ರಾಜೇಶ್ವರಿ ವಿಶ್ವನಾಥ್
ಇವರು ಹಾಸನದಲ್ಲಿ ಗೃಹಿಣಿ. ಸಾಹಿತ್ಯ ಓದುವುದು, ಬರೆಯುವುದು ಇವರ ಆಸಕ್ತಿ. ನಮ್ಮ ಸಂಸ್ಕಾರ ನಮ್ಮ ಸಂಸ್ಕೃತಿ ಇದರ ಶೀರ್ಷಿಕೆಯಲ್ಲಿ ಹಬ್ಬಗಳ ಬಗ್ಗೆಇವರು ಬರೆದ ಲೇಖನಗಳು ಪ್ರಿಯಾಂಕಾ, ಗೃಹಶೋಭಾ, ಸುಧಾ,ಹಾಗೂ ಪ್ರಜಾವಾಣಿ, ಜನತಾ ಮಾಧ್ಯಮ, ಜನಮಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಕೆಲವು ಲಲಿತ ಪ್ರಬಂಧಗಳನ್ನೂ ಬರೆದಿದ್ದಾರೆ. ಮತ್ತೊಂದು ಹವ್ಯಾಸವೆಂದರೆ ಹಿರಿಯರ ನುಡಿ ಮುತ್ತುಗಳು, ಸುಭಾಷಿತ ಗಳನ್ನು ಐದುಸಾವಿರಕ್ಕೂ ಹೆಚ್ಚು ಸಂಗ್ರಹಮಾಡಿದ್ದಾರೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲೆ ಇದೆ ಇದರ ಶೀರ್ಷಿಕೆಯಲ್ಲಿ, ಆಹಾರದಲ್ಲಿ ಆರೋಗ್ಯ ಲೇಖನಗಳನ್ನು ಬರೆದಿದ್ದಾರೆ.ಟಿವಿಯಲ್ಲಿ ಅಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಕ್ವಿಜ್ ಗಳಲ್ಲಿ ಭಾಗವಹಿಸುವುದು, ಹಾಡು ಕೇಳುವುದು ಹಾಡು ಹೇಳುವುದು ತುಂಬಾ ಇಷ್ಟ.