ಇತ್ತೀಚಿನ ಬರಹಗಳು: ಮಲಿಕಜಾನ ಶೇಖ (ಎಲ್ಲವನ್ನು ಓದಿ)
- ಭವ್ಯ ಭಾರತದ ಬಾಲಕ - ಜೂನ್ 12, 2021
- ಪುಟ್ಟನ ಮರ - ಜೂನ್ 5, 2021
- ಕನ್ನಡ ಕಂದ - ನವೆಂಬರ್ 1, 2020
ಭವ್ಯ ಭಾರತ ಭವಿಷ್ಯ ಕಟ್ಟುವ
ಜಾಣ ಬಾಲಕ ನೀನು
ವಿದ್ಯೆ ಬಿಟ್ಟು ಕೂಲಿ ಮಾಡಿದಡೆ
ದೇಶ ಕಟ್ಟುವದೆಂತ ಹೇಳು.
ನಮ್ಮ ಬಡತನ ನಮ್ಮ ದರಿದ್ರತನಕೆ
ಅಜ್ಞಾನದ ಬೇರು ಎಂಬುದು ಕಾಣು
ಅಂಧಕಾರದಲಿ ಜ್ಯೋತಿ ಬೆಳಗಲು
ವಿದ್ಯೆಯೆ ದಾರಿ ಎಂಬುದು ಕಾಣು
ನಿನ್ನ ಉನ್ನತಿ, ದೇಶದ ಸನ್ಮತಿ
ವಿದ್ಯೆಯಲ್ಲಿಯೆ ಕಾಣು
ನೀತಿ ನೆಮ್ಮದಿ ಪ್ರೀತಿ ಸದ್ಗತಿ
ಶಾಲೆಯಲ್ಲಿಯೆ ಕಾಣು
ಕೊಂಚ ಹಣಕೆ ಕನಸು ಸುಟ್ಟು
ಗುಲಾಮನಾಗಬೇಡ ನೀನು
ನಿನ್ನ ಪ್ರಗತಿ ದೇಶದ ಪ್ರಗತಿ
ಎಂದು ಶಾಲೆ ಬಾರೋ ನೀನು
ಕೇಳಿ ಪಾಲಕ ಕೇಳಿ ಶಿಕ್ಷಕ
ಮಟ್ಟ ಹಾಕಿ ಬಾಲ ಶ್ರಮಿಕ
ಶಾಲೆ ತನ್ನಿ ಬಾಲ ಕಾರ್ಮಿಕ
ನೀವೆ ತಾನೇ ದೇಶ ರಕ್ಷಕ.
ಹೆಚ್ಚಿನ ಬರಹಗಳಿಗಾಗಿ
ಶೀನ್ಯಾ ಸೋನ್ಯಾ
ಗಾಂಧಿಜೀ ಮತ್ತು ಸ್ವಾತಂತ್ರ್ಯ (ಮಕ್ಕಳ ಕವಿತೆ)
ದೇಶಪ್ರೇಮಿಯಾಗು ಕಂದ