ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ ಅಜಿತ್ ಹರೀಶಿ ಅವರ "ಮತ್ತೆ ಮಳೆ" ಯಲ್ಲಿ ಮಳೆಯನ್ನು ಪ್ರೀತಿಯಿಂದ ತರಾಟೆಗೆ ತೆಗೆದುಕೊಂಡ ಪರಿಯನ್ನು ಕೇಳಿ ಅಮ್ರತಾ ಶೆಟ್ಟಿ ಅವರ ವಾಚನದಲ್ಲಿ...!
ಡಾ. ಅಜಿತ್ ಹರಿಶಿ
ಇತ್ತೀಚಿನ ಬರಹಗಳು: ಡಾ. ಅಜಿತ್ ಹರಿಶಿ (ಎಲ್ಲವನ್ನು ಓದಿ)

ಮತ್ತೆ ಮಳೆ ಪ್ರೀತಿಯ ಹಾಗೆ
ಸುರಿಯುತ್ತದೆ ಧಾರಾಕಾರ
ಒಮ್ಮೊಮ್ಮೆ ಬರೀ ಗುಡುಗು
ಸಿಡಿಲಿನ ಹೂಂಕಾರ
ಮತ್ತೊಮ್ಮೆ ಎಡೆಬಿಡದೆ
ನಯವಾಗಿ ಬಿತ್ತರ

ಮತ್ತೆ ಮಳೆ ವ್ಯಸನದ ಹಾಗೆ
ಬಿಟ್ಟೇನೆಂದರೂ ಬಿಡದು
ಕಾಡುವುದು ಹೋಗೆಂದರೂ
ಬೇಕೆಂದಾಗ ಬರದೇ
ಮಾಡುವುದು ಚಡಪಡಿಕೆ
ಮಗದೊಮ್ಮೆ ಮೈಮರೆಸುವುದು

ಮತ್ತೆ ಮಳೆ ಜೀವನದ ಹಾಗೆ
ಏರಿಳಿತದ ನಡಿಗೆ
ಆಗಾಗ ಸಿಂಚನ
ಜೊತೆಗೊಂದಿಷ್ಟು ಕಂಪನ
ಇನ್ನೇನು ಮುಗಿದೇ ಹೋಯ್ತು
ಅಂದಾಗಲೂ
ಮತ್ತೆ ಬರುವ ರೋಮಾಂಚನ !