- ಪಾತ್ರದೊಳಗಿನ ಕಲೆಗಳು - ಅಕ್ಟೋಬರ್ 28, 2024
- ಸಿದ್ಧಾಂತಗಳು ಬೆಳಕನ್ನು ಬಂಧಿಸಬಲ್ಲವೇ? - ಸೆಪ್ಟೆಂಬರ್ 4, 2022
- ಪಾತರಗಿತ್ತಿ ಪರಿಣಾಮ! - ಆಗಸ್ಟ್ 21, 2022
ಆಫೀಸು ಕೆಲಸ ಮುಗಿಸಿ
ಮನೆಗೆ ಬಂದಾಗ ಬೀಗ
ಬಾಗಿಲು ಕಾದಿತ್ತು..
ಕೀಲಿ ತಿರುಗಿಸಿ ತೆರೆದೆ
ಹೆಗಲು ಭಾರದ ಚೀಲ
ಮೂಲೆಗೆಸೆದೆ..
ಕಿಸೆಯಲ್ಲಿದ್ದ ನೋಟು
ಐಡೆಂಟಿಟಿ ಕಾರ್ಡು
ಡ್ರೈವಿಂಗ್ ಲೈಸೆನ್ಸು
ಕಪಾಟೊಳಗೆ ಕಾಪಿಟ್ಟೆ
ನಾಳೆಗಾಗಿ..
ಬೆಳಗ್ಗೆ ಧರಿಸಿದ್ದ ಇಸ್ತ್ರಿ
ಮಡಿ ಮಡಿಕೆಯ ದಿರಿಸು
ಮುದುರಿದೆ..
ಕೆಲಸದ ಬೆವರು ಅಂಟಿದೆ
ಕಳಚಿ ತೊಳೆಚೀಲಕ್ಕೆ ತುಂಬಿದೆ..
ಷವರ್ ನ ಕೆಳಗೆ ನಿಂತರೆ
ಮೈ ಸವರುವ ತಂಪು ಹನಿಗಳು
ಮೈಸೂರು ಸ್ಯಾಂಡಲ್ ಸೋಪು ನೊರೆ ನೊರೆ ಸೇರಿ ಪೊರೆ ಕಳಚಿ
ಕೊಳಚೆ ಗುಂಡಿಯತ್ತ ಹರಿದವು.
ಬಿಸಿಲು ಹೀರಿ
ಗರಿಗರಿಯಾದ ಪಂಚೆಯುಟ್ಟೆ..
ಚಹಾ ಪಾತ್ರೆಗೆ ಕಣ್ಣಳತೆಯ
ನೀರು..
ಹದಮನಬಿಸಿಯಲ್ಲಿ ಕುದಿಸಿ
ಚಹಾ ಪುಡಿ ಐಡಿಯಾ ಬೆರೆಸಿ ಒಗರು
ಸಕ್ಕರೆ ಹಿತಮಿತ ಶಕ್ತಿ
ಬಿಳಿಗಣ್ಣ ಕೆಂಬಣ್ಣಕ್ಕೆ ಅಷ್ಟೇ ಹಾಲುಗನಸು
ಹಜಾರದ ಕುರ್ಚಿಯಲ್ಲಿ
ವರ್ತಮಾನದ ಹಬೆಯಾಡುವ
ಚಹಾ ಕಪ್ಪು ಕೈಯಲ್ಲಿ..
ಗುಟುಕು ಗಂಟಲಿಗಿಳಿಸಿ
ಅರೆಗಣ್ಣು ಮುಚ್ಚಿ
ಸ್ವತಂತ್ರ ಸ್ವಾದಕ್ಕೆ
ಅರ್ಪಣೆಯಾಗಿರುವೆ..
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ