- ಕನ್ನಡ ಕವಿಗಳಲ್ಲಿ ಪ್ರಜ್ವಲಿಸುತ್ತಿರುವ ದೀಪಮಾಲೆ - ಅಕ್ಟೋಬರ್ 27, 2024
- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
“ಪರಿಸರದಲ್ಲಿ ತನಗರ್ಥವಾಗದ್ದನ್ನು ತಿಳಿಯಲು ವ್ಯಕ್ತಿತೋರಿಸುವ ಆಸೆ” ಎಂದು ಕುತೂಹಲ ಪದಕ್ಕೆ ವ್ಯಾಖ್ಯನವನ್ನು ಮಾಡಬಹುದು. ಕುತೂಹಲ ನಾಮಪದವಾದರೆ ‘ಕುತೂಹಲ ಕೆರಳಿಸು’ ಕ್ರಿಯಾಪದವಾಗುತ್ತದೆ. ಇದಕ್ಕೆ ಪರ್ಯಾಯವಾಗಿ‘ಆಸಕ್ತಿ’, ‘ಉತ್ಸಕತೆ’, ‘ತವಕ’, ‘ಆಸಕ್ತಿ’, ‘ಹುಟ್ಟಿಸು’ ಎಂಬ ಬದಲಿ ಪದಗಳನ್ನು ಇನ್ನು ಉಲ್ಲೇಖಿಸಬಹುದು.
ಕುತೂಹಲ ಹೆಂಗಸರಿಗೆ ಹೆಚ್ಚೋ ………? ಗಂಡಸರಿಗೆ ಹೆಚ್ಚೋ………? ಮಕ್ಕಳಿಗೆ ಹೆಚ್ಚೋ ………? ಮುದುಕರಿಗೆ ಹೆಚ್ಚೋ ………? ಎನ್ನಬೇಡಿ. ಎಲ್ಲರಿಗೂ ಇದ್ದದ್ದೇ. ಕುತೂಹಲ ಕೆಲವೂಮ್ಮೆ ಆಸೆಯಾಗಿದ್ದರೆ, ಕೆಲವೂಮ್ಮೆ ನಿರೀಕ್ಷೆಯಾಗಿರುತ್ತದೆ. ಇನ್ನು ಕೆಲವೂಮ್ಮೆ ಸಂತೃಪ್ತ ಮನೋಭಾವಕ್ಕೆ ನಾಂದಿಯಾಗುತ್ತದೆ. ಕುತೂಹಲ ಕೆಲವೂಮ್ಮೆ ಎತ್ತರಕ್ಕೆ ಬೆಳೆಸಿದರೆ ಇನ್ನು ಕೆಲವೂಮ್ಮೆ ದುರುಳತನಕ್ಕೆ ಸಾಕ್ಷಿಯಾಗುತ್ತದೆ.
ವಿದ್ಯಾರ್ಥಿಗಳಿಗೆ ತಾವು ಕಲಿಯುವಂತಹ ವಿಚಾರಗಳ ಬಗ್ಗೆ ಕುತೂಹಲ ಇರಬೇಕು. ಪರೀಕ್ಷೆಗೆ ಇಂತಹ ಪ್ರಶ್ನೆಗಳು ಬರುತ್ತವೆ ಎಂಬ ಕಾತುರ ವಿದ್ಯಾರ್ಥಿಗಳಿಗಿದ್ದರೆ, ಅಧ್ಯಾಪಕರಿಗೆ ಮಕ್ಕಳು ಯಾವ ರೀತಿ ಉತ್ತರ ಬರೆದಿರುತ್ತಾರೆ ಎಂಬ ನಿರೀಕ್ಷೆಯಿರುತ್ತದೆ. ಇವೆಲ್ಲ ಒಟ್ಟು ಸೇರಿ ಪೋಷಕರಿಗೆ ಮಕ್ಕಳ ಫಲಿತಾಂಶಯಾವರೀತಿ ಬಂದಿರುತ್ತದೆ ಎಂಬ ಕುತೂಹಲ ಇದ್ದೇ ಇರುತ್ತದೆ. ಇನ್ನೂ ಕೆಲವೂಮ್ಮೆ ಸಹಪಾಠಿಗಳಿಗೆ ಎಷ್ಟು ಅಂಕಗಳು ಬಂದಿವೆ ಎಂಬ ಕುತೂಹಲದಿಂದ ಆ ಕುತೂಹಲ ತಪ್ಪಿಸಿಕೊಳ್ಳಲು ನಾನಾ ತಂತ್ರಗಳನ್ನು ಅನುಸರಿಸುವುದೂ ಇದೆ. ಕೋರ್ಟುಗಳಲ್ಲಿ ಯಾವುದಾದರೊಂದು ವಾದ-ವಿವಾದ ನಡೆಯುತ್ತದೆ ಎಂದರೆ ತೀರ್ಪು ಯಾರ ಪರವಾಗಿರುತ್ತದೆ ಎಂಬುದೇ ಮುಖ್ಯ ಪ್ರಶ್ನೆಯಾಗಿರುತ್ತೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಸ್ಪರ್ಧೆಗಳಿಗಿಂತ ಮೊದಲು ಜನಸಾಮನ್ಯರಿಗೆ ಯಾವ ಅಭ್ಯರ್ಥಿ ಗೆಲ್ಲುತ್ತಾರೆ, ಯಾವ ಪಕ್ಷದ ಅಭರ್ಥಿಗೆಲ್ಲುತ್ತಾರೆ, ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಕುತೂಹಲ ಇದ್ದೇಇರುತ್ತದೆ. ಹೊಸದೊಂದು ಸಿನಿಮಾ ಬಿಡುಗಡೆ ಆಗುತ್ತೆ ಎಂದ ಮೇಲೆ ಕೇಳಬೇಕೇ? ಅದು ಹೇಗೆ ಪ್ರದರ್ಶನ ಕಾಣುತ್ತದೆ ಎಂದು ನಿರ್ಮಾಪಕ, ನಿರ್ದೇಶಕ ನಾಯಕ, ನಾಯಕಿಯರ ಕುತೂಹಲವಾದರೆ ಪ್ರೇಕ್ಷಕನಿಗೆ ಫೈಟ್ಇದೆಯಾ? ಹಾಡುಗಳು ಎಷ್ಟಿವೆ? ಡ್ಯೂಯಟ್ ಇದೆಯಾ? ಐಟಂ ಸಾಂಗ್ಇದೆಯಾ? ಸೆಂಟಿಮೆಂಟ ಇದೆಯಾ? ಹೊರದೇಶದಲ್ಲಿ ಚಿತ್ರೀಕರಣವಾಗಿದೆಯಾ? ಎಂಬ ಕುತೂಹಲಗಳ ಸರಮಾಲೆಯೇ ಇರುತ್ತದೆ. ಹೊಸದಾಗಿ ಅಡುಗೆ ಕಲಿಯುವವರ ಕುತೂಹಲದ ರೀತಿನೆ ಬೇರೆ, ಅಡುಗೆ ಆಗುವರೆಗೆ ಹೇಗಾಗುತ್ತೋ? ಹೇಗಾಗುತ್ತೋ? ಎಂಬ ಭಾವಅಡುಗೆ ಮಾಡಿ ಬಡಿಸಿದ ನಂತರತಿಂದವರಿಗೆ ಏನನ್ನಿಸಿತೋ? ಋಷಿಯಾಯಿತೆ? ಇಲ್ಲವೆ? ಎಂಬ ಕುತೂಹಲ ಅಭಿಪ್ರಾಯಗಳಿಗೆ ಕಾತುರ ನಿರೀಕ್ಷೆಗಳನ್ನು ಇರಿಸಿಕೊಂಡಿರುತ್ತಾರೆ.
ಇನ್ನು ಸಮಾರಂಭಗಳಲ್ಲಿ ಯಾರದರೂ ಚೆನ್ನಾಗಿ ಅಲಂಕಾರ ಮಾಡಿಕೊಂಡು ಬಂದರಂತೂ ಅವರು ಹಾಕಿರುವ ಸೀರೆ, ಬಟ್ಟೆಗಳ ಮೇಲೆ ಕುತೂಹಲ ಅದರಲ್ಲೂ ಆಭರಣಗಳ ವಿಚಾರದಲ್ಲಿ ಹಾಕಿರುವ ಆಭರಣ ನಕಲಿಯೋ, ಅಸಲಿಯೋ ಎಂಬ ಕುತೂಹಲ ಎಲ್ಲವನ್ನು ಹಾಗೆ ಓರೆಗಣ್ಣಿನಿಂದ ನೋಡುವುದು. ಯಾರೋ ಇಬ್ಬರ ಚರ್ಚೆ ನಡೆಯುತ್ತಿರುವಾಗಲೂ ನಮ್ಮ ಬಗ್ಗೆಯೇ ಮಾತನಾಡುತ್ತಿರಬಹುದು ಎಂದು ಪುಸ್ತಕ ಜೋಡಿಸುವ ಹಾಗೆ ಹಾಳೆ ತಿರುವಿ ಹಾಕುವ ಹಾಗೆ ಗಮನಿಸುವುದು. ಅಷ್ಟು ವಿಚಾರ ತಿಳಿದುಕೊಳ್ಳಬೇಕೆಂಬ ದಾಹವಿದ್ದರು ನೇರವಾಗಿ ಕೇಳಿದರಾಯಿತು ಹೊರತು ವಿಕಟ ಕುತೂಹಲ ಏಕೆ? ಇನ್ಯಾರೋ ಎನೋ ಓದುತ್ತಿದ್ದಾರೆಂದರೆ ಏನು ಓದುತ್ತೀರಿ ಎಂದು ಕೇಳಿದರೆ ಮುಗಿಯಿತು ಅದು ಬಿಟ್ಟು ಬೇರೆ, ಬೇರೆ ಆಂ್ಯಗಲ್ಗಳಿಂದ ನೋಡುವುದು ಬೆನ್ನಹಿಂದೆ ನೋಡುವುದು ಇವುಗಳಲ್ಲಿ ವಿಚಿತ್ರ ಮನಸಿನ ವಿಕೃತ ಕುತೂಹಲಗಳೇ ಸರಿ.
ರೈತರ ವಿಚಾರಕ್ಕೆ ಬಂದರಂತೂ ಎಷ್ಟು ಬೆಳೆ ಬರಬಹುದು? ಹಾಗೋ ಹೀಗೋ ಬಂದ ಬೆಳೆಗೆ ಸರಿಯಾದ ಬೆಲೆ ಸಿಗುತ್ತದೆಯೋ? ಎಂಬ ಕಾತುರತೆ ಇದ್ದೇ ಇರುತ್ತದೆ. ಅದರಿರಲಿ ಯಾರಾದರೂ ದೇಣಿಗೆ ಕೊಟ್ಟರೆ ಎಷ್ಟು ಕೊಟ್ಟಿರಬಹುದು? ಎಂಬ ಕುತೂಹಲ, ಭಿಕ್ಷುಕರಿಗೂ ದಾನಿಗಳು ಎಷ್ಟು ಕೊಡಬಹುದು, ಕೊಡುತ್ತಾರೆ ಎಂಬ ಕುತೂಹಲ ಇದ್ದೇ ಇರುತ್ತದೆ. ಒಂದಷ್ಟು ಹೆಂಗಸರು ಸೇರಿರುವ ಕಡೆ ಯಾರಾದರೊಬ್ಬರಿಗೆ ಪಾರ್ಸಲ್ ಬಂದರೆ ಸಾಕು ಏನು? ಯಾರು? ಎಷ್ಟು ಇತ್ಯಾದಿ ಪ್ರಶ್ನೆಗಳು ಎಡತಾಕುತ್ತವೆ. ಇದೊಂದು ರೀತಿಯ ಕದನ ಕುತೂಹಲವೆಂದೇ ಹೇಳಬಹುದು. ಬಂದಂತಹ ಪಾರ್ಸಲ್ ವಿಚಾರವನ್ನೇ ಮುಂದಿರಿಸಿಕೊಂಡು ಅತ್ತೆ, ಸೊಸೆ, ಗಂಡ-ಹೆಂಡತಿ ಮಧ್ಯೆ ಜಗಳ ತಂದಿಡಲು ಕೆಲವರು ಹವಣಿಸುತ್ತಿರುತ್ತಾರೆ. ಮದುವೆಯಾಗುವ ಹುಡುಗ-ಹುಡುಗಿಯರಿಗೆ ಬಾಳ ಸಂಗಾತಿಗಳಾಗಿ ಬರುವವರು ಹೇಗಿರುತ್ತಾರೆ ಎಂಬ ತವಕವಾದರೆ ಹುಡುಗನ ಪೋಷಕರಿಗೆ ವರದಕ್ಷಿಣೆ ಎಷ್ಟು ತರಬಹುದು? ಎಂಬ ತವಕ ಹುಡುಗಿಯ ಪೋಷಕರಿಗೆ ಅಳಿಯನ ಸಂಬಳ ಎಷ್ಟು? ಬರುತ್ತದೆ ಎಂಬ ತವಕ ಕಾತುರ ಇದ್ದೇ ಇರುತ್ತದೆ. ಮದುವೆಗೆ ಹೋಗುವ ಹೆಣ್ಣುಮಕ್ಕಳಿಗೆ ಯಾವರೀತಿ ಸೀರೆ ಕೊಡಬಹುದು? ಜರಿ ಬಾರ್ಡರ್ ಇರುತ್ತದೆಯೋ? ಇಲ್ಲ ಫ್ಯಾನ್ಸಿ ಸೀರೆಯೋ? ಎಂದು ಒಮ್ಮೆ ನೋಡಬೇಕೆಂಬ ಕುತೂಹಲ ಇದ್ದೇ ಇರುತ್ತದೆ.
ಇನ್ನು ಮದುವೆ ಮುಗಿದ ಬಳಿಕ ಪೋಷಕರಿಗೆ ಮೊಮ್ಮಕ್ಕಳು ಯಾವಾಗ ಬರುತ್ತಾರೆ? ಎಂಬ ನಿರೀಕ್ಷೆ? ಹೆರಿಗೆ ಆಗುವವರೆಗೂ ಯಾವ ಮಗು? ಹೆಣ್ಣೋ/ ಗಂಡೋ ಎಂಬ ಕುತೂಹಲ. ನಂತರಯಾವ ಹೆಸರಿಡತರೋ ಎಂಬ ಕುತೂಹಲ. ಉಡುಗೊರೆಗಳು ಬಂದುಬಿಟ್ಟರಂತೂ ಯಾರು? ಎಷ್ಟು? ಏನು? ಕೊಟ್ಟಿರುವ ವಸ್ತು ಯಾವುದು ಎಂದು ತಿಳಿಯುವ ತವಕ ಇರುತ್ತದೆ. ಕುತೂಹಲ ನಿರೀಕ್ಷೆ, ಕಾತುರತೆಗಳಿಗೆ ಕೊನೆ ಇದೆಯೇ? ಖಂಡಿತ ಇಲ್ಲ. ಕುತೂಹಲವೇ ಜನಾಂಗದ ಜೀವಾಳ ಎಂದರೂ ತಪ್ಪಿಲ್ಲ ಅಲ್ಲವೇ? ಹೊಟೇಲ್ ಕೆಲಸ ಮಾಡುವ ಮಾಣಿಗೂ ಅವನದ್ದೇ ಕುತೂಹಲ ಟಿಪ್ಸ್ ಎಷ್ಟು ಸಿಗಬಹುದುಎಂದು ಹಾಗೇನಾದರೆ ಗ್ರಾಹಕರು ಚಿಲ್ಲರೆ ಇಟ್ಟರೆ“ಇxಛಿuse me ಥಿou ಟeಜಿಣ ಣhe ಛಿhಚಿಟಿge ಣಚಿಞe iಣ”ಎಂದು ಕೊಸರಿ ಗ್ರಾಹಕರ ಕೈಗೆ ಚಿಲ್ಲರೆಯಿರಿಸುತ್ತಾರೆ.
ಕ್ರಿಕೆಟ್ ವಿಚಾರಕ್ಕೆ ಬಂದರಂತು ಕೇಳುವುದೇ ಬೇಡ ಏನಿಲ್ಲದಿದ್ದರೂ ಸ್ಕೋರ್ಎಷ್ಟಾಗಿರಬುಹುದೆಂದು ತಿಳಿಯಬೇಕೆಂಬ ಕಾತುರತೆ ಕಾಮೆಂಟೇಟರ್ ಏನಾದರೂ ಜೋರಾಗಿ, ಅವಸರದಲ್ಲಿ ಏನಾದರೂ ಹೇಳಿದರೂ ಕೈಯಲ್ಲಿದ್ದದ್ದನ್ನು ಹಾಗೆ ಬಿಟ್ಟು, ಇಲ್ಲ ಎಸೆದು ಟಿ.ವಿ. ಮುಂದೆ ಹೋಗಬೇಕು. ಅದರಲ್ಲೂ ಇಂಡಿಯ-ಪಾಕಿಸ್ತಾನ ಕ್ರಿಕೆಟ್ ಪಂದ್ಯಇದ್ದರಂತೂ ಬಿಡಿ. ಆ ಕುತೂಹಲ ಅವ್ಯವಹಾರಕ್ಕೆ ಜೂಜಿಗೆ ನಾಂದಿ ಹಾಡುತ್ತದೆ. ಎಲೆಕ್ಟ್ರಾನಿಕ್ ವಸ್ತುಗಳ ಗೀಳಿರುವವರಿಗೆ ಪಕ್ಕದಲ್ಲಿ ನಿಲ್ಲುವವರು, ಕೂರುವವರು, ಏಳುವವರ ಮೊಬೈಲ್, ಟ್ಯಾಬ್ಗಳ ಮೇಲೆಯೇಕಣ್ಣು. ಕ್ಯಾಮರ ಎಷ್ಟು ಫಿಕ್ಸೆಲ್, ಮೆಮೊರಿ, ಬ್ಯಾಟರ್ ಬ್ಯಾಕ್ ಅಪ ಹೇಗೆ? ಇತ್ಯಾದಿ ಇತ್ಯಾದಿ ……………………..
ಇವುಗಳಿಗಿಂತ ಹೊರತಾಗಿ ಮನೆಯವರು, ಮಕ್ಕಳ ಬಗ್ಗೆ ಕ್ಷಣಕ್ಷಣಕ್ಕೂ ತಿಳಿದುಕೊಳ್ಳಬೇಕು ಎಂಬ ಕಾತುರತೆ ಇರುತ್ತದೆ. ಬಂಡವಾಳ ಹಾಕಿದ ವ್ಯಾಪಾರಿಗೆ ಹಾಕಿದ ಬಂಡವಾಳದ ಕಡೆಯಲ್ಲಿ ಎಷ್ಟು ಲಾಭ ಬರಬಹುದುಎಂದಾದರೆ, ದಲ್ಲಾಳಿಗಳಿಗೆ ಎಷ್ಟು ಕಮಿಷನ್ ಬರಬಹುದೆಂಬ ಲೆಕ್ಕಾಚಾರ ಸರಕಾರಿ ಉದ್ಯೋಗಿಗಳಿಗೆ ತುಟಿಭತ್ಯೆ ಎಷ್ಟು ಯಾಗಾಗಕೊಡುತ್ತಾರೆ? ಯಾವಾಗದಿಂದ ಪೂರ್ವಾನ್ವಯವಾಗುತ್ತದೆ ಎಂಬ ಕಾತುರವಿದ್ದೇ ಇರುತ್ತದೆ.
ಬರಹಗಾರರಿಗೆ ನಮ್ಮ ಲೇಖನ ಯಾವಾಗಯಾವ ಪತ್ರಿಕೆಯಲ್ಲಿ ಪ್ರಕಟವಾಗಬಹುದೆಂಬ ಸಹಜ ಕೂತುಹಲ ಇದ್ದೇ ಇರುತ್ತದೆ. ಕಲಾವಿದರಿಗೆ ತಮ್ಮಕಲೆಯನ್ನು ಪ್ರೇಕ್ಷಕರು ಮೆಚ್ಚಿ ಹೇಗೆ ಮೆಚ್ಚುಗೆ ಸಲ್ಲಿಸಸಬಹುದು ಎಂಬ ಕುತೂಹಲವಿರುತ್ತದೆ. ಶಾಲಾಕಾಲೇಜು ಮಕ್ಕಳ ಇನ್ನೊಂದು ನಿರೀಕ್ಷೆ! ಬೃಹತ್ ಕೂತೂಹಲವೇ! ಅದೇನು ಅಂದರೆ ರಜೆ ಯಾವಾಗ ಕೊಡುತ್ತಾರೆ ಎಂಬ ಬಯಕೆ. ಅಂತಹ ಸನ್ನಿವೇಶಗಳ ಮುನ್ಸೂಚನೆ ಸಿಕ್ಕರೆ ಟಿ.ವಿ.ಮುಂದೆ ಟಿಕಾಣಿ ಹೂಡಿ ಬಿಡುತ್ತಾರೆ. ಓ.ವಿ.ಮಾಧ್ಯಮದ ಅನೇಕ ಧಾರವಾಹಿಗಳು, ರಿಯಾಲಿಟಿ ಶೋಗಳ ಕುತೂಹಲಗಳನ್ನೇ ಉಳಿಸಿಕೊಂಡೇ ಪ್ರೇಕ್ಷಕರನ್ನು ಆಳುವುದು. ಹಿಂದೆ ಕಾಗದಗಳೇನಾದರೂ ಬಂದು ಬಿಟ್ಟರಂತೂ ಕಾಗದ ಯಾರು ಬರೆದಿದ್ದಾರೆ? ವಿಷಯವೇನು? ಎಂದು ತಿಳಿಯುವ ಕುತೂಹಲ ಇದ್ದೇಇರುತ್ತಿತ್ತು. ಆ ಮಾಹಿತಿ ಸಿಗಲಿಲ್ಲವಾದರೆ ಕಾಗದ ಹರಿದು ಚಿಂದಿಯಾಗಿ ಕಸದ ಬುಟ್ಟಿಯಲ್ಲಿ ಯಾವ ಸ್ಥಿತಿಯಲ್ಲಿ ದೊರೆತರೂ ಅದನ್ನೆಲ್ಲ ಒಟ್ಟು ಸೇರಿಸಿ ಓದಿ ವ್ಯಂಗ್ಯ, ಹಾಸ್ಯ ಮಾಡುವವರು ಇದ್ದೇ ಇದ್ದರು.ಇದು ಕೆಟ್ಟ ಕುತೂಹಲವೇ ಅಲ್ಲವೇ? ಕಾಲ ಬದಲಾಗಿದೆ.
ಪೋನ್ಗಳ ಯುಗ ಇದು ಇಲ್ಲಿ ಯಾರದ್ದಾದರೂ ಕರೆ ಬಂದರಂತೂ ಅದನ್ನು ಹೇಗಾದರೂ ಕದ್ದು ಆಲಿಸಬೇಕೆಂಬ ತವಕ ಕೆಲವರಿಗೆ ಗೋಡೆಯ ಒಳಗೆ ಅಂತರ್ಗತವಾಗುವವರಂತೆ ಗೋಡೆಗೆ ಕಿವಿ ಕೊಡುತ್ತಾರೆ. ಅವರು ಮಾತನಾಡಿ ಮುಗಿಸಿದ ಬಳಿಕವೂ ಅವರ ಫೋನ್ನನ್ನು ಕದ್ದು ನೋಡಿ ನಂಬರ್ಯಾವುದು, ಫೋನಿನಲ್ಲಿಯಾವ ಡಿ.ಪಿ. ಇದೆ, ಏನೇನು ಸ್ಟೇಟಸ್ ಹಕಿದ್ದರೆಎಂದು ನೋಡಿ ಅವರಿಗಾಗದವರಿಗೆ ಹೇಳಿ ಜಗಳ ತಂದಿಟ್ಟು ತಮಾಷೆ ನೋಡುವಚಟ ಬೇರೆ ಇಂತಹ ಕುತೂಹಲ. ಮಕ್ಕಳಂತೂ ಯಾವುದಾದರು ಸ್ಪರ್ಧೆಯಲ್ಲಿ ಭಾಗವಹಿಸಿಬಿಟ್ಟರಂತೂ ನಮಗೇ ಬಹುಮಾನಎಂಬಂತೆ ಬಟ್ಟಲುಕಂಗಳನ್ನು ಅರಳಿಸಿ ಬಹುಮಾನ ಪಟ್ಟಿ ನೋಡುತ್ತವೆ, ಪಾಪ! ಎಲ್ಲ ಮಕ್ಕಳಿಗೂ ಬಹುಮಾನ ಸಿಗಲಿ ಅಲ್ಲವೆ. ಇನ್ನು ಹೆಣ್ಣು ಮಕ್ಕಳಿಗೆ ತವರು ಮನೆಯವರುಯಾವಗ ಬರುತ್ತಾರೆ? ಏನು ತರುತ್ತಾರೆ? ಎಂಬ ಕುತೂಹಲ. ಹುಟ್ಟುಹಬ್ಬ ವಿವಾಹ ವಾರ್ಷಿಕೊತ್ಸವ ಬಂದರೆ ಬಿಡಿ ಲೆಕ್ಕಾಚಾರವೇ ಬೇರೆ ಕುತೂಹಲದ ಅಲೆಯಲ್ಲೇ ತೇಲಾಡುವುದು.
ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವವರಲ್ಲಿಅವರು ಹಾಕಿದ ಪೋಸ್ಟ್ ಬರೆದ ಬರಹಕ್ಕೆ ಎಷ್ಟು ಲೈಕ್, ಶೇರ್, ಕಮೆಂಟ್ಸ್ಗಳು ಬರುತ್ತವೆ ಎಂಬ ಕುತೂಹಲ ಇದ್ದೇ ಇರುತ್ತದೆ. ಲಾಟರಿ ಟಿಕೇಟ್ ಕೊಳ್ಳುವವರು ಕುತೂಹಲದಿಂದಲೇ ಟಿಕೇಟ್ ಖರೀದಿಸಿ ನಷ್ಟ ಅನುಭವಿಸುತ್ತಾರೆ. ಜಾಹಿರಾತೂಗಳೂ ಗ್ರಾಹಕರಲ್ಲಿ ಕುತೂಹಲಗಳನ್ನು ಹುಟ್ಟುಹಾಕಿ ಚೆನ್ನಾಗಿ ಟೋಪಿ ಹಾಕಿಸುತ್ತವೆ. ಕುತೂಹಲ ಮಾಡುವುದು ವ್ಯಕ್ತಿಗಿಂತ ವ್ಯಕ್ತಿಗೆ ಭಿನ್ನವಿರುತ್ತದೆ. ಕೆಲವರಿಗೆ ಕೆಟ್ಟಕುತೂಹಲ ಅದುವೇ ಚಟ ಎನ್ನಬಹುದು. ರೂಪಾಂತರದಲ್ಲಿ ವಿಷಯ ಸಂಗ್ರಹ ಮಾಡುವುದು ಒಂದು ವಿಚಾರ ತಿಳಿಯಲು ಪ್ರಶ್ನೆಗಳ ಸರಮಾಲೆ ಪೋಣಿಸುವುದು. ಆಯ ವಯಸ್ಸಿಗೆ, ಮನೋಭಿಲಾಷೆಗೆ, ಆಸಕ್ತಿಗೆ ತಕ್ಕಂತೆ ನಿರೀಕ್ಷೆಗಳು ಇದ್ದೇ ಇರುತ್ತವೆ. ಕುತೂಹಲ ಹಕ್ಕೂ ಅಲ್ಲ, ಕರ್ತವ್ಯವೂ ಅಲ್ಲ, ವಿಚಾರವನ್ನು ಹಂಚಿಕೊಳ್ಳುವ ಸಮಾನ ಮನಸ್ಥಿತಿ ಇದ್ದರೆ ತಿಳಿಯಬಹುದು ಇಲ್ಲವಾದರೆಇಲ್ಲ. ಕುತೂಹಲ ಅವರ ವೈಯಕ್ತಿಕ ವಿಚಾರಗಳನ್ನು, ತೀರಾ ಖಾಸಗಿ ವಿಚಾರಗಳನ್ನು ಕೆಣಕುವಂತಿದ್ದರೆ ಖಂಡಿತಾ ಅದು ಸಹ ಅಸಹನೆಗೆ ದಾರಿ ಮಾಡಿಕೊಡುತ್ತದೆ.
ಮನುಷ್ಯರು ಯಾವಗಲೂ ಕುತೂಹಲದ ಚಿಲುಮೆಗಳಾಗಿರಬೇಕು, ವಿಷಯ ಕುತೂಹಲಿಯಾಗಿರಬೇಕು. ವಿಶ್ರೀಮತಿ ಬಿತ್ತುವ ಕುತೂಹಲಿಗಳಾಗಿರಬಾರದು. ಸಾಹಿತ್ಯದ ಓದುಗರು ರಸಾಸ್ವದನೆಯ, ಕಥನದ ಕುತೂಹಲಿಗಳಾಗಿರಬೇಕು. ಸಾಮಾಜಿಕರುಕದನ ಕತೂಹಲಿಗಳಾಗಬಾರದು. ಕುತೂಹಲ ಯಾರಲ್ಲಿ ಇರುವುದಿಲ್ಲವೋಅವರನ್ನು ನಿರಾಶವಾದಿಗಳಿಗೆ ಹೋಲಿಸಬಹುದು. ಕೆಲವೂಮ್ಮೆತೀವ್ರ ಕುತೂಹಲಗಳು ಭಾವನೆಗಳಿಗೆ ತಣ್ಣೀರೆಚುತ್ತದೆ. ಹಾಗಾಗದೆ ಹೊಸ ಆಸೆಗಳನ್ನು ಜೀವಂತಗೊಳಿಸುವಂತಿರಬೇಕು.
ಮನುಷ್ಯರ ಕುತೂಹಲಗಳು ಅವನನು ಆಶಾವಾದದಿಂದ ನೆಲೆಗೊಳಿಸಿ ಹೊಸ ಚೈತನ್ಯತುಂಬುತ್ತವೆ. ಕುತೂಹಲದಇನ್ನೊಂದು ಮುಖ ನಿರೀಕ್ಷೆ, ಅತೀ ನಿರೀಕ್ಷೆಗೆ ಆಸೆ ಎನ್ನಬಹುದು. ಆಸೆ ನೋಡುವ ದಿಕ್ಕನ್ನು ತೋರಿಸಿದರೆ, ನೀರಿಕ್ಷೆಎದುರು ನೋಡುವುದನ್ನು, ಪ್ರತೀಕ್ಷೆಯನ್ನು ಸೂಚಿಸುತ್ತದೆ. ಕುತೂಹಲ ಎಲ್ಲರಲ್ಲೂಇರಲಿ ಆದರೆಅದು ಕಾಳಜಿಯಿಂದ, ಕಳಕಳಿಯಿಂದ ಕೂಡಿರಬೇಕು. ಕುತೂಹಲದ ಹಳಿಯ ಮೇಲೆ ಜೀವನಯಾನ ಸಾಗುವುದುಏನಂತಿರೀ…….. ?
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ