ಇತ್ತೀಚಿನ ಬರಹಗಳು: ನಾಗರೇಖಾ ಗಾಂವ್ಕರ್ (ಎಲ್ಲವನ್ನು ಓದಿ)
- ಭಯವಿಹ್ವಲತೆ - ಅಕ್ಟೋಬರ್ 27, 2024
- ರವಿಯಂತೆ ಕವಿಯೂ- ಅಂಬಾರಕೊಡ್ಲದ ವಿಷ್ಣುನಾಯ್ಕರು - ಫೆಬ್ರುವರಿ 27, 2024
- ಎರಡು ಅನುವಾದಿತ ಕವಿತೆಗಳು - ಸೆಪ್ಟೆಂಬರ್ 26, 2020
ಈ ಬೇಲಿಗಳೇ ಹಾಗೇ…
ಒಂದೇ ಆಗಿದ್ದ ನೆಲದ ನಡುವೆ
ನಟ್ಟನಡು ನಿಂತು ಬೇರ್ಪಡಿಸಿ
ಹಾಯಾಗಿದ್ದು ಬಿಡುತ್ತವೆ.
ಈ ಬೇಲಿಗಳೇ ಹೀಗೆ..
ಗೂಟಗೂಟದ ನಡುವೆ ಹೊಸೆದ
ಹಗ್ಗವೋ, ಬಳ್ಳಿಯೋ ಅಲ್ಲೇ ಚಿಗುರನ್ನು ಬರಿಸಿ
ತೃಪ್ತವಾಗುತ್ತವೆ.
ಬಿದಿರು ಗಳದ ಬೇಲಿಗಳು
ಇದ್ದಷ್ಟೂ ಕಾಲ ಎಲ್ಲವೂ
ಹಾಗೇ ಹೀಗೆ ಇದ್ದವು.
ತಂತಿಬೇಲಿಗಳು ಬಂದ ದಿನದಿಂದ
ನೆಲದ ಒಡೆತನದ ಭಾಗ
ಇಬ್ಭಾಗ ಖಂಡತುಂಡವಾಗಿ
ಬೇರ್ಪಡಿಸುವಿಕೆ ಸಲೀಸಾಯಿತು.
ಆದರೆ,
ಒಂದಿಷ್ಟು ಆಚೀಚೆ ಜರುಗಿಸಹೋದರೂ
ಕೈಗೆ ಹತ್ತಿದ ಕಬ್ಬಿಣದ
ಮುಳ್ಳು ರಕ್ತ ಬಸಿಯಿತು…
ಅಂದಿನಿಂದ
ಬೇಲಿಯಲ್ಲಿ ಚಿಗುರ ಕಾಣುವ ಕನಸೂ ಕುಸಿಯಿತು..
ಹೆಚ್ಚಿನ ಬರಹಗಳಿಗಾಗಿ
ಸಂಕ್ರಾಂತಿ
ಹುಣ್ಣಿಮೆ ರಾತ್ರಿ ದೇವರಾಡುವನು
ಮಹಾಸಾಗರವಾದಳು