- ಭವ್ಯ ಭಾರತದ ಬಾಲಕ - ಜೂನ್ 12, 2021
- ಪುಟ್ಟನ ಮರ - ಜೂನ್ 5, 2021
- ಕನ್ನಡ ಕಂದ - ನವೆಂಬರ್ 1, 2020
ತಿರುಗಿತು ಋತುವು
ಕಳೆದವು ದಿನಗಳು
ಬಂದೆ ಬಿಟ್ಟಿತು ಪುಟ್ಟನ
ಹುಟ್ಟು ಹಬ್ಬವು
ಅಪ್ಪ ಅಮ್ಮ
ಶುಭವ ಕೋರಿ
ಕೊಟ್ಟರು ಕಾಸು
ಹಂಚಲು ಸಿಹಿಯು
ನಡೆದನು ಪುಟ್ಟ
ಹರುಷದಿ ಶಾಲೆಗೆ
ಸಿಹಿಯನು ಕೊಂಡು
ಗೆಳೆಯರಿಗೆ ಹಂಚುವ ಗುಂಗಿನಲಿ
ಸಿಹಿಸಿಹಿ ಲಾಡು
ಕೊಳ್ಳಲು ಪುಟ್ಟನು
ಏರುತಲಿದ್ದ ಅಜ್ಜನ
ಅಂಗಡಿ ಮೆಟ್ಟಿಲು
ಬದಿಯಲಿ ಬರೆದ
ಫಲಕನು ನೋಡಿ
ಬದಲಿಸಿ ಬಿಟ್ಟ
ತಕ್ಷಣ ಗುಂಗನ್ನು
ಪರಿಸರ ದಿನದಿ
ಸಸಿಯನು ನೆಟ್ಟು
ಭೂಮಿಯ ಉಳಿಸಿರಿ ನೀವು
ಬರೆದಿತ್ತು ಆ ಫಲಕದಲಿ
ಪಟಪಟ ನಡೆದು
ಬಂದನು ಪುಟ್ಟ
ನಗರದ ಹೊರಗಿನ
ಸುಂದರ ನರ್ಸರಿಗೆ
ಬಗೆಬಗೆ ಹೂವಿನ
ತರತರ ಹಣ್ಣಿನ
ಸಸಿಗಳ ನೋಡಿ
ಹಿರಿಹಿರಿ ಹಿಗ್ಗಿದನು
ಕಾಸನು ಕೊಟ್ಟು
ಸಸಿಯನು ಕೊಂಡು
ನಡೆದನು ಪುಟ್ಟ
ವೇಗದಿ ಶಾಲೆಗೆ
ಗೆಳೆಯರ ಕರೆದು
ತೆಗ್ಗವ ಅಗೆದು
ಸಸಿಯನು ನೆಟ್ಟು
ನೀರನು ಹಾಕಿದನು
ನಮ್ಮಯ ಹುಟ್ಟು
ಹಬ್ಬಕೆ ನಾವು
ಹಚ್ಚೋಣ ಒಂದು ಸಸಿಯನ್ನು
ನಗುತಲಿ ಹೇಳಿದ ಪುಟ್ಟನು
ಕಳೆದವು ದಿನಗಳು
ಬೆಳೆದವು ಮರಗಳು
ಹಸಿರಿನ ವನದಲಿ
ಚಿಲಿಪಿಲಿ ಗಾನಲಿ
ನಗುತಿದೆ ಶಾಲೆಯು
ನೆನೆಯುತ ಪುಟ್ಟನ
ಚಂದದ ಕಾರ್ಯವನು
ಸಾರುತ ಹಸಿರಿನ ಸಂದೇಶವನು
ಹೆಚ್ಚಿನ ಬರಹಗಳಿಗಾಗಿ
ಶೀನ್ಯಾ ಸೋನ್ಯಾ
ಗಾಂಧಿಜೀ ಮತ್ತು ಸ್ವಾತಂತ್ರ್ಯ (ಮಕ್ಕಳ ಕವಿತೆ)
ದೇಶಪ್ರೇಮಿಯಾಗು ಕಂದ