ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬದುಕ ಮಧ್ಯ

ಅಬ್ಳಿ ಹೆಗಡೆ
ಇತ್ತೀಚಿನ ಬರಹಗಳು: ಅಬ್ಳಿ ಹೆಗಡೆ (ಎಲ್ಲವನ್ನು ಓದಿ)

ಕಾಲ ಕಳೆದಂತೆಲ್ಲ…
ಹಾವು ಹಗ್ಗವಾಗುವದು.
ಹಾಲಾಹಲ ಹಾಲಾಗುವದು.
ವ್ಯರ್ಥ ಹಾಡುಗಳೆಲ್ಲ
ಅರ್ಥ ಪಡೆಯುವದು

ಕಲ್ಲು ಕಲೆಯಾಗುವದು
ಜೊಳ್ಳು ಕಾಳಾಗುವದು
ರುದ್ರ ಭೀಕರ ಸೃಷ್ಟಿ
ಮೋಹಗೊಳಿಸುವದು…

ಸಟೆಯು ದಿಟವಾಗುವದು
“ಮಾಟ” ಮಠವಾಗುವದು
ಕಾಳ ರಾತ್ರಿಯು ಕಳೆದು
ಹಗಲು ಮೂಡುವದು..

ಸಾವು ,ಹುಟ್ಟಾಗುವದು
ನೋವು, ನಲಿವಾಗುವದು
“ಕತ್ತೆ” ಅರಚಿದರೂನು
ಗಾನವಾಗುವದು…

“ಹಾದರ”ದ ಕತೆ ,ಕಾವ್ಯ,
ಕಾಮದಾಟವು, ಪ್ರೇಮ.
“ಜೊಲ್ಲು, ಪಂಚಾಮೃತವು
ಬದುಕಿನೊಳಗೆ…

ಸಾವು, ಹುಟ್ಪಿನ ಮಧ್ಯೆ
ಸತ್ತ ಬದುಕಿನ ಚಿತ್ರ
ಎಡೆಬಿಡದೆ ಸುತ್ತುತಿದೆ
ಮೇಲೆ ಕೆಳಗೆ…..!