ಇತ್ತೀಚಿನ ಬರಹಗಳು: ಕು.ಸ.ಮಧುಸೂದನ ರಂಗೇನಹಳ್ಳಿ (ಎಲ್ಲವನ್ನು ಓದಿ)
- ಕವಿತೆ ಹುಟ್ಟುವುದಕ್ಕೆ ಹೊತ್ತು ಗೊತ್ತಿಲ್ಲ - ಆಗಸ್ಟ್ 6, 2023
- ಇದೇನು ನಾಟಕವಲ್ಲ - ಜನವರಿ 30, 2022
- ಕು.ಸ.ಮಧುಸೂದನರ ಎರಡು ಕವಿತೆಗಳು - ಡಿಸಂಬರ್ 21, 2021
ಈಗಿನ್ನು ನಿಂತ ಮಳೆ
ಎದುರು ಮನೆಯಲ್ಲಿ ತಲೆಗೆರೆದು ನಿಂತ ತರಳೆ
ಮಾರುವವರು ಕೂಗುತ್ತಿದ್ದಾರೆ
ಹಳೆ ರೇಡಿಯೋದಲ್ಲಿ,ಹೊಸ ಟಿ.ವಿ.ಯಲ್ಲಿ
ರಸ್ತೆ ಬದಿಯ ಹೋರ್ಡಿಂಗುಗಳಲ್ಲಿ
ಬೇಕೇನು ಹೊಸ ಸರಕು
ಹೊಸ ಮಾಡೆಲ್ಲಿನಲ್ಲಿ
ಹಣಕಿದೆ ಏನೇನಿವೆ?
ಮಾರುಕಟ್ಟೆಯ ಪಟ್ಟಿಯಲಿ
ಬೈಕು ಕಾರು
ಸ್ಮಾರ್ಟ್ ಪೋನು ಕಂಪ್ಯೂಟರು
ಸನಾತನ ಯೋಗ
ಆಧುನಿಕ ರೋಗ
ಸ್ಯಾನಿಟೈಜರು ಮಾಸ್ಕು
ಬಣ್ನಬಣ್ಣದ ಕೆಮಿಕಲ್ ತೊಳೆಯಲು ಕಕ್ಕಸ್ಸು
ಆಗಾಗಿಷ್ಟು ಕಂತಿನಲಿ ಕೊಡಿ ಸಾಕು
ಇನ್ನೂ ಉಪಯೊಗಿಸದ ಡೆಬಿಟ್ ಕಾರ್ಡ್
ಹುಡುಕಿ ತೆಗೆಯುತ್ತೇನೆ
ಬೀದಿಗೆ ಬಂದರೆ ಮುಖವಾಡಗಳ ಮಣರಾಶಿ ಮದ್ಯೆ
ಯಾರೊ ಬಿಕರಿಗಿಟ್ಟಿದ್ದಾರೆ ನನ್ನನ್ನೂ
ನನ್ನೊಂದು ಮಾತೂ ಕೇಳದೆಯೆ!
ಮಾತು ಕೇಳದ ಕವಿತೆ ಮಾರುಕಟ್ಟೆಯಲೇ ಹುಟ್ಟಿತು..
ಕೊಳ್ಲುವವರಿಲ್ಲವೆಂದರೂ ಕೇಳುತಿಲ್ಲ.
ಕು.ಸ.ಮಧುಸೂದನರಂಗೇನಹಳ್ಳಿ
ರಂಗೇನಹಳ್ಳಿ,ತರೀಕೆರೆ-ತಾ., ಚಿಕ್ಕಮಗಳೂರು-ಜಿಲ್ಲೆ.
ದೂ:9483261944,9483568343
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ