- ಇಸ್ರೇಲ್ ಕೆಣಕಿ ಗೆದ್ದವರಿಲ್ಲ - ಡಿಸಂಬರ್ 10, 2021
- ಅಂತಃಸ್ಪಂದನ ೧೪ - ಆಗಸ್ಟ್ 8, 2021
- ಅಂತಃಸ್ಪಂದನ ೧೩ - ಆಗಸ್ಟ್ 1, 2021
ಚಿಕ್ಕಂದಿನಿಂದ ಇವನು ಎಲ್ಲರಂತೆ ಇದ್ದರೂ ಆದರೆ ಎಂಟನೆಯ ವರುಷದಲ್ಲಿ ಒಮ್ಮೆ ಏಕಾಏಕಿ ಏನನ್ನೂ ತಿನ್ನದೆ ಮೂರು ದಿನಗಳು ಖುಷಿಯಿಂದ ಮತ್ತು ಆರೋಗ್ಯದಿಂದ ಇದ್ದ ಮತ್ತು ಒಮ್ಮೆ ಶಿಕ್ಷಕರು ಹೇಳಿದ್ದನ್ನು ಮತ್ತೆ ಈತ ಓದಿದ್ದೆ ಇಲ್ಲ. ಅಂದಿನಿಂದ ಇಂದಿನವರೆಗೂ ದೇಹ ಇವನು ಹೇಳಿದಂತೆ ಕೇಳುತ್ತಿದೆ (ಮುಂದೆ ಈ ಅಂಶ ಮನಸ್ಸನ್ನು ಸಹ ಮಾತು ಕೇಳುವಂತೆ ಮಾಡಿತು).
ಹದಿಮೂರನೇ ವಯಸ್ಸಿನವರೆಗೆ ಇವನು ಮಾತಿನ ಮಲ್ಲ ಆದರೆ ಒಮ್ಮೆಗೆ ಮೌನಿ ಆಗಿಬಿಟ್ಟ ಇವನು, ಕಾರಣ ಅಲ್ಲಿಯವರೆಗೆ ಈ ದೇಹದಲ್ಲಿರುವ ಇವನು ‘ನಾನು’ ಅದು ಇನ್ನಾರೋ ಆಗಿದ್ದರು ಅವರ ಜೊತೆಗೆ ಇವನಿಗೆ ಯಾವ ಸಮಸ್ಯೆ ಆಗಲಿ, ಈರ್ಷ್ಯೆ ಆಗಲಿ, ನಕಾರಾತ್ಮಕ ಭಾವನೆಗಳು ಯಾವತ್ತೂ ಇವನನ್ನು ತಲುಪಿದ್ದು ಇಲ್ಲ ಅವರ ಬಗ್ಗೆ. ಶಾಲೆಯಲ್ಲಿ ಪರೀಕ್ಷೆಗಳು ನಡೆವ ಮುನ್ನ ನಡೆದ ನಂತರ ಯಾವುದೇ ಚಿಂತೆಗಳು ಇರುತ್ತಿರಲಿಲ್ಲ. ಪ್ರಸ್ತುತವಾಗಿ ಹೀಗೆ ನಡೆಯುತ್ತಿರುವಾಗ ಒಮ್ಮೆಲೇ ಒಂದು ಮಧ್ಯಾಹ್ನ ಸತ್ಯ ಅಂದರೆ ಏನು? ದೇವರು ಯಾರು? ಹುಟ್ಟುವ ಮುಂಚೆ ಎಲ್ಲಿದ್ದೆ? ಸತ್ತ ನಂತರ ಹೋಗುವುದು ಎಲ್ಲಿಗೆ? ಹುಟ್ಟು ಸಾವಿನ ನಡುವೆ ಅಷ್ಟೇ ನಾವು, ನಮ್ಮದ್ದು ಇರುವುದು ಹಾಗಾದರೆ ‘ನಾನು’ ಯಾರು? ಎಂಬ ಪ್ರಶ್ನೆ ಭೂತಕಾರವಾಗಿ ಇವನ ಮುಂದೆ ನಿಂತಿತ್ತು
ಉತ್ತರ ಹುಡುಕಲು ಇವ ಸಹಪಾಠಿಗಳು, ಶಿಕ್ಷಕರು, ಸ್ನೇಹಿತರು, ಮನೆಯವರು, ನೆಂಟರು, ಅದ್ಯಾರೋ ರಸ್ತೆಯಲ್ಲಿ ತಿರುಗುವವರು, ಮಾರಾಟಗಾರರು, ಪ್ರಾಣಿಗಳು, ಪಕ್ಷಿಗಳು ಎಲ್ಲವನ್ನೂ ಗಮನಿಸುತ್ತಾ, ಗಮನಿಸುತ್ತಾ ಅವರ ಒಂದೊಂದು ಮುಖಗಳು ಬಣ್ಣ ಬಣ್ಣವಾಗಿ ಇದ್ದವು ಬಣ್ಣ ಕಳೆದುಕೊಂಡು ಅನಾವರಣ ವಾಗತೊಡಗಿತ್ತು.ಮತ್ತಿದು ಇವನನ್ನು ಹದಿನೈದನೆ ವರುಷಕ್ಕೆ ಮಾನಸಿಕವಾಗಿ ಮೂವತ್ತು ವರುಷದವನನ್ನಾಗಿ ಮಾಡಿತ್ತು.
ಒಂದು ದಿನ ಟಿವಿಯಲ್ಲಿ ಕಾರ್ಯಕ್ರಮವೊಂದು ಬರುತ್ತಿತ್ತು. ಅದರಲ್ಲಿ ಒಂದು ಫೋಟೊ ಇವನ ಗಮನ ಸೆಳೆಯಿತು ಮತ್ತು ಹೆಚ್ಚು ಕಡಿಮೆ ಒಂದು ವರುಷ ಹಿಂದೆ ಗೆಳೆಯನ ಮನೆಯ ಬಾಗಿಲಿಗೆ ಪಟ ಅಂಟಿಸಿದ್ದು ಅವರದ್ದೆ ಆಗಿತ್ತು ಮತ್ತು ಅವರು ಹೆಂಗಸಾ ಅಥವಾ ಗಂಡಸೋ ಎಂಬ ಅನುಮಾನ ಬಂದಿತ್ತು ಅಂದು.
ಅವರು ಬೇರೆ ಇನ್ನಾರು ಆಗಿರದೆ ಎನ್ನ ಪರಮ ಗುರುಗಳೆ ಆಗಿದ್ದರು ಆ ಮೂಲಕ ಅವರಾಗಿಯೆ ಇವನ ಬಳಿಗೆ ಬಂದರು (ಇದು ಆಗಿದ್ದು ಎನ್ನಲ್ಲಿ ‘ನಾನು’ ಯಾರು? ಎಂಬ ಪ್ರಶ್ನೆ ಮೂಡಿದ ಮೇಲೆ).
ಅವರೆ ಎರಡು ಸಾವಿರಕ್ಕೂ ಹೆಚ್ಚು ವರುಷಗಳಿಂದ ಇಂದಿಗೂ ಹಿಮಾಲಯದಲ್ಲಿ ಜೀವಂತವಾಗಿ ಇರುವ ಮಹಾವತಾರ ಬಾಬಾ.
(ಮುಂದುವರೆಯುವುದು)
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ