ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನೋವು:ಜಿಬ್ರಾನ್ ನ ಒಂದು ಕವಿತೆ
ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

ಜಿಬ್ರಾನ್ ನ ಒಂದು ಕವಿತೆ

ನಿಮ್ಮ ನೋವು
ನಿಮ್ಮ ಅಪಾರ ಜ್ಞಾನದ
ಕವಚ ಒಡೆದಾಗ ಹುಟ್ಟಿದ್ದು..
ಗಟ್ಟಿ ಹಣ್ಣುಗಳು ಕೂಡ
ಒಡೆದು ಬಿಸಿಲಲ್ಲಿ ಬೆಂಡಾಗಿ
ನೋವು ಪಡುವದನ್ನ ನೀವೂ ಅರಿಯಬೇಕು..
ಅನುದಿನದ ಜೀವನದ ಅದ್ಭುತಗಳಿಗೇಕೆ ಅಚ್ಚರಿಯು?
ನೋವು ನಲಿವಿಗಿಂತ ಕಮ್ಮಿಯೇನು ಬೆರಗಿನಲ್ಲಿ???
ನಿಮ್ಮ ಗದ್ದೆಗಳ ಮೇಲೆ ಹಾಯುವ ಎಲ್ಲ ಋತುಮಾನಗಳ ಸಾಲೂ ಸಾಲೂ, ನಿಮ್ಮೆದೆಯ ಮೇಲೂ..
ಎನ್ನುವುದು ಸರಿ ತಾನೇ?
ವ್ಯಥೆಯ ಚಳಿಗಾಲ ಕೂಡ ಎಂಥ ಪ್ರಶಾಂತ…!
ಹೆಚ್ಚು ಕಮ್ಮಿ ಎಲ್ಲ ನೋವುಗಳನ್ನು ನೀವೇ ಆಯ್ದುಕೊಂಡಿದ್ದು..
ನಿಮ್ಮೊಳಗಿನ ವೈದ್ಯನೇ,
ಕಹಿಯಾದರೂ ವಾಸಿ ಮಾಡುತ್ತಾನೆ.. ನಂಬಿಕೆಯೊಂದಿರಲಿ ಅಷ್ಟೇ..
ಸದ್ದಿಲ್ಲದೆ ನೆಮ್ಮದಿಯಿಂದ ಅವನ ಔಷಧಿ ಕುಡಿಯಿರಿ..
ಅವನ ಭಾರ ಹಾಗೂ ಬಿರುಸಿನ
ಕೈಗಳ ಹಿಂದೆ ಕಾಣದವನೊಬ್ಬನ
ಮೆದು ಹಸ್ತದ ಅಭಯವಿದೆ..
ಅವನು ತರುವ ಲೋಟ
ನಿಮ್ಮ ತುಟಿಗಳಿಗೆ ತುಸು ಬಿಸಿಯಾದರೂ, ಅದರೊಳಗಿನ ಮಣ್ಣು…!,
ಕುಂಬಾರನದೇ ಪವಿತ್ರ ಕಣ್ಣೀರಲಿ ನೆಂದು ಬೆಂದಿದ್ದು ..
ನೆನಪಿರಲಿ…..?

ಮೂಲ: ಖಲಿಲ್ ಜಿಬ್ರಾನ್

Your pain is….


Your pain is the breaking of the shell
that encloses your understanding.

Even as the stone of the fruit must break,that its
heart may stand in the sun, so must you know pain.

And could you keep your heart in wonder
at the daily miracles of your life, your pain
would not seem less wondrous than your joy;

And you would accept the seasons of your
heart, even as you have always accepted
the seasons that pass over your fields.

And you would watch with serenity
through the winters of your grief.

Much of your pain is self-chosen.

It is the bitter potion by which the
physician within you heals your sick self.

Therefore trust the physician, and drink
his remedy in silence and tranquillity:

For his hand, though heavy and hard, is guided
by the tender hand of the Unseen,
And the cup he brings, though it burn your lips,
has been fashioned of the clay which the Potter
has moistened with His own sacred tears.