ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗಾಂಧಿ-ಸಿದ್ಧಾರೂಢರ ಭೇಟಿಗೆ ನೂರಾ ಮೂರು ವರ್ಷ

ರವೀಂದ್ರನಾಥ ದೊಡ್ಡಮೇಟಿ
ಇತ್ತೀಚಿನ ಬರಹಗಳು: ರವೀಂದ್ರನಾಥ ದೊಡ್ಡಮೇಟಿ (ಎಲ್ಲವನ್ನು ಓದಿ)

ನವೆಂಬರ್ 11-11-1920 ನೂರು ವರ್ಷಗಳ ಹಿಂದೆ ಇದೇ ದಿನ ಮಹಾತ್ಮ ಗಾಂಧೀಜಿವರು ಹುಬ್ಬಳ್ಳಿಗೆ ಸದ್ಗುರು ಪೂಜ್ಯ ಶ್ರೀ ಸಿದ್ಧಾರೂಢರನ್ನು ಭೇಟಿಯಾಗಲು ಬಂದಿದ್ದರು.


ಇಂದಿಗೆ ಸರಿಯಾಗಿ ಮಹಾತ್ಮ ಗಾಂಧೀಜಿಯವರು ಹುಬ್ಬಳ್ಳಿಯಲ್ಲಿ ಸದ್ಗುರು ಪೂಜ್ಯ ಶ್ರೀ ಸಿದ್ಧಾರೂಢರನ್ನು ಈಗಿರುವ ಸಿದ್ಧಾರೂಢ ಮಠದಲ್ಲಿ ಭೇಟಿಯಾಗಿ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ವಿಚಾರಗಳನ್ನು ವಿನಿಮಯ ಮಾಡಿಕೊಂಡಿದ್ದರು. ನಾನು ಸನ್ಯಾಸಿಯಾದರೇನು ನನಗೆ ದೇಶ ಬೇಡವೆ,ನನಗೂ ಖಾದಿ ತೊಡಿಸಿ ಎಂದಿದ್ದರು ಸದ್ಗುರು ಸಿದ್ಧಾರೂಢರು. ತಕ್ಷಣ ಗಾಂಧೀಜಿಯವರು ಸದ್ಗುರುಗಳಿಗೆ ಸ್ವದೇಶಿ ಚಳುವಳಿಯ ಸಂಕೇತವಾಗಿದ್ದ ಖಾದಿ ಹೊದಿಸಿ ಗೌರವಿಸಿದರು. ಇದೇ ವೇಳೆ ಮಹಾತ್ಮ ಗಾಂಧೀಜಿಯವರು ಸದ್ಗುರು ಸಿದ್ಧಾರೂಢರವರು ತೋರಿದ ಆತ್ಮೀಯ ಸದ್ಭಾವನೆಗಳಿಗೆ ಮಾರು ಹೋಗಿದ್ದಲ್ಲದೇ ಪ್ರಸಾದ ಆತಿಥ್ಯ ಸದ್ಗುರುಗಳ ಆಶೀರ್ವಾದವನ್ನು ಸಂತೋಷದಿಂದ ಸ್ವೀಕರಿಸಿದ್ದರು ನಂತರ ಕೊಪ್ಪೀಕರ್ ರಸ್ತೆಯಲ್ಲಿರುವ ಸಂಯುಕ್ತ ಕರ್ನಾಟಕ ಕಚೇರಿಯ ಮಗ್ಗಲಿಗಿರುವ ವಿಶಾಲವಾದ ಜಾಗದಲ್ಲಿ ಸಾರ್ವಜನಿಕ ಸಭೆಯಲ್ಲಿ ಅಪಾರ ಜನಸಮೂಹವನ್ನುದ್ದೇಶಿಸಿ ಒಂದು ಗಂಟೆ ಮಾತನಾಡಿದರು.

ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಕನ್ನಡ ಮತ್ತು ಹಿಂದಿಯಲ್ಲಿ ಸುದೀರ್ಘ 45ನಿಮಿಷದವರೆಗೆ ಆಶೀರ್ವಚನ ನೀಡಿದರು.ಇದರಿಂದ ಸಾಕಷ್ಟು ಸಂಖ್ಯೆಯಲ್ಲಿ ಸಾಮಾನ್ಯ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಪ್ರೇರಣೆಯಾಯಿತು. ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ವಿಚಾರದಲ್ಲಿ ಇದೊಂದು ಹುಬ್ಬಳ್ಳಿಯಲ್ಲಿ ನಡೆದ ಚರಿತ್ರಾರ್ಹ ಅಧ್ಯಾಯ ವಾಗಿದೆ

ರವೀಂದ್ರನಾಥ ದೊಡ್ಡಮೇಟಿ
9739222210