ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅವಳು ಮಾತಾಡುತ್ತಲೇ ಇದ್ದಾಳೆ

ಕು.ಸ.ಮಧುಸೂದನ ರಂಗೇನಹಳ್ಳಿ
ಇತ್ತೀಚಿನ ಬರಹಗಳು: ಕು.ಸ.ಮಧುಸೂದನ ರಂಗೇನಹಳ್ಳಿ (ಎಲ್ಲವನ್ನು ಓದಿ)

ಜೊತೆಗಿದ್ದವರೆಲ್ಲ ಎದ್ದು ಹೋದರೂ
ಒಂಟಿ ಕಾಲಲ್ಲೇ ನಿಂತು
ಮಾತಾಡುತ್ತಲೇ ಇದ್ದಾಳೆ…
ಅವನು ಪರಿಚಯಿಸಿದ ನಕ್ಷತ್ರಗಳ ಜೊತೆಗೆ…

ಮುಗಿದ ಇರುಳಿಗೆ ತೆರೆದು ಬಾಗಿಲು
ಬಂದ ಹಗಲಿನಲ್ಲೂ
ಮಾತಾಡುತ್ತಲೇ ಇದ್ದಾಳೆ..
ಅವನು ಬಿಟ್ಟು ಹೋದ ಏಕಾಂತದ ಜೊತೆಗೆ…

ಅಸ್ಥವ್ಯಸ್ಥವಾದ ಹಾಸಿಗೆ ದಿಂಬುಗಳ
ಹೊದಿಕೆಗಳ ಬದಲಿಸುತ್ತ
ಮಾತಾಡುತ್ತಿದ್ದಾಳೆ…
ಉಟ್ಟ ಬಟ್ಟೆಗಳು ಮುಚ್ಚಿಟ್ಟ ಗುಟ್ಟುಗಳ
ರಟ್ಟಾಗಿಸಿದಾ ನಸುಗತ್ತಲಲಿ ಮೀಯುತ್ತಿರುವ ಕೊಣೆಯ ಜೊತೆಗೆ..

ಕೊನೆಯಿರದ ಕಡಲತಡಿಯ ಕತ್ತಲಲಿ
ಕಡುಗಪ್ಪಾದ ನೀಲಿಯ ನೆನಸಿಕೊಂಡು
ಮಾತಾಡುತ್ತಲೇ ಇದ್ದಾಳೆ….
ತೆರೆಗಳ ಜೊತೆ..

ಉಣ್ಣುವಾಗ ನೆತ್ತಿಗೇರಿ ಬಿಕ್ಕಳಿಸಿದವನ
ತಲೆ ತಟ್ಟಿ ನೀರು ಕುಡಿಸಿ
ಬೀಳ್ಕೊಟ್ಟವಳಿನ್ನೂ ಮಾತಾಡುತ್ತಲೇ ಇದ್ದಾಳೆ..
ಎದ್ದು ಹೋದವನುಳಿಸಿ ಹೋದ ಹೆಜ್ಜೆ
ಗುರುತಿನ ಹಾದಿಯ ಜೊತೆಗೆ..

ಕವಿ,ಲೇಖಕ ಶ್ರೀ ಕು.ಸ. ಮಧುಸೂಧನ್ ರಂಗೇನಹಳ್ಳಿ

ಟಿಪ್ಪಣಿ- ಈ ಮೇಲೆ ಬಳಸಿದ ಚಿತ್ರವು 1881 ರಲ್ಲಿ ಎಡ್ಗರ್ ಡಗಾಸ್ ರಚಿಸಿದ ಚಿತ್ರ. ಪಬ್ಲಿಕ್ ಡೊಮೇನ್ ಫ್ರೀ usage by ಶಿಕಾಗೋ ಆರ್ಟ್ ಇನ್ಸ್ಟಿಟ್ಯೂಟ್