ಇತ್ತೀಚಿನ ಬರಹಗಳು: ಪ್ರಜ್ಞಾ ಮತ್ತಿಹಳ್ಳಿ (ಎಲ್ಲವನ್ನು ಓದಿ)
- ವಿನಾಯಕರ ಪ್ರತಿಜ್ಞೆ ಎಂಬ ಕವಿತೆ - ಆಗಸ್ಟ್ 9, 2021
- ಒಲವಿಲ್ಲದ ಪೂಜೆ - ಮೇ 14, 2021
- ಪರಿವಾರ ಪ್ರಿಯನಲ್ವೆ ಇಕ್ಷ್ವಾಕು ಸಂಜಾತ? - ಏಪ್ರಿಲ್ 20, 2021
ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರಾದ ಜ್ಞಾನಪೀಠ ಪ್ರಶಸ್ತಿ ವಿಜೇತ ಶ್ರೀ ವಿ. ಕೃ.ಗೋಕಾಕರ ಜನ್ಮದಿನ ಆಗಸ್ಟ್ ೯. ಈ ಪ್ರಯುಕ್ತ ಪ್ರಜ್ಞಾ ಮತ್ತಿಹಳ್ಳಿ ಅವರ ವಿಶೇಷ ಲೇಖನ.
ತೇಲಲೀಯದುಗುಂಡು ಮುಳುಗಲೀಯದು ಬೆಂಡು
ಇಂತಿಪ್ಪ ಸಂಸಾರ ಶರಧಿಯ ದಾಂಟಿಸಿ ಕಾಯೊ
ಬಸವಣ್ಣನವರ ವಚನ ಕಾಲಾಂತಕನಲ್ಲಿ ಮೊರೆಯಿಟ್ಟು ಕೇಳಿಕೊಳ್ಳುವಾಗ ಈ ಭವದ ಬದುಕನ್ನು ಕಡಲಿನ ಈಸಿಗೆ ಹೋಲಿಸುತ್ತದೆ. ವಿನಾಯಕರ ಪ್ರತಿಜ್ಞೆ ಕವಿತೆಯಲ್ಲಿ ಸಮುದ್ರ ವಿವಿಧ ಬಗೆಯ ಪ್ರತಿಮೆಗಳಾಗಿ ಅನಾವರಣಗೊಳಿಸುತ್ತದೆ. ಈ ಕವಿತೆ ಗುಂಡಿನಂತಹ ಭಾರದ ಭಾವಗಳನ್ನು ನೀಗಿ ಹಗುರಾಗುವ ತುರ್ತಿನೆಡೆಗೆ ಬೆರಳು ಚಾಚುತ್ತದೆ. ಹಗುರಾಗುವುದೆಂದರೆ ಗೋಕಾಕರಿಗೆ ಅಂತಿಂತಹ ಹಗುರಲ್ಲ. ಅಂತ:ಕರಣ ಕರಗಿ ನೀರಾಗಬೇಕು.
ನೀರು ನೀರಾಗಿ ಬೆಳಗು
ನಾದಮಯವಾಗು ಹೊರಗು ಒಳಗು
ಮಾನವೀಯತೆಯ ಮೊದಲ ಪಾಠವೇ ನಮ್ಮ ಒಳಗಿನ ಭಾವಗಳು ಕರಗಿ ನೀರಾಗುವುದು. ಹಾಗೆಂದು ಇದು ಬರೀ ದ್ರವೀಕರಣವನ್ನು ಬಯಸುವುದಿಲ್ಲ. ನೀರಾಗಿ ಬೆಳಗು ಎನ್ನುತ್ತದೆ. ಬೆಳಗಬೇಕೆಂದಾಗ ಮನುಷ್ಯ ತನ್ನ ವ್ಯಕ್ತಿತ್ವದ ಔನ್ನತ್ಯಕ್ಕೆ ಪ್ರಯತ್ನಿಸಬೇಕಾಗುತ್ತದೆ. ವರಕವಿ ಬೇಂದ್ರೆಯವರು ವಿನಾಯಕರ ಒಡನಾಡಿಗಳು ಹಾಗು ಸನ್ಮಿತ್ರರು. ಇಬ್ಬರಲ್ಲಿಯೂ ಸಮಾನವಾದ ಅನೇಕ ಸಂಗತಿಗಳಿದ್ದವು. ಅರವಿಂದರ ದರ್ಶನದಿಂದ ಪ್ರೇರಣೆ ಪಡೆದ ಕಾರಣದಿಂದ ವಿಚಾರಗಳೂ ಕೂಡ ಕೆಲಮಟ್ಟಿಗೆ ಸಾದೃಶ್ಯ ಪಡೆದಿರಬಹುದು.
ಕವಿ ಇಲ್ಲಿ ಒಳಗು ಹೊರಗು ನಾದಮಯವಾಗು ಎನ್ನುತ್ತಾನೆ. ಬಿದಿರು ಗಿಡ-ಮರಗಳಲ್ಲಿ ಅನನ್ಯವಾದುದು. ಹೂವಿಲ್ಲದೆಯೂ ಹಣ್ಣಿಲ್ಲದೆಯೂ ಕೂಡ ಅದು ತನ್ನ ಬದುಕನ್ನು ಸಾರ್ಥಕ ಮಾಡಿಕೊಂಡಿದೆ. ಇದಕ್ಕೆ ಕಾರಣವೆಂದರೆ ತನ್ನ ಒಳಗನ್ನು ಬರಿದುಗೊಳಿಸಿಕೊಳ್ಳುವ ಎದೆಗಾರಿಕೆ. ಒಳಗಿನದು ಖಾಲಿಯಾಗುತ್ತಲೇ ಅದು ಹಗುರಾಗುತ್ತದೆ. ಅಂತಹ ಬರಿದಾದ ಬಿದಿರಿನ ತುಂಡು ಗಾಳಿಯ ಉಸಿರು ದೊರೆತೊಡನೆಯೇ ನಾದ ಹೊಮ್ಮಿಸಬಲ್ಲುದು. ಪ್ರೀತಿ ತುಂಬಿದ ಉಸಿರಿನ ಸಾಂಗತ್ಯ ಸಿಕ್ಕಾಗ ಪ್ರೇಮಮಯ ನಾದಗಂಗೆಯಿಂದ ವಿಶ್ವವನ್ನೇ ಚಿನ್ಮಯಗೊಳಿಸಬಲ್ಲುದು. ಹಾಗೆಯೇ ಮನುಷ್ಯನೂ ಕೂಡ ಅಂತ:ಕರಣದ ಹುಲುಸಾದ ಹೊಲಸನ್ನು ನೀಗಿಕೊಂಡು ಹಗುರಾದರೆ ನಾದಮಯನಾಗಬಲ್ಲ.
ಈ ಕವಿತೆ ಓದುಗನ ಅರಿವಿನ ಪರದೆಯನ್ನು ತೆರೆತೆರೆಯಾಗಿ ತೆರೆಯುತ್ತ ಸಾಗುತ್ತದೆ.
ತೆರೆ ತೆರೆಯಾಗಿ ತೆರೆದರೆ
ನೊರೆ ನೊರೆಯಾಗಿ ಹರಿದೀತು
ಉಕ್ಕಲಿ-ಚಿಮ್ಮಲಿಸಮುದ್ರದ ಸ್ವಾತಂತ್ರ್ಯ
ಸಾಗರಕ್ಕೆ ಸಾಗರವೇ ಉಪಮೆ
ತೆರೆ ತೆರೆಯಾಗಿ ತೆರೆದರೆ
ನೊರೆ ನೊರೆಯಾಗಿ ಹರಿದೀತು
ಉಕ್ಕಲಿ-ಚಿಮ್ಮಲಿಸಮುದ್ರದ ಸ್ವಾತಂತ್ರ್ಯ
ಸಾಗರಕ್ಕೆ ಸಾಗರವೇ ಉಪಮೆ
ಎನ್ನುತ್ತಾರೆ. ಆಳವಾದ ಹಾಗೂ ವಿಸ್ತಾರವಾದ ವ್ಯಕ್ತಿತ್ವವನ್ನು ಹೊಂದಿದರೆ ಮಾನವೀಯತೆಯ ಆದರ್ಶವನ್ನು ಮೆರೆಯಲು ಸಾಧ್ಯವಾಗುತ್ತದೆ. ತನಗೆ ಬೇಕಾದುದನ್ನು ಒಳಗಿಳಿಸಿಕೊಳ್ಳುವ ಕಡಲು ತನಗೆ ಬೇಡ ಅನ್ನಿಸಿದ್ದನ್ನು ನಿರ್ದಾಕ್ಷಿಣ್ಯವಾಗಿ ದಂಡೆಗೆ ಎಸೆದು ಬಿಡುತ್ತದೆ. ಕಡಲಿನ ಸ್ವಾತಂತ್ರ್ಯವನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಉಕ್ಕುಕ್ಕಿ ಹರಿಯುವ ನೀರಿನ ಸೆಳೆತದಲ್ಲಿ ಸಮುದ್ರಕ್ಕೆ ಎಸೆದ ಎಲ್ಲ ವಸ್ತುಗಳೂ ಮತ್ತೆ ಸ್ವಲ್ಪ ಹೊತ್ತಿನಲ್ಲಿ ದಂಡೆಯ ಮರಳಿಗೆ ತಿರುಗಿ ಎಸೆಯಲ್ಪಡುತ್ತವೆ. ಬದುಕಿನ ಸಾಗರದಲ್ಲಿಯೂ ಅಷ್ಟೆ. ಯಾವುದು ಜರ್ಜರವೋ ಅಸ್ಥಿರವೋ ಅದು ಹೆಚ್ಚು ಕಾಲ ಉಳಿಯುವುದಿಲ್ಲ. ನಶ್ವರವಾದ ಈ ಪ್ರಪಂಚದಲ್ಲಿ ಪ್ರತಿಕ್ಷಣವೂ ಹೊಸದು ಹುಟ್ಟಿ ಬರುತ್ತಿರಬೇಕು. ವಿಚಾರವೇ ಇರಲಿ, ವಸ್ತುವೇ ಇರಲಿ ಅಥವಾ ಮೌಲ್ಯವೇ ಇರಲಿ ಯಾವುದೂ ಕೂಡ ಇಲ್ಲಿ ಶಾಶ್ವತವಲ್ಲ. ತನ್ನ ಪ್ರಸ್ತುತತೆಯನ್ನು ಕಳೆದುಕೊಂಡ ಕ್ಷಣವೇ ಅದು ನಶಿಸಿಬಿಡುತ್ತದೆ. ಗೋಕಾಕರು ಪ್ರತಿಕ್ಷಣವೂ ಹೊಸತೊಂದು ಹುಟ್ಟಿ ಬರಬೇಕೆಂಬ ಅಪೇಕ್ಷೆಯನ್ನು ಬಹಳ ಚೆನ್ನಾಗಿ ಮುಂದಿಡುತ್ತಾರೆ. ವರಕವಿಯ ಪದ್ಯದ ಸಾಲು ನೆನಪಾಗುತ್ತದೆ.
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ
ಬರೆಯುವುದೆಂದರೆ ಅದೊಂದು ಸೃಷ್ಟಿಕ್ರಿಯೆ. ಅದರಲ್ಲಿ ಹೊಸತನವಿರದಿದ್ದರೆ ಬರವಣಿಗೆ ಏಕತಾನವಾಗುತ್ತದೆ. ಹೊಸತನವಿರದಿರುವ ಬರಹವು ಓದುಗರ ಮನಸ್ಸಿನಲ್ಲಿ ಉಳಿಯುವುದಿಲ್ಲ. ಹಳೆಯ ವಿಚಾರಗಳೆಲ್ಲವೂ ಕೊಚ್ಚಿ ಹೋಗುವ ರೀತಿಯಲ್ಲಿ ಹೊಸ ಹೊಸ ವಿಚಾರಗಳು ನುಗ್ಗಿ ಬರಬೇಕು. ಆದ್ದರಿಂದ ಕವಿಯ ಮನಸ್ಸು ಸಣ್ಣಕೆರೆಯ ಹಾಗೆಯೋ ಅಥವಾ ಪುಟ್ಟ ಝರಿಯ ಹಾಗೆಯೋ ಇದ್ದರೆ ಸಾಲುವುದಿಲ್ಲ.
ಮಹತ್ವವಾದ ಕೃತಿ ರಚನೆಯಾಗಬೇಕಾದರೆ ಪ್ರತಿಭೆಯೆನ್ನುವುದು ಕವಿ ಮನಸ್ಸಿನಲ್ಲಿ ಭೋರ್ಗರೆದು ಉಕ್ಕಬೇಕು.
ತರಂಗೋತ್ತರಂಗಗಳನೊಳಗೊಂಡ
ನವರಂಗ ವಾರಿಧಿಯಂತೆ
ವೃತ್ತಬಂಧಗಳು ಸಂಧಿಸಿ ಬಂದ
ಸಮುದ್ರವಾಗು ಕವಿಯೆ
ತರಂಗೋತ್ತರಂಗಗಳನೊಳಗೊಂಡ
ನವರಂಗ ವಾರಿಧಿಯಂತೆ
ವೃತ್ತಬಂಧಗಳು ಸಂಧಿಸಿ ಬಂದ
ಸಮುದ್ರವಾಗು ಕವಿಯೆ
ವಿನಾಯಕರು ತನಗೆ ತಾನೇ ಹೇಳಿಕೊಳ್ಳುವ ಮಾತು ಇಡೀ ಕವಿ ಸಮುದಾಯಕ್ಕೇ ಹೇಳಿದ ಮಾತಿನಂತಿದೆ. ಯಾವುದೇ ಬರಹಗಾರ ತನ್ನ ಸೃಜನಶೀಲ ಪ್ರಕ್ರಿಯೆಯಲ್ಲಿ ಕೊರತೆಯುಳಿಯದಂತೆ ತೊಡಗಿಕೊಳ್ಳಬೇಕೆಂದರೆ ಆತನ ವ್ಯಕ್ತಿತ್ವದಲ್ಲಿ ಯಾವುದೇ ಊನ ಉಳಿದಿರಬಾರದು. ಆತನ ಮನಸ್ಸು ಮತ್ತು ಚೈತನ್ಯ ಎನ್ನುವುದು ಉಕ್ಕುವ ಕಡಲಿನಂತೆ ಸಮೃದ್ಧವಾಗಿರಬೇಕು. ಒಂದರ ಹಿಂದೊಂದು ಬೆನ್ನಟ್ಟಿ ಬರುವ ಅಲೆಗಳಂತೆ ಮನಸ್ಸಿನಲ್ಲಿ ವಿಚಾರಗಳ ಹೆದ್ದೆರೆ ಅಪ್ಪಳಿಸುತ್ತಿರಬೇಕು.
ಡಿ.ವಿ.ಜಿ.ಯವರೊಂದು ಕಡೆ ಹೇಳುತ್ತಾರೆ.
ಡಿ.ವಿ.ಜಿ.ಯವರೊಂದು ಕಡೆ ಹೇಳುತ್ತಾರೆ.
ಲೋಕಜೀವನದೆ ಮಾನಸದ ಪರಿಪಾಕವಾ
ಪಾಕದಿಂ ಮತಿಶುದ್ಧಿಯದರಿನೊಳದೃಷ್ಟಿ
ಸಾಫಲ್ಯದಾತ್ಮ ಸಂದರ್ಶನಕೆ ಕರಣವದು
ಲೋಕದಿಂ ನಿರ್ಲೋಕ ಮಂಕುತಿಮ್ಮ
ನಮ್ಮ ಮನ:ಶುದ್ಧಿಯಾದಾಗಲೇ ಒಳದೃಷ್ಟಿ ದೊರಕುತ್ತದೆ. ಅಲ್ಲಸಲ್ಲದ ವಿಷಮ ವಿಪರೀತ ಭಾವನೆಗಳು ದೂರವಾದ ನಂತರ ಬಗ್ಗಡವೆಲ್ಲ ತಳಕ್ಕಿಳಿದ ಕೊಳದಂತೆ ಮನಸ್ಸು ತಿಳಿಯಾಗುತ್ತದೆ. ಮೋಡ ಸರಿದ ಬಾನಿನಲ್ಲಿ ಹೊಳೆವ ಸೂರ್ಯನಂತೆ ಅಂತರಂಗದ ಬೆಳಕು ಮೊಳೆಯುತ್ತದೆ. ಆಗ ಬದುಕಿಗೂ ಹಾಗೂ ಬರವಣಿಗೆಗೂ ಒಂದು ಮೌಲಿಕತೆ ತಾನೇ ತಾನಾಗಿ ಪ್ರಾಪ್ತವಾಗುತ್ತದೆ. ಅಲ್ಲಿಯವರೆಗೆ ನಾವೇನೇ ಬರೆದರೂ ಅದು ಕೇವಲ ನಮ್ಮ ಭೃಮೆಯೇ ಆಗಿರುತ್ತದೆ. ಅದಕ್ಕಾಗಿಯೇ ವಿನಾಯಕರು ಹೇಳುತ್ತಾರೆ.
ಪಾಕದಿಂ ಮತಿಶುದ್ಧಿಯದರಿನೊಳದೃಷ್ಟಿ
ಸಾಫಲ್ಯದಾತ್ಮ ಸಂದರ್ಶನಕೆ ಕರಣವದು
ಲೋಕದಿಂ ನಿರ್ಲೋಕ ಮಂಕುತಿಮ್ಮ
ನಮ್ಮ ಮನ:ಶುದ್ಧಿಯಾದಾಗಲೇ ಒಳದೃಷ್ಟಿ ದೊರಕುತ್ತದೆ. ಅಲ್ಲಸಲ್ಲದ ವಿಷಮ ವಿಪರೀತ ಭಾವನೆಗಳು ದೂರವಾದ ನಂತರ ಬಗ್ಗಡವೆಲ್ಲ ತಳಕ್ಕಿಳಿದ ಕೊಳದಂತೆ ಮನಸ್ಸು ತಿಳಿಯಾಗುತ್ತದೆ. ಮೋಡ ಸರಿದ ಬಾನಿನಲ್ಲಿ ಹೊಳೆವ ಸೂರ್ಯನಂತೆ ಅಂತರಂಗದ ಬೆಳಕು ಮೊಳೆಯುತ್ತದೆ. ಆಗ ಬದುಕಿಗೂ ಹಾಗೂ ಬರವಣಿಗೆಗೂ ಒಂದು ಮೌಲಿಕತೆ ತಾನೇ ತಾನಾಗಿ ಪ್ರಾಪ್ತವಾಗುತ್ತದೆ. ಅಲ್ಲಿಯವರೆಗೆ ನಾವೇನೇ ಬರೆದರೂ ಅದು ಕೇವಲ ನಮ್ಮ ಭೃಮೆಯೇ ಆಗಿರುತ್ತದೆ. ಅದಕ್ಕಾಗಿಯೇ ವಿನಾಯಕರು ಹೇಳುತ್ತಾರೆ.
ಗೀತವನೊರೆದೆನೆಂದು ಗೀಳ್ ಮಾಡಬೇಡ
ಸಮುದ್ರವ ಸೆರೆ ಹಿಡಿದವರುಂಟೆ?
ಬಾವಿಯ ತೋಡಿ ಮುನ್ನೀರ ಬತ್ತಿಸಬಹುದೆ?
ಲೋಕದಲ್ಲಿ ಕವಿಪ್ರತಿಭೆ ಎನ್ನುವುದು ಒಂದು ಮಹಾ ಸಮುದ್ರವಿದ್ದಂತೆ. ನಾವೆಲ್ಲ ಕವಿಗಳು ಒಂದೋ ಎರಡೋ ಪದ್ಯ ಬರೆದರೆ ಬಾವಿ ತೋಡಿದ ಹಾಗೆ. ನೂರಾರು ಬಾವಿ ತೋಡಿದರೂ ಅದರಿಂದ ಸಮುದ್ರದ ನೀರು ಬತ್ತುವುದಿಲ್ಲ. ಅದಕ್ಕಾಗಿಯೇ ಕವಿ ಮುಂದುವರಿದು ಬರೆಯುವ ತೆವಲಿರುವ ಎಲ್ಲರಿಗೂ ಗುಡುಗಿನಂತೆ ಮಾತೊಂದನ್ನು ಹೇಳುತ್ತಾರೆ.
ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು
ಪ್ರತಿಭೆ ಯಾವತ್ತೂ ನವನವೋನ್ಮೇಶಶಾಲಿನಿ. ಹಳೆಯ ನೀರು ಸರಿದಂತೆ ಹೊಸ ನೀರು ನುಗ್ಗುತ್ತಿರುತ್ತದೆ. ಕಾವ್ಯ ಎನ್ನುವುದು ಉಕ್ಕಿ ಹರಿಯುವಾಗ ಛಂದೋಬಂಧದ ಚೌಕಟ್ಟಿನಲ್ಲಿ ಹಿಡಿದಿಡುತ್ತೇನೆಂದರೆ ಅದು ಅಸಾಧ್ಯವಾದ ವಿಚಾರ. ತುಂಬಿ ತುಳುಕುವ ಅನುಭವದ ಸಾರವನ್ನು ಸಾಗರದಂತೆ ಉಕ್ಕೇರುವ ಹೊಸ ಹುರುಪಿನಲ್ಲಿ ಅಕ್ಷರದ ಅಚ್ಚರಿಯ ಬೆಡಗಿನ ಲೋಕದಲ್ಲಿ ಸಂಚರಿಸುವ ಕವಿಯ ಮನೋವಿಲಾಸವನ್ನು ವಿನಾಯಕರ ಈ ಕವಿತೆ ಬಹಳ ಸುಂದರವಾಗಿ ಚಿತ್ರಿಸುತ್ತದೆ.
ಪ್ರತಿಭೆ ಯಾವತ್ತೂ ನವನವೋನ್ಮೇಶಶಾಲಿನಿ. ಹಳೆಯ ನೀರು ಸರಿದಂತೆ ಹೊಸ ನೀರು ನುಗ್ಗುತ್ತಿರುತ್ತದೆ. ಕಾವ್ಯ ಎನ್ನುವುದು ಉಕ್ಕಿ ಹರಿಯುವಾಗ ಛಂದೋಬಂಧದ ಚೌಕಟ್ಟಿನಲ್ಲಿ ಹಿಡಿದಿಡುತ್ತೇನೆಂದರೆ ಅದು ಅಸಾಧ್ಯವಾದ ವಿಚಾರ. ತುಂಬಿ ತುಳುಕುವ ಅನುಭವದ ಸಾರವನ್ನು ಸಾಗರದಂತೆ ಉಕ್ಕೇರುವ ಹೊಸ ಹುರುಪಿನಲ್ಲಿ ಅಕ್ಷರದ ಅಚ್ಚರಿಯ ಬೆಡಗಿನ ಲೋಕದಲ್ಲಿ ಸಂಚರಿಸುವ ಕವಿಯ ಮನೋವಿಲಾಸವನ್ನು ವಿನಾಯಕರ ಈ ಕವಿತೆ ಬಹಳ ಸುಂದರವಾಗಿ ಚಿತ್ರಿಸುತ್ತದೆ.
ಪ್ರತಿಯೊಂದು ಸಲ ಓದಿದಾಗಲೂ ಹೊಸ ಹೊಸ ಅರ್ಥವಿನ್ಯಾಸವನ್ನು ಪ್ರದರ್ಶಿಸುತ್ತ ಮತ್ತೆ ಮತ್ತೆ ಹೊಸ ದಿಕ್ಕುಗಳೆಡೆಗೆ ನೋಡಲು ಹಚ್ಚುವ ಈ ಕವಿತೆ ಕಾಲ-ದೇಶಗಳನ್ನು ಮೀರಿ ಪ್ರಸ್ತುತವಾಗುತ್ತದೆ. ನಿಚ್ಚಂ ಪೊಸತು ಅರ್ಣವವೊಲ್ ಎಂಬ ಕವಿ ವಾಣಿಯಂತೆ ದಿನವೂ ಹೊಸತೇ ಆಗಿಬಿಡುತ್ತದೆ.
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ