- ಇಸ್ರೇಲ್ ಕೆಣಕಿ ಗೆದ್ದವರಿಲ್ಲ - ಡಿಸಂಬರ್ 10, 2021
- ಅಂತಃಸ್ಪಂದನ ೧೪ - ಆಗಸ್ಟ್ 8, 2021
- ಅಂತಃಸ್ಪಂದನ ೧೩ - ಆಗಸ್ಟ್ 1, 2021
ನಿಮ್ಮ ಜೀವನದಲ್ಲಿ ಏನಾಗಿದೆ ಅದು ಅನ್ವಯಿಸುವುದು ನಿಮಗೆ ಮಾತ್ರ ತಾನೇ..
ಪೂರ್ವ ನಿರ್ಧಾರಿತ ಎಂಬುದೂ ನಿಜ ಇರಬಹುದು ಅನಿಸುತ್ತೆ ತಾನೆ?
ಯಾಕೆ ಇದನ್ನು ಹೇಳಿದೆ ಎಂದರೆ
ಭಕ್ತಿ, ಜ್ಞಾನ, ಕರ್ಮ,ಕ್ರಿಯಾ ಯೋಗಗಳ ಸಂಯೋಗದೊಂದಿಗೆ ಎಲ್ಲವೂ ಪೂರ್ವ ನಿರ್ಧಾರಿತ ದ ಈ ಸೃಷ್ಟಿಯಲ್ಲಿ ಫಲದ ಜೊತೆಗೆ ಪ್ರಯತ್ನವೂ ನಿನ್ನದೇ
ಇದೊಂದು ಆದರೆ ಯೋಗದಲ್ಲಿ ಕೂಡ ಈ ಮಾತು ಹೇಳುವರು. ಶಶಿಧರನಿಗೆ ಗಂಗಾಧರ ಕೂಡ ಈ ಮಾತು ಹೇಳಿದ. ಅದು ದೈವ ನಿಮ್ಮ ಗುಲಾಮ ಆಗುವುದು ಎಂದು.
ಗೋಪಿಕೆಯರ ಸೀರೆ ಕದ್ದ ಕಳ್ಳ.. ತುಂಬಿದ ಸಭೆಯಲ್ಲಿ ಹೆಣ್ಣಿನ ಮಾನ ಕಾಯ್ದ ಗೊಲ್ಲ..ಯಶೋದಾ ಕಂದಾ ಮುಕುಂದ..
ಗೀತೆಯಲ್ಲಿ ಹೇಳಿದ “ಯೋಗಸ್ಯ ಕುರು ಕರ್ಮಾಣಿ” ಗುಟ್ಟು ಇದೆ ಇರಬಹುದು
ಈ ನಾಲ್ಕು ಯೋಗಗಳ ಜೊತೆಗೆ ತಾನು ಸಾಕ್ಷಿ ಎಂಬುದನ್ನು ಗಮನಕ್ಕೆ (ಧ್ಯಾನ) ತಂದು ಕೊಳ್ಳಿ ಹಾಗೂ ಅದನ್ನು ಅಳವಡಿಸಿಕೊಳ್ಳಿ (ಧಾರಣ) ಇನ್ನು ಉಳಿದಂತೆ ನೀವು ಯಾವುದೇ ಸಾಧನೆ ಮಾಡುವುದು ಬೇಕಿಲ್ಲ.
ಶ್ರೀ ಶಂಕರರು ಹೇಳಿದಂತೆ ಯೋಗದಿಂದ ಆಗಲಿ ಭೋಗದಿಂದಲೇ ಆಗಲಿ ಸಂಘವಿರಲಿ, ಸಂಘವಿಲ್ಲದೆ ಇರಲಿ ನಿಮ್ಮ ದೃಷ್ಟಿ ಸೃಷ್ಟಿಯ ಮೇಲೆ ಬರುತ್ತದೆ ಕಾರಣ,ಮೇಲೆ ಹೇಳಿದ ಒಂದು ಆದರೆ ನಿಮ್ಮ ದೇಹ, ಮನಸ್ಸು, ಉಸಿರನ್ನು ಒಂದು ಐಕ್ಯತೆ ಗೆ ಬಂದು ನಿಮ್ಮಲ್ಲಿ ನಿರೀಕ್ಷೆ ಪ್ರತೀಕ್ಷೆಗಳು ಹೊರಟುಹೋಗಿ ಆನಂದದ ಹುಟ್ಟು ನಿಮ್ಮಲ್ಲಿ ಆಗುತ್ತದೆ.ಇದಾಗಲು ನೀವು ಯಾವ ಧರ್ಮ, ವರ್ಣ ಎಂದು ಪ್ರಕೃತಿ ನೋಡುವುದಿಲ್ಲ.ಇಷ್ಟು ದಿನ ಇದನ್ನು ಓದಿದ ಮೇಲೆ ನೀವೇ ನಿರ್ಧರಿಸಿ ಜಗದಲ್ಲಿ ಸರ್ಪಗಳನ್ನು ಹೊರತು ಪಡಿಸಿ ಉಳಿದ ಜೀವಿಗಳಿಗಿಂತ ಮಾನವ ದೇಹ ಅತ್ಯಂತ ವಿಕಸನ ಹೊಂದಿರುವ ಯಂತ್ರ ಹೌದೋ ಅಲ್ಲವೋ ಎಂದು.
ಹಾಗೂ ಇದು ಇನ್ನೊಂದನ್ನು ಕಲಿಸುವುದು ಅದು ನೀವು ನಡೆಯುತ್ತಿರುವ ಈ ಬಾಳ ಪಯಣದಲ್ಲಿ ನಿಮ್ಮೆಡೆಗೆ ಬರುವುದನ್ನು ಎದುರಿಸುವುದಲ್ಲ ಬದಲಾಗಿ ಸ್ವೀಕರಿಸುವುದು..
(ಈ ಜೀವನದ ಒಂದು ರಸ್ತೆಯಲ್ಲಿ ಸಾಗುತ್ತಿದ್ದೆ ಅದಕ್ಕೆ ರಸ್ತೆ ವಿಭಜಕ ಮತ್ತು ಅದರ ಮೇಲೆ ಗೋಡೆ ಇರುವುದು ಕಂಡಿತು ಹಾಗೆ ಮುಂದುವರೆದಾಗ ಗೋಡೆಗೆ ಮೇಜು ಕುರ್ಚಿ ಹಾಕಿರುವುದು ಕಂಡಿತು ಅದರ ಮೇಲೆ ಏರಿದಾಗ ಆ ಕಡೆಗೆ ಏಣಿ ಇತ್ತು ಅದರಿಂದ ಕೆಳಗೆ ಇಳಿದಾಗ ಇನ್ನೊಂದು ಬದಿಯಲ್ಲಿ ಇನ್ನೊಂದು ರಸ್ತೆ ಇತ್ತು ಈಗ ಈ ರಸ್ತೆಯಲ್ಲಿ ಮುಂದುವರಿದೆ ಕೊಂಚ ಮುಂದುವರಿದಾಗ ಈಗ ಗೋಡೆಯಿರಲಿ ರಸ್ತೆ ವಿಭಜಕ ಇಲ್ಲದೆ ಎರಡು ರಸ್ತೆಗಳು ಒಂದೆ ಆಗಿತ್ತು ಇಲ್ಲಿ ಹೇಳಿದ ಮೇಜು ಕುರ್ಚಿ, ಏಣಿಗಳೇ ಸಾಧನೆಗಳು ಹಾಗೂ ಇನ್ನೊಂದು ರಸ್ತೆಯೆ ಇನ್ನೊಂದು ಆಯಾಮ ಎನ್ನುವ ‘ಆಧ್ಯಾತ್ಮ’ ಲೋಕಾರೂಡಿಯಲ್ಲಿ)
ಹೇಗೆ ಮಾನವನ ದೇಹ ಅತ್ಯಂತ ವಿಕಸನ ಹೊಂದಿದೆ ಎಂಬುದನ್ನು ಒಂದು ಲೇಖನದಲ್ಲಿ ಹೇಳುವ ಎಂದು ಕೊಂಡೆ ಆದರೆ ಇಷ್ಟು ಕಂತುಗಳಲ್ಲಿ ಅನುಭವದ ಆಧಾರದ ಮೇಲೆ ಪದ ಪುಂಜಗಳ ಮಳೆಯನ್ನೇ ಸುರಿಸಿದಳು ಎನ್ನ ಜಗನ್ಮಾತೆ ಈ ಕಾಲಿ ಎದೆಯ ಪದ ಫಕೀರನಿಂದ, ಅದಕ್ಕೆ ಶಿವಪ್ಪ ಒಂದು ಚೈತನ್ಯ ತುಂಬಿದ..
ಇಲ್ಲದೆ ಹೋದಲ್ಲಿ ಇಷ್ಟೆಲ್ಲಾ ವಿಷಯ ಹೇಳಲು ನಾನೆಷ್ಟರವನು..
ಅರೆರೆ…. ನೋಡಿದ್ರಾ ‘ನಾನು’ ಎಂಬುದು ಹೋಗೇ ಇಲ್ಲ..
ಕಸ್ತೂರಿ ಕಾವ್ಯ ಧಾರೆ ಚರ್ಚೆ ವೇದಿಕೆ ಹೈದರಾಬಾದ್ ವಾಟ್ಸಾಪ್ ಗುಂಪಿನಲ್ಲಿ ಇದೇ ಒಂದು ಜ್ಞಾನ ಭಂಡಾರ ಹೆಸರು ತಾರಾಮತಿ
ಇವನು ಅಹಂ ಬಿಡದ ಅಲ್ಪಮತಿ.
ಎನ್ನ ತ್ರಿಪುರ ದೇವಿ ಸಂಪೂರ್ಣ ಒಲಿದು ಅಹಂ ಅನ್ನು ಬಡಿದಟ್ಟಿ ಅಜ್ಞಾನ ಸಂಹರಿಸಿ ಸುಜ್ಞಾನದ ಬೆಳಕು ಹರಿಸಿ ಮುಂದೆ ಇನ್ನೊಮ್ಮೆ ಅನುಭವಗಳ ಮಳೆ ಸುರಿಸಲು ನಿರ್ಧರಿಸಿದಂದು ಅದಕ್ಕೆ ನಿಮಿತ್ತವಾಗಲು ಇವನು ಸಿದ್ಧ ಅಲ್ಲಿಯವರೆಗೆ ಇದಕ್ಕೆ ಒಂದು ವಿರಾಮ.
*ಆಧ್ಯಾತ್ಮ = ಆಧ್ಯ(ಇಂದು)+ಆತ್ಮ(ನಾನು) ಇಂದು ನಾನು ಎನ್ನುವ ಪರಿಕಲ್ಪನೆ..
ಧನ್ಯವಾದಗಳೊಂದಿಗೆ ನಮಸ್ಕಾರಗಳು.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ