- ಕನ್ನಡ ನಾಟ್ಕ ಇನ್ ತೆಲುಗು ದೇಶಂ ..! - ನವೆಂಬರ್ 22, 2023
- ಕನ್ನಡ ನಾಟ್ಯ ರಂಗ - ನವೆಂಬರ್ 21, 2023
- ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು - ನವೆಂಬರ್ 1, 2023
ಉತ್ತರಾರ್ಧ ಗೋಳದಲ್ಲಿ ಇವತ್ತು ದೀರ್ಘ ಬೇಸಿಗೆಯ ದಿನ.. ಹೆಚ್ಚು ಕಮ್ಮಿ ರಾತ್ರಿ ಆಗುವುದಿಲ್ಲ.. ಇಡೀ ದಿನ ಹಗಲು.. ಇದನ್ನು ಮಿಡ್ ಸಮ್ಮರ್ ಸಂಭ್ರಮಾಚರಣೆಯಾಗಿ ಯುರೋಪ್ ನ ಉತ್ತರ ಭಾಗದಲ್ಲಿ ಆಚರಿಸಲಾಗುತ್ತದೆ. ಸ್ವೀಡನ್ ನಲ್ಲಿ ಕೂಡ ಪಾರಂಪರಿಕ ನೃತ್ಯ,ಹಾಡು,ತಿನಿಸುಗಳಿಂದ ಮಿಡ್ ಸಮ್ಮರ್ ಅನ್ನು ಉತ್ಸವವಾಗಿ ಆಚರಿಸುವರು.
ಇಲ್ಲಿನ ಒಂದು ದಂತ ಕಥೆಯ ಪ್ರಕಾರ, ಹಿಂದಿನ ದಿನ, ೭ ವಿವಿಧ ಹೂ ಗಳನ್ನು ತಲೆ ದಿಂಬಿನ ಕೆಳಗೆ ಇಟ್ಟರೆ ಏನಾಗುತ್ತದೆ ಗೊತ್ತೇ?
ಮುಂದೆ ಓದಿ…
ವಸಂತ ಕಳೆದು ಬೇಸಿಗೆ ಬರುತ್ತಿದ್ದಂತೆ ಸ್ವೀಡನ್ ಸೇರಿದಂತೆ ಉತ್ತರ ತುದಿಯ ಭೂಭಾಗದಲ್ಲಿ ಸೂರ್ಯ ತನ್ನ ಅಧಿಪತ್ಯ ಸ್ಥಾಪಿಸುತ್ತಾನೆ. ರಾತ್ರಿ ೧೧ ರ ಮೇಲೂ ಸೂರ್ಯನ ಬೆಳಕು. ಸ್ವೀಡನ್ ನ ಇನ್ನೂ ಉತ್ತರ ಭಾಗಕ್ಕೆ ಹೋದರಂತೂ ಬೇಸಿಗೆಯಲ್ಲಿ ರಾತ್ರಿ ಇಲ್ಲದೆ ಹಗಲೇ ಎಲ್ಲ..! ಸೂರ್ಯ ಮುಳುಗುವ ಗೋಜಿಗೆ ಹೋಗುವುದಿಲ್ಲ.. ಮಧ್ಯರಾತ್ರಿ ಕೂಡ ಸೂರ್ಯ ಬಾನಲ್ಲಿ …! ಹಾಗೆ ನೋಡಿದರೆ ಸ್ವೀಡನ್ನಿಗರು ಧಾರ್ಮಿಕ ಮನೋಭಾವದವರಂತೂ ಅಲ್ಲವೇ ಅಲ್ಲ … ಮದುವೆಗೆ ಬಿಟ್ಟರೆ ಚರ್ಚ್ ಕಡೆ ಮುಖ ಮಾಡಿ ಮಲಗಿದವರಲ್ಲ. ಆದರೆ ಜೂನ್ ನ ತಿಂಗಳ ಕೊನೆಯ ಒಂದು ದಿನ ಅತೀ ಧೀರ್ಘ ಹಗಲಿನ ದ್ಯೋತಕವಾಗಿ ಮಿಡ್ ಸುಮ್ಮರ್ ಎಂಬ ಪ್ರಾಚೀನ ಸಾಂಪ್ರದಾಯಿಕ ಹಬ್ಬವನ್ನು ಮಾತ್ರ ಅತ್ಯಂತ ಸಡಗರದಿಂದ ಆಚರಿಸುತ್ತಾರೆ. . ಇದೊಂದು ರೀತಿಯ ಉತ್ತರಾಯಣ ಹಬ್ಬದಂತೆ. ಕ್ರಮ ಬದ್ಧತೆಯನ್ನು ಇಷ್ಟಪಡುವ ಅವರಿಗೆ ಮಿಡ್ ಸುಮ್ಮರ್ ಕೂಡ ಜೂನ್ ನ ಕೊನೆಯ ಶುಕ್ರವಾರದಂದೇ ಇಟ್ಟು ಕೊಂಡು, ಅದಕ್ಕೆ ಮುಂಚೆಯೇ ನಗರದಿಂದ ಹಳ್ಳಿಯ ಕಡೆಗೆ, ತಮ್ಮ ಫಾರ್ಮ್ ಹೌಸ್ ಇದ್ದಲ್ಲಿಗೆ ಪ್ರಯಾಣ ಬೆಳೆಸುತ್ತಾರೆ. ಇಂತಹ ಮಿಡ್ ಸಮ್ಮರ್ ಬಗ್ಗೆ ಕೆಲವು ಕೂತೂಹಲಕಾರಿ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.
೧. ಮೇ ಪೋಲ್ ಕಂಬ
ಒಂದು ಎತ್ತರದ ಮರದ ಕಂಬವನ್ನು ನಿಲ್ಲಿಸಿ ಅದರ ಸುತ್ತ ನೃತ್ಯ ಮಾಡುತ್ತಾ ಸುತ್ತುವರೆವ ಸಂಪ್ರದಾಯ ಮಿಡ್ ಸಮ್ಮರ್ ಹಬ್ಬದಲ್ಲೂ ಕಾಣಬಹುದು. ಬಹುಷ: ಇದು ಪ್ರಾಚೀನ ಜರ್ಮಾನಿಕ್ ಪೇಗನ್ ಸಂಸ್ಕೃತಿಯಿಂದ ಬಂದಿರಬಹುದು. ಇದನ್ನು ಸಂತಾನ ಫಲವತ್ತತೆಯ ದ್ಯೋತಕವಾಗಿ ಆಚರಿಸಲ್ಪಡುವ ಒಂದು ಸಂಪ್ರದಾಯವಾಗಿ ಮೇ ಪೋಲ್ ಚಾಲ್ತಿಯಲ್ಲಿತ್ತು ಎಂಬ ಪ್ರತೀತಿ ಇದೆ. ಮಿಡ್ ಸುಮ್ಮರ್ ಹಬ್ಬದಲ್ಲಿ, ಹೂ ಎಲೆಗಳಿಂದ ಅಲಂಕೃತ ಈ ಎತ್ತರದ ಕಂಬದ ಸುತ್ತ ಸ್ವೀಡಿಷ್ ಜನರು ಕುಣಿಯುವುದು ಆಚರಣೆಯ ಒಂದು ಭಾಗ. ಪ್ರಕೃತಿ ಇಲ್ಲಿನ ಜನ ಜೀವನದ ಅವಿಭಾಜ್ಯ ಅಂಗ ಕೂಡ.
೨. ಕಪ್ಪೆ ಕುಣಿತ
ಹೌದು.. ಕಪ್ಪೆ ಕುಣಿತ.. ಕಪ್ಪೆಗಳನ್ನು ಅನುಕರಿಸಿ ಹಾಡುತ್ತಾ ಮೇ ಪೋಲ್ ಸುತ್ತ ಕುಣಿಯುತ್ತ ಸುತ್ತುವುದು ಇನ್ನೊಂದು ವಿಶೇಷ. Små grodorna’ (The small frogs) ಆಗ ಹಾಡುವ ಹಾಡು..
Små grodorna, små grodorna
Är lustiga att se
Små grodorna, små grodorna
Är lustiga att se
Ej öron, ej öron
Ej svansar hava de
Ej öron, ej öron
Ej svansar hava deKo-ack-ack-ack
Ko-ack-ack-ack
Ko-ack-ack-ack-ack-a
Ko-ack-ack-ack
Ko-ack-ack-ack
Ko-ack-ack-ack-ack-a
The little frogs, the little frogs
Are funny to see The
little frogs, the little frogs
Are funny to see
No ears, no ears
No tails they have
No ears, no ears
No tails they have Ko-ack-ack-ack
Ko-ack-ack-ack
Ko-ack-ack-ack-ack
Ko-ack-ack-ack
Ko-ack-ack-ack
Ko-ack-ack-ack-ack-a
೩. ಹಬ್ಬದ ಊಟ ಮತ್ತು ಹೆರಿಂಗ್ ಮೀನು ಪ್ರಕಾರಗಳು
ಗರಿಗರಿಯಾದ ಬ್ರೆಡ್ಡು, ಬೇಯಿಸಿ ಕಳಿಸಿದ ಆಲೂ, ವಿವಿಧ ಸಾಸ್ ,ಕ್ರೀಮ್ ಗಳು, (ಸಂಸ್ಕರಿಸಿದ ಸಾಲ್ಮನ್) ಅಥವಾ ಸುಟ್ಟ ಸಾಲ್ಮನ್, ಬೇಯಿಸಿದ ತರಕಾರಿಗಳು, ಖಾರದ ಉಪ್ಪಿನಕಾಯಿ ಹೆರಿಂಗ್ ,ಸಬ್ಬಸಿಗೆ ಮ್ಯಾರಿನೇಡ್ , ಸೌತೆಕಾಯಿಗಳು , ಆಲೂಗಡ್ಡೆ ಸಲಾಡ್ ,ಸ್ಟ್ರಾಬೆರಿ ಕೇಕ್ ಇತ್ಯಾದಿಗಳು ಇದ್ದೇ ಇರುತ್ತವೆ. ಹೆರಿಂಗ್ ಎಂಬ ಮೀನಿನ- ಉಪ್ಪಿನ ಕಾಯಿ ಹಾಕಿದ್ದು , ಹೊಗೆಯಾಡಿಸಿ ಬೇಯಿಸಿದ್ದು (smoked) , ಫರ್ಮೆಂಟ್ ಮಾಡಿದ್ದು, ಗ್ರಿಲ್ ಮಾಡಿದ ಸಾಲ್ಮನ್ ಇತ್ಯಾದಿಗಳನ್ನು ಈರುಳ್ಳಿ ಮತ್ತು ಸಬ್ಬಸಗಿ ಸೊಪ್ಪಿನೊಂದಿಗೆ ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಸ್ಕ್ಯಾಂಡಿನೇವಿಯಾನ್ ದೇಶಗಳಲ್ಲಿ ಮೀನುಗಳಂತೂ ಹೇರಳ.
೪. ಸ್ವೀಡಿಷ್ ಹವಾಮಾನ
ಎಲ್ಲರೂ ಸೇರಿದಾಗ ಹವಾಮಾನದ ಬಗ್ಗೆ ಚಿಕ್ಕ ಚಿಕ್ಕ ಚರ್ಚೆ ಮಾಡುವುದು ಸ್ವೀಡನ್ನಿಗರಿಗೆ ಸರ್ವೆ ಸಾಮಾನ್ಯ ರೂಢಿ. ಯಾವಾಗ ಮೋಡ, ಮಳೆ..ಯಾವತ್ತು ಸನ್ನಿ ಡೇ ಎಂಬ ಮಾತುಗಳು ಚರ್ಚೆಯ ಒಂದು ಭಾಗ. ಈ ಋತುಮಾನದ ಸ್ಟ್ರಾಬೆರಿ ಫಸಲಿನ ಬಗ್ಗೆ ಕೂಡ ಕಾಳಜಿ ಇವರಿಗೆ.
ಈ ಬಾರಿ ದೊಡ್ಡ ಸ್ಟ್ರಾಬೆರ್ರಿ ಗಳು ಬರಬಹುದು ಎಂದು ಚರ್ಚಿಸುವ ಇವರು ತಾವೇ ತೋಟಕ್ಕೆ ಹೋಗಿ ಆರಿಸಿ, ಖರೀದಿಸಿ ಬರುವ ಪರಿಪಾಠವೂ ಇದೆ.(strawberry picking). ಸ್ಟ್ರಾಬೆರಿ ಕೇಕು ಸೇರಿದಂತೆ ಅನೇಕ ಸ್ವಾದಿಷ್ಟ ರೆಸಿಪಿಗಳು ತಯಾರಾಗಿ ಡೈನಿಂಗ್ ಟೇಬಲ್ ಅನ್ನು ಅಲಂಕರಿಸುವುದು ನಯನ ಮನೋಹರ ಕೂಡ.
೫. ಹೂವುಗಳು ಮತ್ತು ಸಂಪ್ರದಾಯ
ಸಾಮಾನ್ಯವಾಗಿ ಹೂಗಳಿಂದ ಮಾಡಿದ ವೃತ್ತಾಕಾರದ ದಂಡೆಯನ್ನು ಸ್ತ್ರೀ ಪುರುಷಾದಿಯಾಗಿ ಅನೇಕರು ತಲೆಯ ಮೇಲೆ ಧರಿಸಿದ್ದನ್ನೂ ಕಾಣಬಹುದು..
ಹಾಗೆಯೇ ಹೂಗಳ ವಿಷಯದಲ್ಲಿ ಇಲ್ಲೊಂದು ಪ್ರತೀತಿಯಿದೆ. ಒಟ್ಟು ಏಳು ಪ್ರಕಾರದ ಹೂವನ್ನು ಕೊಯ್ದು ಅದನ್ನು ತಲೆ ದಿಂಬಿನ ಕೆಳಗೆ ಇಟ್ಟು ಮಲಗಿದರೆ ಅವರ ಭವಿಷ್ಯದ ಸಂಗಾತಿ ಇಲ್ಲವೇ ಪ್ರೇಮಿ ಕನಸಲ್ಲಿ ಬರುತ್ತಾರೆ ಎಂಬ ನಂಬಿಕೆ ಕೂಡ ಇದೆ. ನಾನು ಕೂಡ ಸಮೀಪದ ಕಾಡಿಗೆ ಹೋಗಿ, ಹಾಗೆ ಸುಮ್ಮನೆ ೭ ಪ್ರಕಾರದ ಹೂಗಳನ್ನು ಜೋಡಿಸಿ ತರುವಾಗ ಇತರರನ್ನೂ ಹೂವು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದು ಕಂಡು ಮುಗುಳು ನಕ್ಕಿದ್ದೇನೆ. ಮನೆಗೂ ತಂದು, ಕೆಲವರ ಹೆಸರು ಹಿಡಿದು ನನ್ನನ್ನು ಅಣಕಿಸಲು ಆಸ್ಪದ ಕೊಟ್ಟಿದ್ದೂ ಉಂಟು…😁
… ಮಿಡ್ ಸುಮ್ಮರ್ ಎಂಬ ಹಬ್ಬದೊಂದಿಗೆ ಸ್ವೀಡನ್ನಿಗರು ಹೆಚ್ಚು ಕಮ್ಮಿ ಐದು ವಾರಗಳ ಸಡಗರದ, ಸಕ್ರೀಯಶೀಲ ಧೀರ್ಘ ರಜೆಗೆ ಅನುವಾಗುತ್ತಾರೆ. ಸದ್ಯಕ್ಕೆ ಕೋವಿಡ್ ನ ಸಮಸ್ಯೆ,ನಿಯಮಗಳು ಇಲ್ಲಿ ಇಲ್ಲ. ಎಲ್ಲ ಸ್ವೀಡಿಷ್ ಗೆಳೆಯರಿಗೂ, ಓದುಗರಿಗೂ ಕೂಡ ಮಿಡ್ಸಮ್ಮರ್ ನ ಶುಭಾಶಯಗಳು.. Happy Midsummer..💐💐💐
ಹೆಚ್ಚಿನ ಬರಹಗಳಿಗಾಗಿ
ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ
ನೋ ಪಾರ್ಕಿಂಗ್
ಪುತಿನ ರ ವಸಂತ ಚಂದನ