ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಖಿಗೊಂದು ಸುಖೀ ಗೀತೆ - ಹೀಗೊಂದು ಕೊರೋನಾ ಕಾಲದ ವಿರಹ ಗೀತೆ...!
ಪ್ರೊ.ಸಿದ್ದು ಯಾಪಲಪರವಿ

ಹೀಗೊಂದು ಕೊರೋನಾ ಕಾಲದ ವಿರಹ ಗೀತೆ

ತಲೆ ದಿಂಬಾಗದ ತೋಳುಗಳು
ತುಟಿಗೆ ರುಚಿ ಉಣಿಸದ ಮೊಲೆ
ತೊಟ್ಟುಗಳು ಬಂಧನದ ಬೆಸುಗೆಯ
ಬಿಸಿ ಉಸಿರ ದೇಹದ ವಾಸನೆ
ನಾಭಿಯ ಏರಿಳಿತದ ಹೊಟ್ಟೆಯ
ಲಯದಾಟ

ಕೇವಲ ನನಗಾಗಿ ಅರಳುವ ತೊಡೆಗಳ
ಕಂಪನದ ಅಲುಗಾಟ ಒಳ ನಸುಳಲು
ಚಡಪಡಿಸುತ ನಿಂತ ಯೋಧನ ಏಕಾಂತ

ಏದುಸಿರ ಹೊಡೆತದ ಏಳು
ಬೀಳುಗಳ ನರಳಾಟ ಚೀರಾಟ
ಹಾರಾಟದ ಆಟ ಈಗ ಬರೀ
ನೆನಪಿನ ಅಗ್ನಿ ಕುಂಡ

ಎದೆಯ ರೋಮಗಳ ಮೂಕ
ವೇದನೆಗೆ ತಟಗುಟ್ಟುವ ಬೆವರು
ಮೌನವಾಗಿ ಮುದುಡಿ ಮಲಗಿದ
ಅಗ್ನಿ ದಂಡ

ಬತ್ತಿ ಹೋದ ಜೀವ ಧಾತು
ಮರು ಜೀವ ಪಡೆವ ತವಕ
ಮಿಲನ ಒಂದೇ ಸಾಕು
ಉಸಿರು ಹಸಿರಾಗಿ ಚಿಗುರಿ
ನಲಿಯಲು ಬೇಕು ಬೇಕೇ
ಬೇಕು ನಾ ನೀ ಉಳಿಯಲು

ನಿನಗೂ ಅದೇನೋ ಸಂಕಟ
ತಿಳಿ ಹೇಳಿ ರಮಿಸುವ ಹುಚ್ಚಾಟ
ಆಗದು ಸಖೀ ಆಗದು

ಸಖಿ ಗೀತೆ ಸುಖಿಯಾಗಿ
ಆಲಾಪಿಸಿ ಮತ್ತೆ ಮತ್ತನೇರಿಸಲು
ಮತ್ತೆ ಮತ್ತೆ ಮತ್ತೆ ಮತ್ತಿನ
ಮುತ್ತಿನಾಟ ಕಾಳ ಸರ್ಪ ಕೂಟ

ಬೇಕು ಬೇಕು ಬೇಕೆಂದರೆ
ಬೇಕೆ ಬೇಕು
ರಮಿಸ ಬೇಡ ವಿರಮಿಸಲಾಗದ
ಮನದ ಓಟವ ನಿಲ್ಲಿಸಲಾಗದು

ಓಡಿ ಬಾ ಓಡೋಡಿ ಬಾ
ಕೂಡಿಕೊಂಡು ಓಡಿಸೋಣ
ಮುರಿಯೋಣ ಮೌನದ ಮಾತ

ಕಣ್ಣಿಗೆ ಕಾಣದ ಭೀತಿಗೆ
ಸೋತು ಶರಣಾಗಿ ಹೌ ಹಾರಿ
ಹೈರಾಣಾಗಿ ಮುದುರಿ ಮಲಗುವುದು
ಬೇಡ ಬೇಡವೇ ಬೇಡ.