ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬಯಕೆಯ ಬಗ್ಗೆ ನೇರವಾಗಿ, ವಿಭಿನ್ನವಾಗಿ ಬರೆದವರು ರಂಗಸ್ವಾಮಿ ಮಾರ್ಲಬಂಡಿ.
ರಂಗಸ್ವಾಮಿ ಮಾರ್ಲಬಂಡಿ
ಇತ್ತೀಚಿನ ಬರಹಗಳು: ರಂಗಸ್ವಾಮಿ ಮಾರ್ಲಬಂಡಿ (ಎಲ್ಲವನ್ನು ಓದಿ)

ಬಯಕೆಂದರೆ ಬಸುರಿಯ ಬಯಕೆಯಲ್ಲ,
ಕಾಮಾವಾಂಛಾಕನ ಬಯಕೆ,
ಯೌವ್ವನದ ಸೊಕ್ಕಿದ ಬಯಕೆ,
ಸಹಜ ಬಯಕೆ,
ಸಾಮಾನ್ಯ ಬಯಕೆ,
ಅದೇ ಅವಳನ್ನೋಡುವ ಬಯಕೆ,
ಅವಳ ಕಣ್ಣಲ್ಲಿ ನಾ ಸೇರುವ ಬಯಕೆ,
ಅವಳ ಮುಂದೆ ನಾಯಕನಾಗುವ ಬಯಕೆ,
ಆ ರತ್ನಗೊಂಬೆಯೆದೆಯಲ್ಲಿ ವಿಗ್ರಹಾನಾಗುವ ಬಯಕೆ,
ಅವಳ ಸೆರಗನ್ನು ಎಳೆಯುವ ಬಯಕೆ,
ಬದುಕಿನ ಸೆರಗಲ್ಲಿ ನಡೆಯುವ ಬಯಕೆ,
ಬಾಯಾರಿಕೆಯನ್ನು ಎನ್ ದ್ರವದಿಂದ ತೀರಿಸುವ ಬಯಕೆ,
ನನ್ ಹಸಿವನ್ನ ಅವಳಿಂದ ಕಳೆದುಕೊಳ್ಳುವ ಬಯಕೆ,
ನಾನು ನಾವಾಗುವ ಬಯಕೆ,
ಬಯಕೆ ಕಡೇ ಬಯಕೆ ಅವಳಲ್ಲಿ ನಾ ಮರುಜನ್ಮ ಪಡೆಯುವ ಬಯಕೆ,
ಹೂ ಬಯಕೆ,ಬಯಕೆ ,
ಬಯಕೆ,ಇದು ಬಯಕೆ ಅಷ್ಟೇ……