ ತುಟ್ಟ ತುದಿಗೇರ ಬೇಕೆಂದು ಹಾರೈಸುವ ಅನೇಕ ಅಭಿಮಾನಿಗಳಲ್ಲಿ ನಾನೂ ಒಬ್ಬನು.
ನನ್ನ ಹೆಸರು ಚಂದಕಚರ್ಲ ರಮೇಶ ಬಾಬು. ನಾನು ಕರ್ನಾಟಕ ಬ್ಯಾಂಕಿನಲ್ಲಿ ೩೩ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದೇನೆ. ಸಾಹಿತ್ಯಾಸಕ್ತಿ ಇರುವವನು. ಕನ್ನಡ ಹೆಸರಾಂತ ಸಾಹಿತಿಗಳ ಪುಸ್ತಕಗಳನ್ನು ಓದುತ್ತಿರುವವನು. ಹೈದರಾಬಾದಿನಲ್ಲಿ ನೆಲೆಸಿದವು. ಡಾ. ಕೆ.ವಿ. ತಿರುಮಲೇಶರನ್ನು ಅನೇಕ ಸಭೆ ಸಮಾರಂಭಗಳಲ್ಲಿ ಭೇಟಿಯಾದವನು.
ಅವರು ಹೈದರಾಬಾದಿನ ಆಂಗ್ಲ ಮತ್ತಿತರ ವಿದೇಶೀ ಭಾಷೆಗಳ ವಿಶ್ವವಿದ್ಯಾಲಯ ದಲ್ಲಿ ಕಲಿಸಿ ನಿವೃತ್ತಿ ಹೊಂದಿ ಈಗ ಹೈದರಾಬಾದಿನಲ್ಲೇ ನೆಲೆಸಿದ್ದಾರೆ. ಸ್ಥಳೀಯ ಕನ್ನಡ ಕಾರ್ಯಕ್ರಮಗಳಿಗೆ ಅವರು ಉತ್ತೇಜನ ನೀಡುತ್ತಾರೆ. ಕಾರ್ಯಕ್ರಮಗಳಿಗೆ ಉಪಸ್ಥಿತರಾಗುತ್ತಾರೆ. ನಾನು ಇಲ್ಲಿಯ ೮೪ ವರ್ಷಗಳ ಪುರಾತನ ಕನ್ನಡ ಸಂಸ್ಥೆಯಾದ ಕರ್ನಾಟಕ ಸಾಹಿತ್ಯ ಮಂದಿರದ ಕಾರ್ಯದರ್ಶಿಯಾಗಿದ್ದಾಗ ಅವರನ್ನು ಕೆಲವಾರು ಕಾರ್ಯಕ್ರಮಗಳಿಗೆ ಆಹ್ವಾನಿಸಿದ್ದಿದೆ. ಆ ಸಮಯದಲ್ಲೇ ಅವರಿಗೆ ಕೇಂದ್ರ ಸಾಹಿತ್ಯ ಅಕಡೆಮಿಯ ಪ್ರಶಸ್ತಿ ಪ್ರಕಟವಾಗಿದ್ದು, ನಾನು ಮತ್ತು ನಮ್ಮ ಅದ್ಯಕ್ಷರು ಅವರ ಮನೆಗೆ ಹೋಗಿ ಹೂಗುಚ್ಛದೊಂದಿಗೆ ಅವರಿಗೆ ಅಭಿನಂದನೆ ತಿಳಿಸುವುದಷ್ಟೇ ಅಲ್ಲದೆ ನಂತರದ ದಿನಗಳಲ್ಲಿ ಸಾಹಿತ್ಯ ಮಂದಿರದ ಸಭಾಂಗಣದಲ್ಲಿ ಅವರ ಸನ್ಮಾನ ಕಾರ್ಯಕ್ರಮ ಸಹ ನಡೆಸಿದ್ದೇವೆ. ನಂತರದ ದಿನಗಳಲ್ಲಿ ಕರ್ನಾಟಕ ಸಾಹಿತ್ಯ ಅಕೆಡೆಮಿಯ ಒಂದು ಕಾರ್ಯಕ್ರಮದಲ್ಲಿ ಅವರ ಸಮ್ಮುಖದಲ್ಲಿ ನಾನು “ ಆಧುನಿಕ ಕನ್ನಡ ಮತ್ತು ತೆಲುಗು ಸಾಹಿತ್ಯ- ಚಳುವಳಿಗಳ ಪರಸ್ಪರ ಪ್ರೇರಣೆ ಮತ್ತು ಪ್ರಭಾವ “ ಎನ್ನುವ ವಿಷಯದ ಮೇಲೆ ಒಂದು ಪೇಪರನ್ನು ಮಂಡಿಸಿದ್ದೇನೆ. ಸಾಹಿತ್ಯ ಮಂದಿರವು ನಡೆಸುವ ಋಜುವಾತು ಕಾರ್ಯಕ್ರಮವಾದ ತಿಂಗಳ “ ಸಾಹಿತ್ಯ ಸಂಜೆ” ಯಲ್ಲಿ ಅವರು ಸಹ ಭಾಗಿಯಾಗಿ ಮಾರ್ಗದರ್ಶನ ನೀಡಿದ್ದಾರೆ. ಕಳೆದ ವರ್ಷದ ಜೂನ್ ತಿಂಗಳಲ್ಲಿ ಇಲ್ಲಿಯ ಸಾಹಿತಿಗಳಲೆಲ್ಲ ಸೇರಿ ನಡೆಸಿಕೊಳ್ಳುತ್ತಿರುವ “ಕಸ್ತೂರಿ ಕನ್ನಡ ಕಾವ್ಯ ಧಾರೆ “ ಯ ಪ್ರಥಮ ವಾರ್ಷಿಕೋತ್ಸವಕ್ಕೆ ಅಧ್ಯಕ್ಷರಾಗಿ ಆಗಮಿಸಿ ಗುಂಪಿನ ಸಾಹಿತಿಗಳನ್ನು ಹರಿಸಿದ್ದಾರ
“ಗುಂಪಿನ ನಡುವೆಯೂ ಥಟ್ಟನೆ ಏಕಂಗಿಯಾಗಿಯಂತೆ ತೋರುವ ಕವಿ. ಅಭಿಮಾನ ಬಿಟ್ಟುಕೊಡದ ಸ್ವಾಂತದ ಆರಾಧಕ. ಗೊತ್ತಿಲ್ಲದ್ದು ಏನೋ ಇದೆ ಎನ್ನುವ ವಿಶ್ವಾಸದಲ್ಲಿ ಹೊಸ ದಾರಿ ಮತ್ತು ಹೊಸ ಊರಿನ ಹುಡುಕಾಟದಲ್ಲಿರುತ್ತಾರೆ.” ಎಂದು ಎಚ್. ಎಸ್. ವೆಂಕಟೇಶ ಮೂರ್ತಿಯವರು ಇವರನ್ನು ಬಣ್ಣಿಸುತ್ತಾರೆ.
ಇವರು ಬಹುಮಟ್ಟಗೆ ಕನ್ನಡದ ಮೈನ್ ಸ್ಟ್ರೀಮಿನಿಂದ ಹೊರಗಡೆಯೇ ಇದ್ದಾರೆ. ಅವರಿಗೆ ಪ್ರಶಸ್ತಿ ಕೊಡಲು ಹೈದರಾಬಾದಿಗೇ ಬಂದ ಶಿವಮೊಗ್ಗದ ಸಾಹಿತ್ಯ ಸಂಸ್ಥೆಯ ಅಧ್ಯಕ್ಷರು ಆ ಸಭೆಯಲ್ಲಿ ಮಾತನಾಡುತ್ತ “ ತಿರುಮಲೇಶರು ಹೈದರಾಬಾದಿನಿಂದಲೇ ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದು ಒಳ್ಳೆಯದಾಯಿತು. ಇದರಿಂದ ಅವರ ಬಿಚ್ಚು ಮನಸ್ಸಿನಿಂದ ತಮ್ಮ ಕವನಗಳನ್ನು ಬರೆಯಲು ನೆರವಾಯಿತು. ಕರ್ನಾಟಕದಲ್ಲೇ ಇದ್ದಿದ್ದರೇ ಯಾವುದೋ ಒಂದ ಬಣಕ್ಕೆ ಸೀರಿ ಅವರದ್ದೇ ಸಿದ್ಧಾಂತಕ್ಕನುಗುಣವಾಗಿ ಬರೆಯುತ್ತಿದ್ದರೇನೋ “ ಎಂದು ಉದ್ಗರಿಸಿದ್ದರು
ಹೆಚ್ಚಿನ ಬರಹಗಳಿಗಾಗಿ
ಹಣತೆ – ನಸುಕು ಕವಿಗೋಷ್ಠಿ
ತಿರುಮಲೇಶ್ ಮೇಷ್ಟ್ರಿಗೆ
ತಿರುಮಲೇಶ್- ೮೦:ವಿಶೇಷ ಸಂಚಿಕೆ