ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶೀನ್ಯಾ ಸೋನ್ಯಾ

ಪ್ರಭುರಾಜ ಅರಣಕಲ್
ಇತ್ತೀಚಿನ ಬರಹಗಳು: ಪ್ರಭುರಾಜ ಅರಣಕಲ್ (ಎಲ್ಲವನ್ನು ಓದಿ)

ಶೀನ್ಯಾ ಸೋನ್ಯಾ
ಓಡೋಡಿ ಬರ್ರಿ
ಮಳೆರಾಯನಾಟಾ
ನೋಡೋಣ ಬರ್ರಿ

ಮಳಿ ಜೋರು ಬಂದು
ತುಂಬ್ಯಾದ ಹಳ್ಳ
ಹರಿಯೋದ್ನೋಡ್ತಾ
ಕುಣಿಯೋಣು ಬರ್ರಿ

ಬಟ್ಟೆಯನು ಕಳಚಿ
ದಿಗಂಬರರಾಗಿ
ಕೆನ್ನೀರ್ಮುಳುಗಿ
ಆಡೋಣ ಬರ್ರಿ

ದಂಡ್ಯಾಗ್ನಿಂತು
ಟಾವೆಲ್ಲಿನೊಳಗೆ
ಸಣ್ಸಣ್ಣ ಮೀನಾ
ಹಿಡಿಯೋಣ ಬರ್ರಿ…

ಕೈ ಚೀಲದೊಳಗೆ
ಮೀನುಗಳ ತುಂಬಿ
ಮಹಿಬೂಬ್ಸಾಬ್ಗೆ
ಕರೆಯೋಣ ಬರ್ರಿ

ಮೀನುಗಳ ಕೊಟ್ಟು
ರೊಕ್ಕಾ ಪಡೆದು
‘ಮುಂಬೈ ಮಿಠಾಯಿ’
ತಿನ್ನೋಣ ಬರ್ರಿ

ನಮ್ಮ ಮನೆ ರೊಕ್ಕಾ
ಖರ್ಚೇ ಇಲ್ಲ
ಮೀನುಗಳ ಲೆಕ್ಕ
ಕೇಳೋರಿಲ್ಲ!…