ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

“ಈ ಜಗತ್ತಿನಲ್ಲಿ ಭಾಷೆಯೆನ್ನುವುದು ಕೇವಲ ಮನುಷ್ಯನಿಗಷ್ಟೇ ದತ್ತವಾಗಿ ಬಂದ ವಿಶಿಷ್ಟತೆ. ಭಾಷೆಯೊಂದಿಗೆ ಭಾಷೆಯನ್ನು ಉಪಯೋಗಿಸುವ ಶೈಲಿ ಕೂಡ. ಸೂರ್ಯೋದಯ, ಸೂರ್ಯಾಸ್ತಮಾನ, ಮುಂಗಾರು, ಗುಡುಗುಮಿಂಚು, ಸಮುದ್ರದ ತೆರೆಗಳು, ಕೋಳಿಯ ಕೂಗು ಮುಂತಾದ ಜಗತ್ತಿನ ಯಾವುದೇ ವ್ಯವಹಾರಗಳಿಗೂ ಶೈಲಿಯೆಂಬುದಿಲ್ಲ. ಅಷ್ಟೇ ಏಕೆ ಮನುಷ್ಯನಿಗೆ ಸಂಬಂಧಿಸಿದಂಥ ನಡೆಯುವುದು, ಕುಳಿತುಕೊಳ್ಳುವುದು, ಊಟ, ನಿದ್ರೆ ಮುಂತಾದ ಕ್ರಿಯೆಗಳಿಗೆ ಕೂಡ ಶೈಲಿಯಿಲ್ಲ. ಸಂವಹನ ಕ್ರಿಯೆಯಲ್ಲಿ ಮಾತ್ರವೇ ಶೈಲಿ ಇರುವುದು. ಆದ್ದರಿಂದಲೇ ಸಂಗೀತ, ನೃತ್ಯ, ನಟನೆ, ಚಿತ್ರ ವಾಸ್ತುಗಳಲ್ಲಿ ಶೈಲಿಯನ್ನು ಗುರುತಿಸುತ್ತೇವೆ; ಇವೆಲ್ಲಕ್ಕೂ ಮಿಗಿಲಾಗಿ ಭಾಷೆಯಲ್ಲಿ. ಶೈಲಿ ಮನುಷ್ಯನಿಗೆ ಅಭಿವ್ಯಕ್ತಿಯೂ ಹೌದು; ಈ ಜಗತ್ತಿನ ಪ್ರತಿಕ್ಷಣಕ್ಕೂ ತನ್ನ ಮೇಲೆ ಜರಿದು ಬೀಳುತ್ತಿರುವ ಅದಷ್ಟೋ ಆಘಾತಗಳಿಂದ ಸ್ವಂತಿಕೆಯನ್ನು ಕಾಪಾಡಿಕೊಳ್ಳುವ ಮಾರ್ಗವೂ ಹೌದು. ಶೈಲಿಯೆಂದರೆ ಆಯ್ಕೆ.”
— ಕೆ. ವಿ. ತಿರುಮಲೇಶ್
ಶೈಲಿಶಾಸ್ತ್ರದ ರೂಪರೇಖೆಗಳು