ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹಸನ್ ರವರ ಬ್ಯಾರಿ ಕವಿತೆಯ ಜೊತೆಗೆ, ಕರ್ನಾಟಕದ ಉಪಭಾಷೆಗಳ ಸಾಹಿತ್ಯಕ್ಕೂ ಗೌರವ ಸಲ್ಲಿಸುವ ಕೆಲಸ ನಸುಕು.ಕಾಮ್ ಆರಂಭಿಸಿದೆ.
ಎಂ ಹೆಚ್ ಹಸನ್ ಝುಹ್‌ರಿ
ಇತ್ತೀಚಿನ ಬರಹಗಳು: ಎಂ ಹೆಚ್ ಹಸನ್ ಝುಹ್‌ರಿ (ಎಲ್ಲವನ್ನು ಓದಿ)

ಮನುಷ್ಯ
ದುನಿಯಾವುಗು
ಬನ್ನ ಕೈ ಮುಷ್ಟಿ
ಪಿಡಿಚಿಟ್

ದುನಿಯಾವುಗು ಬನ್
ಅಧಿಕಾರ ಕಾಟ್ರ
ಬಿಯಾರ್‌ಚಿಟ್

ಪೈಸ,ಸಂಪತ್ತ್,
ಅಧಿಕಾರ
ಉಂಡಾಕಿಯ
ಕಷ್ಟ ಪಟ್‌ಟ್

ಜೀವಿಕ್‌ರೆ ಆಸೆಲ್
ಅವುನು ಮುನ್ನೊಲ್
ಪೋಯ ಅಲ್ಲಾಹುಡ
ನೆನಪಾಕಾಂಟ್

ಬಾಲ್‌ವ ಪೋಯಿಟ್
ಬಯಸ್ ಆಯಪ್ಪ
ಬುಲ್‌ಪಿಟ್ಟ ಜೀವನತೆ
ಬಿಯಾರ್‌ಚಿಟ್

ಜೀವನ ತೀಂತ್
ಪರಲೋಗ ಚಿಮ್ಮಾಯಿತ್
ಖೇದಿಚ್ಚ ಮನಸ್
ಪೋಟ್ಟಿಟ್

ಅಝ್‌ರಾಯಿಲ್ ಬಂತ್
ರೂಹ್ ಪಿಡಿಚಿತ್
ಅವಂಡೆ ಕಾಂಡ್
ಮಯ್ಯತ್ ಕಟಿಲ್
ಕೆಡಪಾಟಿಟ್

ಸಂಪತ್, ಪೆಂಙಯಿ
ಮಕ್ಕಳ ಬುಟು
ಯಾತ್ರೆ ಪೋಯ
ಒಂಟಿ ಯಾಯಿಟ್

ವಿವರಣೆ

ಮನುಷ್ಯನು ಭೂಮಿಗೆ ಬರುವಾಗ ಕೈ ಮುಷ್ಟಿ ಹಿಡಿದು ಬರುತ್ತಾನೆ.ಭೂಮಿಯಲ್ಲಿ ಅಧಿಕಾರ ಚಲಾಯಿಸುವ ಮೋಹ ಅವನಿಗೆ.ಹಣ,ಸಂಪತ್ತು ಮಾಡುತ್ತಾನೆ ಕಷ್ಟ ಪಟ್ಟು.ಬದುಕು ಕಟ್ಟುವ ದುರಾಸೆಗೆ ಬಿದ್ದು ಸೃಷ್ಟಿಕರ್ತನನ್ನು ಮರೆಯುತ್ತಾನೆ.ಯೌವನ ಕಳೆದು ಮುಪ್ಪು ಬಂದಾಗ ಜೀವನವನ್ನು ನೆನೆದು ಕಣ್ಣೀರು ಹಾಕುತ್ತಾನೆ.ಬದುಕು ಮುಗಿಯಿತು,ಜೀವನ‌ ಕತ್ತಲಾಯಿತು ಎಂದು ಅಳುತ್ತಾನೆ.ಹೆಂಡತಿ, ಮಕ್ಕಳು, ಸಂಪತ್ತು,ಅಧಿಕಾರ ತೊರೆದು ಇಹಲೋಕದಿಂದ ಯಾತ್ರೆ ಯಾಗುತ್ತಾನೆ.