- ಗುಂಪಿನಲ್ಲಿ ಗಾಂಪರಾಗುವ ಮನಸ್ಥಿತಿ - ಅಕ್ಟೋಬರ್ 30, 2024
- ಕಾನ್ ಬಾನ್ - ನವೆಂಬರ್ 12, 2020
- ನಾಳೆ ಶನಿವಾರ…! - ಸೆಪ್ಟೆಂಬರ್ 18, 2020
ಕ್ಯಾನ್ ಬಾನ್ ಎನ್ನುವ ಕೆಲಸ ಸುಲಭವಾಗಿಸುವ ತಂತ್ರ.
ಕ್ಯಾನ್ ಬಾನ್ ಅಂದರೆ ಜಪಾನ್ ಭಾ಼ಷೆಯಲ್ಲಿ ʼಸಜ್ಞೆಗಳ ಫಲಕʼ ನೇರವಾಗಿ ವಿಷಯಕ್ಕಿಳಿಯುತ್ತೇವೆ.ಈ ಅಂಕಣದಲ್ಲಿ ಮೊದಲಿಗೆ ಯಾವುದೆ ಪ್ರಶ್ನೆಗಳನ್ನು ಕೇಳುವುದಿಲ್ಲ.ಆದರೆ ನಾನು ಉತ್ತರವನ್ನು ಕೊಡುತ್ತೇನೆ ಅದಕ್ಕೆ ಅಂಕಣವನ್ನು ಓದಿದ ಮೇಲೆ ನೀವೆ ಪ್ರಶ್ನೆ ಕೇಳಿಕೊಳ್ಳಿ.ಬಹುಶಃ ನಮಗೆಲ್ಲರೇಗೂ ಈ ತೆರೆನಾದ ದಿನ ನಿತ್ಯದ ಕೆಲಸಗಳಿವೆ ಎಂದು ಕೊಳ್ಳೋಣ. ʼ
ಭಾಗ -೧
- ಬೆಳಗಿನ ವಾಯು ವಿಹಾರ ಮತ್ತು ಯೋಗ
- ನಂತರದಲ್ಲಿ ಬೆಳಗಿನ ಉಪಹಾರದ ನಂತರ ಕಛೇರಿಗೆ ಹೋಗುವುದಕ್ಕೆ ಸಿದ್ಧರಾಗುವುದು
- ಕಛೇರಿಯಲ್ಲಿ ದಿನ ನಿತ್ಯದ ಸಾಮನ್ಯ ಕೆಲಸಗಳು
- ನಂತರ ಮನೆಗೆ ವಾಪಾಸ್ಸಾಗುವುದು
- ಮಕ್ಕಳಿಗೆ ಶಾಲೆಯಲ್ಲಿ ಕೊಟ್ಟ ಮೆನಗೆಲಸವನ್ನು ಮಾಡುವುದಕ್ಕೆ ಸಹಾಯ ಮಾಡುವುದು
ಇದಿಷ್ಟು ದಿನಚರಿ ಎಂದಿಟ್ಟು ಕೊಂಡರೆ. ಇದಕ್ಕೆ ಹೊರತಾಗಿಯೂ ನಮಗೆ ಕೆಲವು ಕೆಲಸಗಳು ಬಂದರೆಗುತ್ತವೆ ಅಂದುಕೊಳ್ಳೋಣ.ಉದಾಹರಣೆಗೆ- ಭಾಗ – ೨
- ನಾಲ್ಕೈದು ದಿನಗಳಲ್ಲಿ ಮಕ್ಕಳ ಶಾಲಾ ಶುಲ್ಕ ಭರ್ತಿ ಮಾಡಲಿಕ್ಕಿದೆ
- ಮನೆಯಲ್ಲಿ ಯಾರಿಗಾದರು ಆಸ್ಪತ್ರೆಗೆ ಕರೆದು ಕೊಂಡು ಹೋಗುವುದಿದೆ
- ಮನೆಯಲ್ಲಿ ಕೆಟ್ಟು ಹೋಗಿರುವ ಮಿಕ್ಸಿಯನ್ನು ರೆಪೇರಿಗೆ ಕೊಡಬೇಕಾಗಿದೆ
ಈಗ ನೋಡಿ ಭಾಗ-೧ ರಲ್ಲಿ ಯಾವುದು ಬದಲಾಗುವುದಿಲ್ಲ.ಕಾರಣ ಅದು ನಮ್ಮ ದಿನಚರಿ. ಭಾಗ- ೨ ಅದು ನಮಗೆ ಬಂದರೆಗಿದ ಹೆಚ್ಚಿನ ಅಥವಾ ಆಕಸ್ಮಿಕವೂ ಎನ್ನ ಬಹುದಾದ ಕೆಲಸಗಳು.ಭಾಗ-೨ ರ ಕೆಲಸಗಳನ್ನು ಎಲ್ಲವೂ ಒಂದೇ ದಿನ ಅಥವಾ ಒಂದೇ ಸಮಯಕ್ಕೆ ಮಾಡಲಾಗುವುದಿಲ್ಲ.ಹಾಗಾಗಿ ಇಲ್ಲಿ ಕೆಳಗೆ ಕೊಟ್ಟಿರುವ ಕೋಷ್ಟಕವನ್ನು ಗಮನಿಸಿ.ಈ ಕೋಷ್ಟಕದಿಂದ ನಮಗೆ ಈಗ ಮಾಡಬೇಕಾಗಿರುವ(ತುರ್ತು) ಕೆಲಸಗಳ ಒಂದು ಸಂಕ್ಷಿಪ್ತ ನೋಟ ಸಿಗುವುದು.ಈ ಎಲ್ಲಾ ಕೆಲಸಗಳನ್ನು ಒಟ್ಟಿಗೆ ಮಾಡಲಾಗುವುದಿಲ್ಲ.ಕಾರಣ ನಮಗಿರುವ ಇತಿಮಿತಿಗಳು.ಆದರೆ ಇಲ್ಲಿ ಒಂದನ್ನು ಗಮನಿಸ ಬೇಕು.ಆದ್ಯತೆಯು ಪ್ರಮುಖವಾಗಿ ಪಾತ್ರ ವಹಿಸುತ್ತದೆ. ಇಲ್ಲಿ ನೋಡಿ ಕ್ರಮ ಸಂಖ್ಯ ೨ ಅತೀ ಪ್ರಾಮುಖ್ಯವಾದ ಕೆಲಸ.ಹಾಗಾಗಿ ಅದನ್ನು ಮೊದಲು ಕೈಗೆತ್ತಿಕೊಳ್ಳೋಣ. ಅಂದರೆ ನಮ್ಮ ಮನೆಯ ಸದಸ್ಯರಲ್ಲಿ ಒಬ್ಬರಿಗೆ (ಯಾರಿಗೂ ಏನು ಆಗದಿರಲಿ. ಸುಮ್ಮನೆ ಉದಾಹರಣೆಗೆ). ಆಸ್ಪತ್ರೆಗೆ ಹೋಗಿದ್ದೇವೆ .
ಇಲ್ಲಿ ಆಸ್ಪತ್ರೆಗೆ ಹೋದ ನಂತರ ವೈದ್ಯರ ಸಂದರ್ಶನದ ನಂತರ ವೈದ್ಯರು ಕೆಲವು ಮಾತ್ರೆಗಳನ್ನು ಕೊಟ್ಟು ಕಳುಹಿಸಿದ್ದಾರೆ ಎಂದು ಕೊಂಡರೆ ಕೆಲಸ ಮುಗಿದಂತೆ.ಒಂದು ವೇಳೆ ಹೆಚ್ಚಿನ ವಿವರಕ್ಕಾಗಿ ರಕ್ತ /ಮೂತ್ರದ ಮಾದರಿಗಳನ್ನು ಪರೀಕ್ಷಿಸಲು ಹೇಳಿದ್ದಾರೆ ಎಂದು ಕೊಳ್ಳೋಣ.ಹಾಗಾದಾಗ ಆ ಕೆಲಸವು ʼಮಾಡ ಬೇಕಾಗಿರುವʼ ಕೆಲಸದಿಂದ ʼಪ್ರಗತಿʼ ಯ ಹಂತಕ್ಕೆ ಬಂದಿದೆ.
ಒಂದನ್ನು ಗಮನಿಸಿ.ನಾವು ಮತ್ತೆ ಎಡದಿಂದ ಬಲಕ್ಕೆ ಹೋಗುವುದಿಲ್ಲ.ಆದರೆ ಬಲದಿಂದ ಎಡಕ್ಕೆ ಬರುತ್ತೇವೆ.ಅಲ್ಲದೆ ಇಲ್ಲಿ ನಾವು ಕೆಲಸವನ್ನು ಮೈಮೇಲೆ ಎಳೆದುಕೊಳ್ಳುವುದಿಲ್ಲ.ಬದಲಾಗಿ ಕೆಲಸವನ್ನು ʼತಳ್ಳಿʼ (ಮಾಡಬೇಕಾಗಿರುವ ಹಂತದಿಂದ ಪ್ರಗತಿ ಮತ್ತು ನಂತರ ಮುಕ್ತಾಯ ಹಂತಕ್ಕೆ).ಈಗೆ ಎಡದಿಂದ ಬಲಕ್ಕೆ ಬಂದರೆ ಮೊದಲು ನಮಗೆ ದೊರೆಯುವುದು – ರಕ್ತ ಮತ್ತು ಮೂತ್ರ ಮಾದರಿಯ ವರದಿಯನ್ನು ಲ್ಯಾಬರೇಟರಿಯಿಂದ ತಂದು ವೈದ್ಯರಲ್ಲಿಗೆ ಹೋಗುವುದು. ಒಂದು ವೇಳೆ ವೈದ್ಯರಲ್ಲಿಗೆ ಹೋಗಿ ಆ ಕೆಲಸವು ಮುಗಿದು ಹೋಗಿದೆ ಎಂದು ಕೊಳ್ಳಿ.ಆಗ ನಮಗುಳಿದಿರುವುದು –ಕೆಳಗಿನ ಕೆಲಸಗಳು.ಅದರಲ್ಲೂ ಆದ್ಯತೆಯ ಕೆಲಸವೆಂದರೆ ಶಾಲಾ ಶುಲ್ಕ ಭರ್ತಿ ಮಾಡುವುದು.ಆ ಕೆಲಸವನ್ನು ಕೈಗೆತ್ತಿಕೊಂಡು ಅದಕ್ಕೆ ಸಂಬಂಧ ಪಟ್ಟ ಕೆಲವು ಬ್ಯಾಂಕ್ ಕೆಲಸಗಳನ್ನು ಪೂರ್ತಿಯಾಗಿದೆ ಎಂದಿಟ್ಟು ಕೊಳ್ಳೋಣ.ಹಾಗಾಗಿ ಆ ಕೆಸಲವು .ಮಾಡ ಬೇಕಾಗಿರುವʼ ಹಂತದಿಂದ ʼಪ್ರಗತಿʼಯ ಹಂತಕ್ಕೆ ಬಂದಿದೆ.ಮತ್ತ ನಾವು ಎಡದಿಂದ ಬಲಕ್ಕೆ ಬಂದರೆ ನಮಗೆ ಸಿಗುವುದು ಮತ್ತೆ ಶಾಲಾ ಶುಲ್ಕವನ್ನು ಭರ್ತಿ ಮಾಡುವುದು.ಅಂದರೆ ಅದೆ ಕೆಲಸವನ್ನು ಮೊದಲಿಗೆ ಕೈಗೆತ್ತಿಕೊಳ್ಳಬೇಕು.
ಕ್ರಮ ಸಂಖ್ಯೆ ಮಾಡಬೇಕಾಗಿರುವ ಕೆಲಸ ಪ್ರಗತಿ ಪೂರ್ಣಗೊಂಡಿದೆ.
ಮೇಲಿನ ಕೆಲವು ಕೆಲಸಗಳು ಕೇವಲ ಉದಾಹರಣೆ ಅಷ್ಟೆ.ನಮಗೆ ಸಾಕಷ್ಟು ಕೆಲಸಗಳು ದಿನ ನಿತ್ಯ ಬಂದೆರಗುತ್ತವೆ.ಮತ್ತು ಅದಕ್ಕನುಗುಣವಾಗಿ ಒಂದು ಪಟ್ಟಿ ಮಾಡಿಟ್ಟುಕೊಂಡು ಕೆಲಸಗಳನ್ನು ತುಂಬಾ ಸುಲಭವಾಗಿ ಮುಕ್ತಾಯದ ಹಂತಕ್ಕೆ ತೆಗೆದುಕೊಂಡು ಹೋಗ ಬಹುದು.
- ಕೆಲಸಗಳನ್ನು ʼ ಮಾಡ ಬೇಕಾಗಿರುವʼ ಹಂತದಿಂದ ಶುರು ಮಾಡದೆ ʼಪ್ರಗತಿʼ ಹಂತದಿಂದ ಶುರು ಮಾಡುತ್ತೇವೆ.ಕಾರಣ ʼಪ್ರಗತಿʼ ಹಂತದಲ್ಲಿರುವ ಕೆಲಸಗಳು ಅತೀ ಆದ್ಯತೆಯ ಕೆಲಸಗಳು.
- ಅಲ್ಲದೆ ನಾವು ಕೆಲಸಗಳನ್ನು ಮೈಮೇಲೆ ಎಳೆದು ಕೊಳ್ಳದೆ ಕೆಲಸಗಳನ್ನು ʼತಳ್ಳುವʼ ವಿಧಾನದಿಂದ ಮಾಡುವದಿಂದ ನಮಗೆ ನಾವು ಮಾಡುವ ಕೆಲಸಗಳ ಮೇಲೆ ಒಂದು ನಿಯಂತ್ರಣವಿರುತ್ತದೆ.
- ಎಲ್ಲಕ್ಕಿಂತ ಮಿಗಿಲಾಗಿ ನಾವು ಮಾಡುವ ಕೆಲಸಗಳ ಪ್ರಗತಿಯ ಒಂದು ಸ್ಪಷ್ಟವಾದ ಚಿತ್ರಣ ಸಿಗುತ್ತದೆ.ಇಲ್ಲಿ ಇನ್ನೊಂದು ವಿಚಾರವನ್ನು ಹೇಳಲೆ ಬೇಕು.ಕೆಲಸಗಳನ್ನು ನಿಭಾಯಿಸಲು ಜಪಾನಿಯರು ಕಂಡುಕೊಂಡ ಒಂದು ತಂತ್ರ.ಜಪಾನಿಯರು ಕೆಲಸಗಳನ್ನು ಮಾಡುವಾಗ ʼಸಜ್ಞೆಗಳ ಫಲಕʼ ದೆ ಮೇಲೆ ಒಂದು ಬಣ್ಣ ಬಣ್ಣದ ಚೀಟಿ ಅಂಟಿಸಿ ಆ ಒಂದೊಂದು ಬಣ್ಣಕ್ಕೂ ಒಂದು ವಿವರಣೆಯನ್ನು ಕೊಟ್ಟಿರುತ್ತಾರೆ.ಹೀಗಾದಾಗ ನಾವು ಫಲಕದ ಹತ್ತಿರಕ್ಕೆ ಹೋಗಿ ನೋಡುವುದು ಬೇಕಾಗಿಲ್ಲ.ದೂರದಿಂದಲೆ ನೋಡಿದರೆ ಕೆಲಸಗಳ ಬಗ್ಗೆ ಒಂದು ಅಂದಾಜು ಸಿಗುತ್ತದೆ.
- ಇದಿಷ್ಟು ಕ್ಯಾನ್ ಬಾನ್ ಬಗ್ಗೆ.ನಾವು ಕ್ಯಾನ್ ಬಾನ್ ಅನ್ನು ದಿನ ನಿತ್ಯದ ಕೆಲಸಕ್ಕೂ ಅನ್ವಯಿಸಿಕೊಳ್ಳ ಬಹುದು.ಒಂದು ವೇಳೆ ನಮ್ಮ ದಿನ ಚರಿ ತುಂಬಾ ಬಿಗಿಯಿಂದ(ಅಂದರೆ ಸಮಯದ ಅಭಾವ) ಮತ್ತು ದಿನಚರಿಯನ್ನು ಬಿಟ್ಟು ಮಾಡಬೇಕಾಗಿರುವ ಕೆಲಸಗಳು ಇನ್ನೂ ಹೆಚ್ಚಾಗಿದ್ದರೆ ಆ ಸಂದರ್ಭದಲ್ಲಿ ಕ್ಯಾನ್ ಬಾನ್ ತಂತ್ರಗಾರಿಕೆ ತುಂಬಾ ಫಲಕಾರಿಯಾಗಿರುತ್ತದೆ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ