ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನರಸಿಂಹ ಮೂರ್ತಿ ಜನಾರ್ಧನ್
ಇತ್ತೀಚಿನ ಬರಹಗಳು: ನರಸಿಂಹ ಮೂರ್ತಿ ಜನಾರ್ಧನ್ (ಎಲ್ಲವನ್ನು ಓದಿ)
ಚಿತ್ರ ಕೃಪೆ : Emre Can Acer

ನದಿಯೆಂದರೆ ಹರಿಯಬೇಕು
ಪಳ ಪಳ
ಹೊಳೆಯಬೇಕು
ಜುಳು ಜುಳು ಮೊಳಗಬೇಕು
ಹಳ್ಳ ಕೊಳ್ಳ
ಮೆರೆಯಬೇಕು
ಜಲಪಾತವಾಗಬೇಕು!

ಜಲರಾಶಿಗೆ ಶಕ್ತಿ ನೀನು
ವನರಾಶಿ ಹರಿವು ನೀನು
ಮನುಕುಲಕ್ಕೆ ಧನ್ವಂತರಿ ನೀನು!
ಪಾಪ ತೊಳಿಯೋ ಗಂಗೆ ನೀನು
ಕೊಳೆ ತೆಗಿಯೋ ವರ್ಷ ನೀನು
ನಮ್ ಅಡಗಿಸೋ ತಾಯೇ ನೀನು!

ಆದ್ರೆ ನಾವು…

ನಿನ್ನ ದಾರಿ ತಡಿಯೋ ಭೂಪ ನಾವು
ನಿನ್ನ ಮಲಿನ ದೊರೆಯು ನಾವು
ನಿನ್ನ ಸಾವಿಗೆ ಮೂಲ ನಾವು!

ನಾವು ಮನುಷ್ಯರು!