ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೆ ಸತ್ಯನಾರಾಯಣ

ಹುಟ್ಟಿದ್ದು ೧೯೫೪ ಏಪ್ರಿಲ್‌ ೨೧ರಂದು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಕೊಪ್ಪ ಗ್ರಾಮದಲ್ಲಿ. ೧೯೭೨ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ (ಸುವರ್ಣ ಪದಕದೊಂದಿಗೆ). ೧೯೭೪ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ೧೯೭೮ರಲ್ಲಿ ಭಾರತ ಸರ್ಕಾರದ ಇಂಡಿಯನ್‌ ರೆವಿನ್ಯೂ ಸರ್ವೀಸ್‌ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ನಾನಾ ಭಾಗಗಳಲ್ಲಿ ಕೆಲಸ ಮಾಡಿ (ಏಪ್ರಿಲ್‌ ೨೦೧೪ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ. ಸಣ್ಣಕಥೆ, ಕಿರುಗತೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣ ಬರಹ, ವಿಮರ್ಶೆ, ಪ್ರವಾಸ ಕಥನ – ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಹಲವಾರು ಕೃತಿಗಳ ಪ್ರಕಟಣೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ (೧೯೮೮, ೧೯೯೨, ೨೦೧೨) ಪ್ರಬಂಧ, ಕಾದಂಬರಿ ಹಾಗೂ ಸಣ್ಣಕಥೆಗಳಿಗೆ ಪುರಸ್ಕಾರ; ಮಾಸ್ತಿ ಕಥಾ ಪುರಸ್ಕಾರ (ನಕ್ಸಲ್‌ ವರಸೆ ೨೦೧೦) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ (೨೦೧೪); ಆರ್ಯಭಟ ಪ್ರಶಸ್ತಿ (ಗೌರಿ ಕಾದಂಬರಿಗೆ); ಒಟ್ಟು ಸಾಹಿತ್ಯ ಸಾಧನೆಗೆ ಬಿ.ಎಂ.ಶ್ರೀ ಪ್ರತಿಷ್ಠಾನದ ಎಂ.ವಿ.ಸೀ ಪ್ರಶಸ್ತಿ (೨೦೧೨), ಬೆಂಗಳೂರು ವಿ.ವಿ.ಯ ಗೌರವ ಡಾಕ್ಟರೇಟ್‌ (೨೦೧೩); ರಾ.ಗೌ. ಪ್ರಶಸ್ತಿ (೨೦೧೪); ಬಿ.ಚ್‌. ಶ್ರೀಧರ ಪ್ರಶಸ್ತಿ (೨೦೧೬); ವಿಶ್ವಚೇತನ ಪ್ರಶಸ್ತಿ (೨೦೧೮); ಸೂರ್ಯನಾರಾಯಣ ಚಡಗ ಪ್ರಶಸ್ತಿ (೨೦೧೮ – ಸಾವಿನ ದಶಾವತಾರ ಕಾದಂಬರಿಗೆ); ಭಾರತೀಸುತ ದತ್ತಿ ನಿಧಿ ಪ್ರಶಸ್ತಿ (೨೦೧೯ ಲೈಂಗಿಕ ಜಾತಕ ಕಾದಂಬರಿಗೆ). ವಿ.ಎಂ. ಇನಾಂದಾರ್‌ ಪ್ರಶಸ್ತಿ – ಚಿನ್ನಮ್ಮನ ಲಗ್ನ ವಿಮರ್ಶಾ ಕೃತಿಗೆ (೨೦೨೦).