ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹೀಗೊಂದು ಸಂಜೆ ಮತ್ತು ಮಾನ್ಸೂನ್ ಮಳೆ..

ಹೀಗೊಂದು ಸಿಂಗರದಾ ಕಲ್ಪನಾ ವಿಲಾಸಕ್ಕೊಂದು ಟಿಕೆಟ್...! ಮಾನ್ಸೂನ್ ನ ಒಲವಿನ ಮಳೆಯಲ್ಲಿ ಮಿಂದೇಳಲು...!


                                                     
ಈಗಷ್ಟೇ ಮಾನ್ಸೂನ್ ಶುರು ಆಯ್ತು ಕಣೆ… ಈ ದೂರದ ಬೆಟ್ಟದ ಸನಿಹ, ಸಂಜೆ, ಹುಲ್ಲು ಹಾಸಿನ ನೆಲಕ್ಕೆ  ಮುಂಗಾರ ನೀಲಿ,ಕಪ್ಪು ಮೋಡಗಳ ಬಣ್ಣಾನೆ ಮೈಗೆಲ್ಲಾ…! ದಿನ್ನೆಗಳನ್ನೆಲ್ಲ ಸೋಕಿ ಬರೋ ಗಾಳಿಗೆ ತಂಪನೆಯ ಚಿಕ್ಕ ಚಿಕ್ಕ ಹನಿಗಳ ಜತೆಯಿದೆ…ತಣ್ಣೆನೆಯ ಸಂಜೆಯ ಗಾನಕ್ಕೆ, ಎಳೆ ತಳಿರುಗಳ ಹೊಯ್ದಾಟ…ಸುಂಯ್ಯೆನ್ನುವ ತಂಗಾಳಿಯ ಜೊತೆಗಿಷ್ಟು ಮಾತು…. ಬಾನಿನ ಜತೆಗೂ  ಮೌನಗೀತೆ..!
    ಹುಲ್ಲು ಹಾಸಿನ ಮೇಲೆ ಮಂಡಿಯೂರಿ, ಗಾಳಿ ಬೀಸುವ ದಿಕ್ಕಿನೆಡೆ ಮೊಗವಿಟ್ಟು ಕಾಯ್ತಿದ್ದಿನಿ….ಗಾಳಿ ತುಂಬಾನೆ ಜೋರಾಗಿದೆ..  ನನ್ ಶರ್ಟ್ನ ಗುಂಡಿಗಳನ್ನೂ ಬಿಚ್ಚಿ, ಎದೆನೇ ಬಿರಿಯೋಕೆ ಟ್ರೈ ಮಾಡ್ತಿವೆ ಅನ್ಸುತ್ತೆ…
 ಈಗ, ಇದ್ದಕ್ಕಿದ್ ಹಾಗೆ ನಿನ್ ನೆನಪು ಒತ್ತರಿಸ್ಕೊಂಡು ಬರುತ್ತೆ ಕಣೆ..? ಹಾಗೆ ಮನಸಿಗೆ ಹೊಳೆದಿದ್ದೆ ತಡ, ನನ್ನ ರೆಪ್ಪೆಗಳು ಕೊಂಚ ಕೊಂಚಾನೆ ಮುಚ್ಚುತಿವೆ….
     ಆದ್ರೆ, ಇಷ್ಟರವರೆಗೂ ನನ್ ಮುಖಕ್ಕೆ ರಾಚುತ್ತಿದ್ದ ತಂಗಾಳಿ ಈ ಬಾರಿ, ನಿನ್ನನ್ನು ನನ್ನ ಮುಂದಿಟ್ಟು ಎಸ್ಕೇಪ್ ಆಗ್ಬಿಡುತ್ತೆ !…ಓಹ್… ದೇವ ರಿಗೂ ಥ್ಯಾಂಕ್ಸ್ ಮತ್ತೆ ತಂಗಾಳಿಗೂ ಥ್ಯಾಂಕ್ಸ್..
ನನ್ನ ಕಣ್ಣುಗಳು ಮುಚ್ಚಿದ್ರೂ ನೀನು ನನ್ ಮುಂದಿರೋದು ಫೀಲ್ ಆಗುತ್ತೆ….ಅದೇ ಸ್ಥಿತಿನಲ್ಲೆ ನಾಲ್ಕೈದು ನಿಮಿಷ ಕಳೆದೋಗುತ್ತೆ…
   ಹಾಂ…ನಂಗೀಗ ಎದೆ ಭಾಗದಲ್ಲಿ ಕೊಂಚ ಹಸಿಯಾದ ತಂಪು ಅನುಭವ..! ಏನು ಅಂತ ನೋಡಿದ್ರೆ, ಗೆಳತಿ ..ನಿಂದೇ ನಡುಗುವ ತುಟಿಗಳ ಸ್ಪರ್ಶ..! ಆಹ್…ನನ್ನೆದೆಯ ಎಲ್ಲ ಪ್ರೀತಿಯ ಬೆಲ್ಲ ಹೀರುವ ತವಕವೇ ಗೆಳತಿ?
ಹಾಗೆ ಸ್ವಲ್ಪ ಸಮಯ ಕಳೆಯುತ್ತೆ…
ಇದ್ದಕ್ಕಿದ್ದಂತೆ ಏನಾಯ್ತು ನಿಂಗೆ?…ಒಮ್ಮೆ ಜೋರಾಗಿ ಕೂಗ್ತಿಯಾ..ನನ್ ಎದೆಯ ಮೇಲೆ ದಬ ದಬನೆ ಏಟುಗಳು…! ಅಚ್ಚರಿಯಾಗಿ ಕಣ್ ತೆರೆದೆ…
    ಏನಿತ್ತೆ ಅಂಥ ಕೋಪ? ನನ್ನಿಂದ ತಪ್ಪಯ್ತಾ ಹುಡುಗಿ?…ನಿನ್ನಳುವ ಕೂಗು ನಂಗೆ ಉತ್ತರ ಆಗೊಲ್ಲ ಕಣೆ …ಸುಮ್ಮನಿರು ಅಂದ್ರೂ ಕೇಳೋದಿಲ್ಲ ನೀನು.!..ಎದೆ ಮೇಲೆ ನಿಂದೇ ಕೋಮಲ ಕೈಗಳ ಕುಣಿತ ನಿರಂತರ …
  ತುಸು ಹೊತ್ತು ನಿನ್ನೇ ನೋಡ್ತಿನಿ… ನಿಧಾನವಾಗಿ ನಿನ್ನ ಮೊಗವೆತ್ತಿ, ನಿನ್ನ ಕಂಪಿಸೋ ತುಟಿಗಳ ಮೇಲೆ ನನ್ನ ತುಟಿಗಳ ಮುದ್ರೆ ಹಿತವಾಗಿ ಒತ್ತಿ ನಿನ್ನ ನನ್ನ ಬಾಹುಗಳಿಂದ ಸುತ್ತುವರಿತಿನಿ…
ಅಬ್ಬ.!! ನಿನ್ನ ಅಳುವೇನೊ ನಿಂತಿದೆ..ಆದರೆ…? ಈಗ ನನ್ನ ಬೆನ್ನುಗಳ ಮೇಲೆ ಮೆದುವಾದ ಏಟುಗಳ ನರ್ತನ..!……ಆದ್ರೆ, ನಂಗೆ ಲೆಕ್ಕಾನೇ ಇಲ್ಲ ಕಣೆ…. ತುಟಿಗಳಲೆ ನಿನ್ನ ಹೀರುತಿರುವೆ…ಒಂಚೂರು ಬಿಡದೇ..ಭೂಮಿ ಆಗಸದ ಅಳತೆಯಲ್ಲಿ..!
  ಹಾಗೆ ಸ್ವಲ್ಪ ಹೊತ್ತು ಕಳೆಯುತ್ತೆ… ಈಗ ಏಟುಗಳ ಸದ್ದಿಲ್ಲ… ಬದಲು…ಬೆನ್ನ ಮೇಲೆ ನಿನ್ನ ಮೃದುವಾದ ಕೈ ಬೆರಳುಗಳ ಪ್ರೀತಿಯ ನೇವರಿಕೆ…ಲಾಸ್ಯ..!  ಮೌನದ ಸದ್ದು ..!
ಸುತ್ತ ಸ್ವರ್ಗದ ನಡುವೆ ಒಂದೇ ಜೀವ..ಬಿಸಿಯ ಉಸಿರುಗಳ ಡಿಕ್ಕಿ…!
  ಆಗಸದೆತ್ತರಕ್ಕೆ ಒಲವಿನ ಚಿಲುಮೆ…! ಪ್ರೀತಿಯ ಧಾರಾಕಾರ ಮಳೆ, ಹೊನಲು, ಭೋರ್ಗರೆತ…