ಇತ್ತೀಚಿನ ಬರಹಗಳು: ಧೀರೇಂದ್ರ ನಾಗರಹಳ್ಳಿ (ಎಲ್ಲವನ್ನು ಓದಿ)
- ಹೂರಣವಿಲ್ಲದ ಹೋಳಿಗೆ - ಅಕ್ಟೋಬರ್ 13, 2025
- ಗುಂಪಿನಲ್ಲಿ ಗಾಂಪರಾಗುವ ಮನಸ್ಥಿತಿ - ಅಕ್ಟೋಬರ್ 30, 2024
- ಕಾನ್ ಬಾನ್ - ನವೆಂಬರ್ 12, 2020
ಹಂಚಿನ ಮೇಲೊಂದು ಚೆನ್ನಾದ ಹೋಳಿಗೆ
ಬೆಲ್ಲದ ಪರಿಮಳವಿಲ್ಲ,ಕೊಬ್ಬರಿಯ ಸ್ಪರ್ಶವಿಲ್ಲ.
ಹೊರಗಿನ ಹೊಳಪದು ಇರಬಹುದೆ ಒಳಗೂ?
ಆಪೇಕ್ಷಿತ ಬಾಯಿಗೆ ಮೆದ್ದ ತೃಪ್ತಿಯೇ ಇಲ್ಲ.
ಒಳಗಿನ ಬಡತನವೋ? ಹೊರಗಿನ ಆಭರಣವೋ?
ಹೃದಯಕೆ ತೃಪ್ತಿ ಇಲ್ಲ, ರಸಾಂಕುರಕೆ ರುಚಿಯಿಲ್ಲ
ಚಾಪಲ್ಯದ ಬಲಕೊ ಒಲಿದಿಹ ಕಾಲಕೊ?
ಹಂಚಿನಲಿ ಬೆಂದ ಹೋಳಿಗೆಗೆ ಸಿಹಿಯೇ ಇಲ್ಲ.
ಬಾಣಸಿಗನ ಕಲೆಯೋ? ಅತಿಥಿಯ ಬಯಕೆಯೊ?
ಹೂರಣವಿಲ್ಲದೆ ಕನಸು, ಖಾಲಿ ತಟ್ಟೆಯಲ್ಲಿ ಇಳುತ್ತದೆ
ಅರ್ಥವಿಲ್ಲದ ಆಸ್ವಾದ! ಅರಿವಿಲ್ಲದ ಆಸೆಯೋ?
ಹೋಳಿಗೆಯಂತ ಬದುಕು, ಹಂಚಿನಲಿ ಬೇಯುತಿದೆ .




ಹೆಚ್ಚಿನ ಬರಹಗಳಿಗಾಗಿ
ಕನ್ನಡ ಕಾಂತಾರ..
ಒದ್ದೆ ಹಕ್ಕಿಯ ಹಾಡು ಮತ್ತು ಇತರ ಕವಿತೆಗಳು
ಸಂಕ್ರಾಂತಿ