ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹುಣ್ಣಿಮೆ ರಾತ್ರಿ ದೇವರಾಡುವನು

ಚಿಂತಾಮಣಿ ಕೊಡ್ಲೆಕೆರೆ
ಇತ್ತೀಚಿನ ಬರಹಗಳು: ಚಿಂತಾಮಣಿ ಕೊಡ್ಲೆಕೆರೆ (ಎಲ್ಲವನ್ನು ಓದಿ)

ಹುಣ್ಣಿಮೆ ರಾತ್ರಿ ದೇವರಾಡುವನು
ಹೊಂಬಣ್ಣದ ಚಂಡು
ದೇವಿಯ ಸಹಸ್ರ ಕಣ್ಣು ಮಿನುಗುತಿವೆ
ಅವನ ಹರುಷ ಕಂಡು

ಬಾನಿಂದಿಲ್ಲಿಯವರೆಗೂ ಹರಿದಿದೆ
ನಗುವಿನ ನೊರೆಹಾಲು
ಚಂಡಾಡುತ್ತಲೆ ದೇವ ಹೇಳುವನು
ಹಿಗ್ಗುತಿರಲಿ ಬಾಳು

ಕತ್ತಲು ರಾತ್ರಿಗಳಲ್ಲೂ ಬೆಳಕಿನ
ನೆನಪುಗಳಿರಬೇಕು
ಬೆಳಕಿನ ಹೊಳೆಯಲಿ ಒಮ್ಮೆಯಾದರೂ
ಮುಳುಗೆದ್ದರೆ ಸಾಕು

ದೇವಿ ಹೇಳುವಳು ಬೆಳಕಿನ ಹೊನಲಿನ
ಚಂಡಿನಾಟ ನೋಡಿ
ಬನ್ನಿ ಮಕ್ಕಳೇ ದೇವರ ಜೊತೆಗೆ
ನೀವೂ ಆಟವಾಡಿ