- ಗಾಂಧಿ-ಸಿದ್ಧಾರೂಢರ ಭೇಟಿಗೆ ನೂರಾ ಮೂರು ವರ್ಷ - ನವೆಂಬರ್ 12, 2023
- ಕುವೆಂಪು ಕನಸಿನ ಸಚಿವ ಮಂಡಲ - ಡಿಸಂಬರ್ 29, 2021
- ನಕ್ಷತ್ರಗಳ ನೆಲದ ನಂಟು - ಅಕ್ಟೋಬರ್ 29, 2021
ಧೃಢವಾಗಿ ಬೆಳೆದ ಹುಣಸೆ ಮರಗಳು ನಡೆದು ಹೋದ ಕಾಲ ಘಟ್ಟಗಳನ್ನೆಲ್ಲ ದಾಖಲಿಸಿ ಕೊಂಡು ವರ್ತಮಾನದಲ್ಲೂ ನೆನಪುಗಳ ತಂಬೂರಿಯನ್ನು ಮೀಟಿಸುತ್ತವೆ ಎಂಬುದಕ್ಕೆ ದೊಡ್ಡಮೇಟಿಯವರ ಈ ಚೆಂದದ ಕವಿತೆಯೇ ರುಜುವಾತು…!
ನಸುಕು ಸಂಪಾದಕ ವರ್ಗ
ರವೀಂದ್ರನಾಥ ದೊಡ್ಡಮೇಟಿಯವರ ಕವಿತೆ….
ಎಲೆ ಪೂರ್ವಿ ಹಳ್ಳಿಯ
ತರ ಬಾಗಿಲ ದಾರಿಗೆ ನಿಂತ ಸ್ವಾಗತಕಾರರು.
ಶತ ಮನಗಳ ಬದುಕಿನ ದಾರಿಗಳಲ್ಲಿ
ನಡೆದವರಿಗೆ..ಈಗಲೂ ನಡೆಯುವವರಿಗೆ
ತಲೆಯ ಮೇಲಿನ ಪೃಕೃತಿ ಹಿಡಿದ
ಗೌರವದ ಛಾಮರಗಳು…!
ಅದೆಷ್ಟು ವಸಂತಗಳು
ಉಲಿದ ಗಾನಗಳಿಗೆ ಕಿವಿಗೊಟ್ಟು..!
ಅದೆಷ್ಟೋ ರಪ ರಪ ಹೊಡೆದ
ಮಳೆಗಳಿಗೆ ಗೊತ್ತು ಎಲ್ಲ ಗುಟ್ಟು..!
ಅದೆಷ್ಟೋ ಚಳಿಗಳಿಗೆ ಎದೆಗೊಟ್ಟು
ನಡುಗದೆ ನಿಂತ ನಡುಕಗಳೆಷ್ಟೋ..!
ಅದೆಷ್ಟೋ ರಣ ರಣ ಬಿಸಿಲಿನ
ಕೆಂಡಗಳ ನುಂಗಿದ್ದೆಷ್ಟೋ..? !
ಗೆಳೆಯಾ ಹೇಳವೆ ಕಥೆಯಾ
ಎಲೆ ಪೂರ್ವಿ ಹಳ್ಳಿಯ ತೋಟಗಂಟಿಯ
ಹುಣಸೆ ಮರಗಳ ಕಥೆಯಾ..!
ಉಪ್ಪು ಖಾರ ತಿಂದ ದೇಹಗಳಿಗೆ
ಹುಳಿಯನ್ನೂ ಜೋಡುಮಾಡಿದ ರಸಜೀವಗಳಿವು.
ಆಡು ಭಾಷೆ ನುಡಿವವಗೆ
ಹುಣಸೆ ಮುಪ್ಪಾದರೂ ಹುಳಿ ಮುಪ್ಪೆ..!!
ವೃದ್ಧರಿಗೂ ತಾರುಣ್ಯ ದ ಬಾಗಿನ ನೀಡಿದವುಗಳಿವು..!!!
ಭಾರತ ಮಾತಾಕಿ ಜೈ.. !!
ಕರ್ನಾಟಕ ಮಾತಾಕಿ ಜೈ.. !!
ವಂದೇಮಾತರಂ.. !!
ಮಹಾತ್ಮ ಗಾಂಧೀಜಿ ಕಿ ಜೈ..!!
ಊರಲ್ಲಿ ಬಂದ ತ್ರಿವರ್ಣಧ್ವಜ ಗಳು
ದೇಶ ಭಕ್ತಿ ಯ ಘೋಷಣೆ ಗಳು
ನೆರೆಹೊರೆಯ ಊರಿನವರ
ಸ್ವಾತಂತ್ರ್ಯ ದಹಂಬಲಗಳು.
ಹುಣಸೆ ಮರಗಳ ನಡುವಿನ ಬೀದಿಯಲಿ
ಸರ ಭರ ಓಡಾಡುವ ಹೆಜ್ಜೆ ಗಳ
ಉತ್ಸಾಹ ದ ನಡೆಗಳಿಗೆ ..
ನವ ಚೈತನ್ಯ ದ ಹಾಡುಗಳು.. ಸಡಗರಗಳು.. !!
ಈ ಮರಗಳ ಕೊಂಬೆ ಕೊಂಬೆಗಳಲ್ಲಿ
ಗೂಡು ಕಟ್ಟಿದ ಹಕ್ಕಿ ಗಳು ತಮ್ಮ ಕಂಠ ಸರಿಮಾಡಿಕೊಂಡು ಹಾಡಿದ ಹಾಡುಗಳೆಷ್ಟೋ..?!
ಎಲ್ಲಾ ದಿನಗಳೂ ಒಂದೇ ಸಮನೇ
ಇರಲಾರವು ಗೆಳೆಯಾ..!
ತಲೆಯ ಮೇಲೆ ಬಿಗಿಯಾದ ಆಕಾಶ
ಹುಬ್ಬು ಗಂಟಿಕ್ಕಿದ ಮೋಡಗಳು
ನೀರೇ ಚೆಲ್ಲುವದಿಲ್ಲ..!
ಭೂಮಿ ಅರಳುವದಿಲ್ಲ…!!
ಸಾಲು ಸಾಲಾಗಿ ನಿಂತ ಗೆಳೆಯರು ಇವರೆಲ್ಲಾ..!
ಅಲ್ಲಿನವರ ಆತಂಕ ಮಿಡಿತಗಳಿಗೆ
ಆದಾಯವಾಗಿ ಹಂಚಿಕೊಂಡರೆಲ್ಲಾ..!
ಹುಣಸೆ ಫಲಗಳನು ಬರದ ದಿನಗಳಲ್ಲಿ..!!
ಇರಲಿ ಇರಲಿ ಬರಲಿ ಬರಲಿ ಗೆಳೆಯರೆ
ಮಕ್ಕಳು.. ಹುಡುಗಾಟ ದ ತರುಣರ
ಗಿಡ ಮಂಗನಾಟ.ಜೀಕಿ ಜೀಕಿ ನಲಿವ..
ಕುಣಿವ ನಗೆಯ ಉಲಿವುಗಳಿಗೆ ರೋಮಾಂಚನ
ಈ ಸಾಲು ಮರಗಳ ಟೊಂಗೆಗಳ ಕರತಾಡನ..!
ಶ್ರಾವಣದ ಮೆದು ನೀರಗಾಳಿಯಲಿ
ಈ ತೋಪುಗಳಲಿ ತೂಗುವ ಉತ್ಸಾಹ ಗಳ
ಉಯ್ಯಾಲೆ ಗಳಲಿತೂಗಿದ್ದೇ ತೂಗಿದ್ದು
ಇಲ್ಲಿನವರ ಬದುಕಿನ ಭರವಸೆಗಳ ಸದಾಶಯಗಳನು.. !!
ಹೆಗಲೇರೀದ ಮಕ್ಕಳು ಕೈ ಚಾಚಿ ಚಾಚಿ
ಹರಿದ ಮಿಡಿ ನಾಗರ ಕಾಯಿ ಕಚ್ಚಿ ಕಚ್ಚಿ ತಿಂದ
ಮುಖಗಳ ನಗುವುಗಳು.. ಸಂತೋಷಗಳ
ಮಾರ್ಧನಿಗಳು ಈ ಸಾಲು ಸಾಲು ಮರಗಳಲಿ..!!
ಈ ಹುಣಸೆ ಮರಗಳ ಕ್ಯಾನವಾಸ್
ನಮ್ಮ ನಮ್ಮ ಮನಸ್ಸೇಚ್ಛೆಯಂತೆ..
ಇಲ್ಲಿಯೇ ಬೆಟ್ಟದ ಹುಲಿಯ ಭೈರವ ನ ಸೆಟ್
ಉದಯಕುಮಾರ್ ನ ಧ್ವನಿ ಯಲ್ಲಿ
ಗಿರಡ್ಡಿ ಶೇಖಣ್ಣ.. ಪಾರ್ವತೆಮ್ಮಾ..ಪಾರ್ವತೆಮ್ಮಾ..
ಎಂದು ಘರ್ಜಿಸಿದರೆ..!
ಆರ್ ಜಿ ಪಾಟೀಲರ.. ಭುಜದ್ವಯ ಭುಜಕೀರ್ತಿಯ
ಸಭಾ ಮಾತಿನ ಪ್ರಮೀಲೀ ಕಥೆಯ ದೊಡ್ಡಾಟ ದ
ಅರ್ಜುನನ ಅರ್ಭಟದ ಮಣಿಪುರವಿಲ್ಲಿ..!
ಕುರಡಗಿ ಮೋಹನರ ಪದ್ಯದ ಮತ್ಸಗಂಧಿ ಯೋಜನಾಗಂಧಿ ಯಾದ ಸ್ಥಳವಿಲ್ಲಿ..
ಕಂಬಳಿ ಈರಪ್ಪ.. ಅರ್ಕಸಾಲಿ ಶೇಖಣ್ಣ ಆಕೆ ಯೋಜನಾಗಂಧಿಯಲ್ಲ ಹುಣಸೆಹುಳಿಗಂಧಿಯೆಂದ
ವಿನೋದಗಳು.. !!
ಕಾವ್ಯ ..ಪುರಾಣ..ಸಿನಿಮಾ ಗಳ ದಾರಿಯಾದ ಹುಣಸೆಮರಗಳ ಕಪ್ಪು ಬಿಳುಪು ಬೀದಿಯ ನೆರಳುಗಳು. !!
ಜಾನಪದರ ಭಜನೆಯ ಹಾಡುಗಳಲಿ
ಶಿವಲೋಕದಿಂದ ಸಾಧು ಬಂದಾನವ್ವ ಎಂದು ಭಜಿಸುವ ಭಜನೆಗಳಲಿ ಕೋಡಿಕೊಪ್ಪದ ಅವಧೂತ ವೀರಪ್ಪಜ್ಜ..!!
ಶಾಲೆಕಟ್ಟಿಸಿದ ಹಾಲಕೆರೆ ಅಜ್ಜ.. !!
ನಡೆದ ಹೆಜ್ಜೆಯ ಗುರುತುಗಳ ಹುಡುಕಿದರು
ಜನಪದರು ಈ ದಾರಿಯಲ್ಲಿ.. !!
ಶಾಲೆಗೆ ಹೋಗುವವರಿಗೆ ವಿದ್ಯೆಯ ದಾರಿ..!
ವಿಶ್ರಮಿಸಿ ಉಣ್ಣಿಸಿ ನೆರಳುಕೊಟ್ಟ ದಾರಿ
ಊರಿಗೆ ಸಿರಿ ಬರಲಿ ..ಬರ ಬರಲಿ
ಕಷ್ಟನಷ್ಟಗಳದಿನಗಳಲಿ
ಬಳಲಿ ಬೆಂದವರಿಗೆ
ಸಾಂತ್ವನ ದ ಶಾಂತತೆಯ
ಹುಣಸೆಮರಗಳ ನೆರಳು
ದೇವ ಸ್ಪರ್ಶ ದ ಕರಳು..!
ಈ ಪಲಭರಿತ ನೆರಳುಗಳ
ಹಸಿರು ಸಾಮ್ರಾಜ್ಯ ಎಂದೂ ಹೀಗೆ ಇರಲಿ
ಈ ಸಂಭ್ರಮಗಳನು ನಮಗೆ
ಕೊಡುತಲೆ ಇರಲಿ..!!
ಹೆಚ್ಚಿನ ಬರಹಗಳಿಗಾಗಿ
ಹುಣ್ಣಿಮೆ ರಾತ್ರಿ ದೇವರಾಡುವನು
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ