- ಗುಂಪಿನಲ್ಲಿ ಗಾಂಪರಾಗುವ ಮನಸ್ಥಿತಿ - ಅಕ್ಟೋಬರ್ 30, 2024
- ಕಾನ್ ಬಾನ್ - ನವೆಂಬರ್ 12, 2020
- ನಾಳೆ ಶನಿವಾರ…! - ಸೆಪ್ಟೆಂಬರ್ 18, 2020
ಭಾಷೆ ಹುಟ್ಟುವುದಕ್ಕೂ ಮೊದಲು ಕೇವಲ ಧ್ವನಿ ಏರಿಳಿತಗಳಿಂದಲೆ ತನ್ನ ಬೇಕು ಬೇಡಗಳನ್ನು ಮನುಷ್ಯ ರೆವಾನಿಸುತಿದ್ದ. ನಂತರದ ದಿನಗಳಲ್ಲಿ ಭಾಷೆಯ ಉಪಯೋಗಿಸುವುದನ್ನು ಕಲಿತ. ಮುಂದಿನ ದಿನಗಳಲ್ಲಿ ಶಬ್ದಗಳಲ್ಲೆ ಎಲ್ಲವನ್ನು ವಿವರಿಸಿಲು ಶುರು ಮಾಡಿದ.ಆದರೆ ಕಾಲಾಂತರದಲ್ಲಿ ಮನುಷ್ಯ ತನ್ನ ಸಂವಹನದಲ್ಲಿ ದೇಹಭಾಷೆ ಮತ್ತು ಶಬ್ದಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತಾನು ಹೇಳಬೇಕಾಗಿರುವುದನ್ನು ಸೂಚ್ಯವಾಗಿ ಅಥವಾ ಇನ್ನು ಧೃಢವಾಗಿ ಹೇಳಲು ಪ್ರಾರಂಭಿಸಿದ.
ಹೀಗಿರುವಾಗ ಕೆಲವೊಮ್ಮೆ ಸಂವಹನದಲ್ಲಿನ ಕೆಲವು ಭಾಗಗಳು ತುಂಬಾ ಮುಖ್ಯವಾಗಿ ವಿಶ್ಲೇಷಣೆ ಒಳಗೊಂಡವು.ಇದರ ಪರಿಣಾಮವೆನ್ನುವಂತೆ ಸಂವಹದಲ್ಲಿ ಸೂಚ್ಯವಾಗಿ ಅಥವಾ ಢಾಳಾಗಿಯೆ ಬಳಕೆಯಾಗುತ್ತಿರುವ ಋಣಾತ್ಮಕ ಸಂಕೇತಗಳು . ಈ ಋಣಾತ್ಮಕ ಸಂಕೇತಗಳು ಎರೆಡು ವಿಧಾನಗಳಿಂದ ರೆವಾನೆಯಾಗಬಹುದು –
೧) ದೇಹ ಭಾಷೆ
೨) ಧ್ವನಿಯ ಏರಿಳಿತಗಳು ಮತ್ತು ಬಳಸ ಬಹುದಾದ ಶಬ್ದಗಳು
ಈಗ ದೇಹ ಭಾಷೆಯಿಂದ ಯಾವ ತರಹದ ಋಣಾತ್ಮಕ ಸಂಕೇತಗಳು ರವಾನೆಯಾಗಬಹುದು ಎನ್ನುವದನ್ನು ಅರ್ಥ ಮಾಡಿಕೊಳ್ಳ ಬೇಕಾದರೆ ದೇಹ ಭಾಷೆಯನ್ನು ಇನ್ನು ಸೂಕ್ಷ್ಮವಾಗಿ ಅವಲೋಕಿಸಿಬೇಕಾಗುತ್ತದೆ .ದೇಹ ಭಾಷೆಯನ್ನು ಮೂರೂ ಭಾಗವಾಗಿ ವಿಭಾಗಿಸಬಹುದು .
೧ಅ) ಆಂಗಿಕ ಭಾಷೆ :- ದೇಹದ ಎಲ್ಲಾ ಭಾಗಗಳ ಬಳಕೆ ಇದ್ದರು ಇಲ್ಲಿ ಹೆಚ್ಚಾಗಿ ಕೈ ಚಲನೆಯೆ ಮುಖ್ಯಾವಾಗುತ್ತದೆ .ಸಂವಹದ ಮಧ್ಯದಲ್ಲಿ ದೀರ್ಘವಾಗಿ ಎರೆಡು ಕೈಗಳನ್ನು ಆ ಕಡೆ ಮತ್ತು ಈ ಕಡೆ ಚಲಿಸುವುದರಿಂದ (‘ನೋ’ ಎನ್ನುವ ಅರ್ಥದಲ್ಲಿ) ಸಂದೇಶ ರೆವಾನಿಸ ಬಹುದು .ಈ ಸಂಕೇತವು ಒಂದು ಉದಾಹರಣೆ ಅಷ್ಟೆ. ನಾವು ಸಂವಹನದಲ್ಲಿನ ಸಂದೇಶಗಳನ್ನು ವಿಶ್ಲೇಷಿದರೆ ಇನ್ನು ಸಿಗಬಹುದು.
೧ಬ) ಕಣ್ಣಿನ ಭಾಷೆ :- ಈ ಸಂಕೇತವು ಅಷ್ಟಾಗಿ ಮೇಲಿನ ನೋಟಕ್ಕೆ ಕಾಣುವುದು ತುಸು ಕಷ್ಟವೇ ಸರಿ. ತೀರಾ ಇತ್ತೀಚಿನ ತುಂಬಾ ಪ್ರಚಲಿತ ಮಲಯಾಳಂ ಸಿನಿಮಾ – ‘ಒರೂ ಆಧಾರ್ ಲವ್’ ಸಿನಿಮಾದಲ್ಲಿ ಒಬ್ಬ ಹುಡುಗಿ ಮತ್ತು ಒಬ್ಬ ಹುಡುಗನ ನಡೆಯುವ ಕಣ್ಣಿನ ಸಂವಹನವೇ ಇದಕ್ಕೆ ಒಂದು ಒಳ್ಳೆ ಉದಾಹರಣೆ .ಅಲ್ಲಿ ನಡೆದಿರುವುದು ಧನಾತ್ಮಕವಾದ ಸಂಕೇತಗಳ ರೇವಾನೆ .ಅದೇ ರೀತಿ ಋಣಾತ್ಮಕ ಸಂದೇಶಗಳ ರೇವಾನೆಗಾಗಿ ಅಥವಾ ವಿಷಯಕ್ಕೆ ಅಸಮ್ಮತಿ ಸೂಚಿಸಲು ‘ಕಣ್ಣಲ್ಲಿ ಕಣ್ಣಿಟ್ಟು ನೋಡುವುದು’ ತಪ್ಪಿಸ ಬಹುದು .
೧ಕ) ಮುಖದ ಭಾವನೆಗಳು :-ಇದು ತುಂಬಾ ಸರಳ ಮತ್ತು ಅಷ್ಟೆ ಪರಿಣಾಮಕಾರಿಯಾದ ಬಳಕೆಯಾಗಿದೆ .ನಮಗೆ ಸಮ್ಮತಿ ಇಲ್ಲದೆ ಹೋದರೆ ಮುಖದ ಭಾವನೆಗಳಲ್ಲಿಯೆ ನಮ್ಮ ಸಂದೇಶಗಳನ್ನು ರೇವಾನಿಸ ಬಹುದು . ನಾವು ಬಸ್ ನಿಲ್ದಾಣಗಳಲ್ಲಿ ನಿಂತಿರುವಾಗ ನಮಗೆ ಗೊತ್ತಿಲ್ಲದೆಯೆ ನಾವು ನಮ್ಮ ಹತ್ತಿರಕ್ಕೆ ಬರುತ್ತಿರುವ ‘ಸೇಲ್ಸ್ ಮೆನ್ ‘ ಮುಖದ ಭಾವನೆಯಿಂದಲೆ ದೂರವಿಡುತ್ತೇವೆ .
೨) ಧ್ವನಿಯ ಏರಿಳಿತಗಳು :- ಮಾತಿನ ವರಸೆ ಮತ್ತು ಧಾಟಿ ಹಾಗು ಸಭೆ / ಜನರ ಮನೋಭೂಮಿಕೆಗಳನ್ನು ಗಮನಿಸಿ ಧ್ವನಿ ಏರಿಳಿತಗಳನ್ನು ಬಳಸಲಾಗುವುದು.ಇದಕ್ಕೆ ಒಳ್ಳೆ ಉದಾಹರಣೆ ಎಂದರೆ ನಮ್ಮ ಪೋಷಕರು ಅಥವಾ ಮೇಲಿನ ಅಧಿಕಾರಿಗಳು ಪದೇ ಪದೇ ಅದೆ ತಪ್ಪನ್ನು ಮಾಡುತಿದ್ದರೆ ಏರಿದ ಧ್ವನಿಯಲ್ಲಿ ಗದರಿಸುತ್ತಾರೆ ಅದೇ ಅಪರೂಪವಾಗಿ ತಪ್ಪನ್ನು ಮಾಡಿದರೆ ಮೊದಲ ಬಾರಿಗೆ ಇಳಿದ ಧ್ವನಿಯಲ್ಲಿ ಎಚ್ಚರಿಸುತ್ತಾರೆ. ಕೇವಲ ಧ್ವನಿಯಿಂದಲೆ ತಮ್ಮ ಅಸಮ್ಮತಿಯನ್ನು ಸೂಚಿಸುತ್ತಾರೆ . ಮೇಲಿನ ಎಲ್ಲ ನಿದರ್ಶನಗಳು ತುಂಬಾ ಸರಳವಾದ ಕೆಲವು ಉದಾಹರಣೆಗಳು ಅಷ್ಟೆ .ನಮ್ಮ ಅಧ್ಯಯನ ಮತ್ತು ವಿಶ್ಲೇಷಣೆಗಳಿಂದ ಇನ್ನಷ್ಟು ಕೆದಕಿ ಹೊರ ಹಾಕಬಹುದು.
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..