ಇತ್ತೀಚಿನ ಬರಹಗಳು: ಕು.ಸ.ಮಧುಸೂದನ ರಂಗೇನಹಳ್ಳಿ (ಎಲ್ಲವನ್ನು ಓದಿ)
- ಕವಿತೆ ಹುಟ್ಟುವುದಕ್ಕೆ ಹೊತ್ತು ಗೊತ್ತಿಲ್ಲ - ಆಗಸ್ಟ್ 6, 2023
- ಇದೇನು ನಾಟಕವಲ್ಲ - ಜನವರಿ 30, 2022
- ಕು.ಸ.ಮಧುಸೂದನರ ಎರಡು ಕವಿತೆಗಳು - ಡಿಸಂಬರ್ 21, 2021
ನನ್ನೊಳಗೆ
ಬೆಳಕಿದೆಯೆಂದು
ಎಲ್ಲರೂ ಅಂದುಕೊಂಡಿದ್ದಾರೆ
ಗೊತ್ತಿಲ್ಲ ಅವರುಗಳಿಗೆ ನಾನೋ
ಉರಿಯುವ ಸೂರ್ಯನನ್ನು
ಹೊತ್ತು ತಿರುಗುತ್ತಿದ್ದೇನೆ!
ನನ್ನೊಳಗೆ
ತಂಪಿದೆಯೆಂದು
ಎಲ್ಲರೂ ಅಂದುಕೊಂಡಿದ್ದಾರೆ
ಗೊತ್ತಿಲ್ಲ ಅವರುಗಳಿಗೆ ನಾನೊ
ಹಿಮಶಿಖರದ ಹೆಪ್ಪುಗಟ್ಟಿದ
ಹೆಬ್ಬಂಡೆಯಾಗಿ ಅಲೆಯುತ್ತಿದ್ದೇನೆ!
ನನ್ನೊಳಗೆ
ಪ್ರೇಮವಿದೆಯೆಂದು
ಎಲ್ಲರೂ ಅಂದುಕೊಂಡಿದ್ದಾರೆ
ಗೊತ್ತಿಲ್ಲ ಅವರುಗಳಿಗೆ ನಾನೊ
ಕೊಳೆತು ಹೋದ ಅದರ
ಹೆಣವ ಹೆಗಲಮೇಲೆ ಹೊತ್ತು ನಡೆಯುತ್ತಿದ್ದೇನೆ.
ಚಿತ್ರ ಕೃಪೆ: ಪೌಲ್ ಕ್ಲೀ, ೧೯೨೧ ಆರ್ಟ್ ಇನ್ಸ್ಟಿಟ್ಯೂಟ್ ಆಫ್ ಚಿಕಾಗೋ, ಪಬ್ಲಿಕ್ ಡೊಮೇನ್
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ