ಇತ್ತೀಚಿನ ಬರಹಗಳು: ಡಾ. ಶ್ರೀಶೈಲ ಮಾದಣ್ಣವರ (ಎಲ್ಲವನ್ನು ಓದಿ)
- ಛಂದದ ಗೆಳತಿ - ಮಾರ್ಚ್ 8, 2021
- ರಕ್ಷಣೆ ಅವನಿಗೂ ಇರಲಿ…! - ಅಕ್ಟೋಬರ್ 21, 2020
ಎಷ್ಟೊಂದು ಮುಗ್ಧ ಸಾವುಗಳು
ಕೊನೆಗಾಣುತ್ತಿಲ್ಲ ಸ್ತಬ್ದ ಬದುಕಿನ ನೋವುಗಳು:
ಕೊರಳಿಗೆ ಉರುಳು ಹಾಕಿ
ಎಳೆದೊಯ್ದ ಯಮಧರ್ಮನೂ ಈಗ ಹೈರಾಣು,
ಅಟ್ಟಹಾಸದಿ ಮೆರೆದಿದೆ ಕೊರೋನಾ ವೈರಾಣು:
ಗೊತ್ತಿತ್ತು ನೋಡಿ ನನಗೆ, ಇಂದಲ್ಲ ನಾಳೆಗೆ
ಸ್ವತಃ ಮೃತ್ಯು ದೇವನೇ ಓಡಿ ಬರುವನೆಂದು ಇಳೆಗೆ:
ಈ ಭಾರಿ ನಮ್ಮನ್ನು ಹೊತ್ತೊಯ್ಯಲು ಅಲ್ಲ
ಎತ್ತುವನು ಕೊರೋನಾ ಅದಕ್ಕೆ ಉಳಿಗಾಲವಿಲ್ಲ,
ಆದರೆ ಸಾವು ಏಕೋ ಯಮಧರ್ಮನನ್ನೂ ಬಿಟ್ಟಿಲ್ಲ:
ಅವನು ಮುಖಗವಚ ಮರೆಯದೇ ಹಾಕಿರಲಿ
ನಿರ್ಲಕ್ಷ್ಯ ಇಲ್ಲಿ ಸಲ್ಲದು ಪಾಪ! ರಕ್ಷಣೆ ಅವನಿಗೂ ಇರಲಿ!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ