ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂತ:ಸ್ಪಂದನ – ೯

ಶಶಿಧರ್ ಕೃಷ್ಣ
ಇತ್ತೀಚಿನ ಬರಹಗಳು: ಶಶಿಧರ್ ಕೃಷ್ಣ (ಎಲ್ಲವನ್ನು ಓದಿ)

ಕುಂಡಲಿನಿ ಎಂಬುದು ಸದಾ ಹರಿಯುತ್ತಿರುತ್ತದೆ, ಅದರ ಅರಿವು ನಮ್ಮ ಪ್ರಜ್ಞೆಗೆ ಬರಬೇಕು ಎನ್ನುವಲ್ಲಿಗೆ ಬರಹ ನಿಂತಿತ್ತು.

ಈ ದಿನ, ಈ ಶಕ್ತಿ, ನಮ್ಮ ದೇಹದಲ್ಲಿರುವ ಚಕ್ರಗಳಲ್ಲಿ ಹರಿಯುವ ಬಗ್ಗೆ ತಿಳಿಯೋಣ ಇಂದು.

ಒಮ್ಮೆ ಕುಂಡಲಿನಿ ಶಕ್ತಿಯ ಹರಿವಿನ ಅರಿವು ಬಂದಲ್ಲಿ, ಅದು ಕ್ರಮವಾಗಿ ಮೂಲಾಧಾರ ದಿಂದ ಹರಿಯಲು ಶುರುಮಾಡುತ್ತದೆ. ಇದು ಕೆಂಪು ಬಣ್ಣದಲ್ಲಿ ಇರುವ ಕಾರಣ ಶಕ್ತಿ ದೇವಿ ಕಾಳಿಯಾಗಿ ಅಥವಾ ಕಾಲರಾತ್ರಿ ಅವತಾರದಲ್ಲಿ ಇಲ್ಲಿ ಇರುತ್ತಾಳೆ.

ಇನ್ನು ನಂತರದ್ದು ಸ್ವಾಧಿಷ್ಠಾನ ಇಲ್ಲಿ ಗಣಪತಿ ಇರುವನು ಇದು ಕೇಸರಿ ಬಣ್ಣದಲ್ಲಿ ಇರುತ್ತದೆ.

ಇದರ ಮೇಲೆ ಮಣಿಪೂರ ಚಕ್ರ ಇದರ ಕೆಳಗೆ ನಾರಾಯಣ ನೆಲೆಸಿರುವನು (ನಾಬಿ (*1 ಇದನ್ನು ನೋಡಿ)), ಈ ಜಾಗ ಹೊಕ್ಕಳು ಆಗಿದೆ ಇದರ ಮೇಲೆ, ದೇವಿ ಲಕ್ಷ್ಮಿ ಸ್ವರೂಪಿ ಆಗಿರುತ್ತಾಳೆ.

ಇನ್ನು ಅನಾಹತ ಚಕ್ರದಲ್ಲಿ ಬ್ರಹ್ಮ, ಸರಸ್ವತಿ ಇರುವರು, ಇಲ್ಲಿ ಚಂದ್ರ ಮತ್ತು ಸೂರ್ಯ ನಾಡಿಗಳಿದ್ದು ಇವುಗಳ ಜೊತೆಗೆ ಬ್ರಹ್ಮನಾಡಿ/ಪ್ರಾಣನಾಡಿ ಅಥವಾ ಸೂಷುಮ್ನಾ ನಾಡಿ ಇದೆ, ಈ ನಾಡಿಯು ಅನಾಹತ ಚಕ್ರದಿಂದ, ಮಣಿಪೂರ ದ ಕಡೆಗೆ ಬೆನ್ನು ಹುರಿಯಲ್ಲಿ ಸಾಗುತ್ತದೆ, ಇದಕ್ಕೆ ಕಾರಣ ವಿಷ್ಣುವಿನ ಹೊಕ್ಕಳು ಬ್ರಹ್ಮನಿಗೆ ಆಧಾರ.

ಇನ್ನು ಇದರ ಮೇಲೆ ವಿಶುದ್ಧ ಚಕ್ರ, ಇಲ್ಲಿ ಶಿವ ಇರುವನು ಪ್ರಧಾನ ವಾಗಿ ಇರುವ ದೇವಿ ಸ್ಕಂದ ಮಾತಾ.

ನಂತರ ಆಜ್ಞಾ ಚಕ್ರ, ಇಲ್ಲಿ ದೇವಿ ಕಾತ್ಯಾಯಿನಿ ರೂಪದಲ್ಲಿ ಇರುತ್ತಾಳೆ.

ನಂತರ ಸಹಸ್ರಾರ ಇಲ್ಲಿ ಬ್ರಹ್ಮ ಮತ್ತು ವಿಷ್ಣು, ಇವರಿಬ್ಬರನ್ನು ದೇವಿ ಮುಚ್ಚುವಳು, ಮೇಲೆ ಉಳಿಯುವುದು ಶಿವ. ಇಲ್ಲಿ ದೇವಿ, ಮಹಾಗೌರಿ, ಮತ್ತು ದಶ ಸಿಧ್ದಿಯ ಏಕರೂಪವಾದ ಸಿದ್ಧಿಧಾತ್ರಿ ಆಗಿ ಇರುವಳು.

ಚಿತ್ರ 1

ಚಿತ್ರ *1, ಇಲ್ಲಿ ನೋಡಿ ಕೆಳಮುಖವಾಗಿ ಕೆಂಪು ತ್ರಿಭುಜ ಸಾಗುತ್ತಿದೆ ಅದು ಶಕ್ತಿ ದೇವತೆ, ಬ್ರಹ್ಮ ಮತ್ತು ವಿಷ್ಣುವನ್ನು ಮುಚ್ಚುತ್ತಿದ್ದಾಳೆ, ಮತ್ತು ನೀಲಿ ತ್ರಿಭುಜ ಮೇಲ್ಮುಖವಾಗಿ ಸಾಗುತ್ತಿರುವುದು ಶಿವ.

ಮತ್ತು, ನಾರಾಯಣ ಹೊಕ್ಕಳಿನ ಹತ್ತಿರ ಇರಲು ಕಾರಣ, ಆತ ಮಾತೃ ಸ್ವರೂಪಿ, ಇವನ ಬೀಜಾಕ್ಷರ ‘ಆ’ (ನೀವು ಉಚ್ಛರಿಸಿ ನೋಡಿ ಶಬ್ಧ ಹೊಕ್ಕಳಿನಿಂದ ಉಂಟಾಗಿ ಮೇಲೆ ಬರುತ್ತದೆ).

ಇನ್ನು, ಪ್ರಾಣವಾಗಿ ಉಳಿಯುವ ಬ್ರಹ್ಮ ಅನಾಹತ ಚಕ್ರದಲ್ಲಿ ಇರುವುದರಿಂದ, ಈತನ ಬೀಜಾಕ್ಷರ ‘ಉ’ (ಉಚ್ಛರಿಸಿ ಶಬ್ಧ ಶ್ವಾಸಕೋಶದ ಬಳಿ ಉಂಟಾಗಿ ತಿರುಗಿ ಕೆಳಮುಖವಾಗಿ ಹೋಗುವುದು).

ಇನ್ನು ಗಂಟಲಲ್ಲಿ ಇರುವ ಶಿವ, ಈತನ ಬೀಜಾಕ್ಷರ ‘ಮ್’ (ಉಚ್ಛಾರಣೆ ಮಾಡಿ ಶಬ್ಧ ಗಂಟಲಿನಿಂದ ಮೇಲೆ ಹರಿದು ಮುಗಿನಿಂದ ಆಚೆ ಬರುತ್ತದೆ).

ಹೀಗೆ ತ್ರಿಮೂರ್ತಿ ಸ್ವರೂಪವಾದ ಆಮ್ ಕಾರವು, ‘ಓಂ’ ಕಾರವಾಗಿ ಉಚ್ಛರಿಸಲ್ಪಟ್ಟು ಸೃಷ್ಟಿ ರಹಸ್ಯ ಇರಿಸಿಕೊಂಡಿದೆ ತನ್ನಲ್ಲಿ.

ಮೂಲಾಧಾರ ಚಕ್ರದಿಂದ, ಸಹಸ್ರಾರ ಚಕ್ರವನ್ನು ಮುಟ್ಟುವ ಕುಂಡಲಿನಿ ಶಕ್ತಿ, ಹಾವು ಹರಿದಂತೆ ಹರಿಯುತ್ತದೆ ಅಂದರೆ, ಶಕ್ತಿ ದೇವತೆಯ ಮತ್ತು ಶಿವನ ನಡುವೆ ಸೇತುವೆಯಾಗಿ ಇರುವುದು… ಆದಿಶೇಷ, ಕಾಳಿಂಗ ಅಥವಾ ನಾಗರಾಜ.

ಚಿತ್ರ 2

ಹೀಗೆ ಹರಿಯುವ ಶಕ್ತಿ ಚಿತ್ರ *2 ನೋಡಿ, ಈ ಚಿತ್ರದಲ್ಲಿ ಮೂಲಾಧಾರದಲ್ಲಿ ಶಕ್ತಿ infinite ರೂಪದಲ್ಲಿ ಹರಿಯುತ್ತಾ ಇರುವುದು, ಒಮ್ಮೆ ಸಹಸ್ರಾರ ಮುಟ್ಟಿ ನಂತರ ಹಾಗೆ ಕೆಳಗೆ ಬಂದು, ನಂತರ ಪುನಃ ಮೇಲೆ ಏರಿ ಜ್ಞಾನದ ಉದಯ ಆದಮೇಲೆ, ಪ್ರಪಂಚದ ಕಾಸ್ಮಿಕ್ ಶಕ್ತಿ ಜೊತೆಗೆ ಒಂದಾದ ನಂತರದಲ್ಲಿ ಅದು ಕೂಡ infinite ರೂಪದಲ್ಲಿ ಇರುತ್ತದೆ. ಹಾಗಾಗಿ ಯೋಗದಲ್ಲಿ ನಿಮ್ಮೊಳಗೆ ಇರುವುದು ಹೊರಗೆ ಕೂಡ ಇದೆ ಎನ್ನುವುದು.

ಇನ್ನೊಂದು ಮಾತು ಶಿವಲಿಂಗದ ಪರಿಕಲ್ಪನೆ ಕೂಡ ಇದೆ ಆಗಿದೆ. ಆದರೆ ಅಲ್ಲಿ ಬ್ರಹ್ಮ ಮೊದಲು, ಮಧ್ಯೆ ನಾರಾಯಣ ಇರುವನು, ಇವರನ್ನು ದೇವಿ ಮುಚ್ಚುವಳು. ಅದು ಲಿಂಗದ ಪಾಣಿಪೀಠದ ಭಾಗ, ಮೇಲ್ಭಾಗದಲ್ಲಿ ಶಿವ ಉಳಿಯುವುದರಿಂದ ಶಿವಲಿಂಗ ಎನ್ನುವರು (ಸೃಷ್ಟಿ, ಸ್ಥಿತಿ, ಲಯ)

ನೀವು ಚಿತ್ರ *1 ನೋಡಿ ಅದು ಹೇಗಿದೆ, ಹಾಗೆ ನಮ್ಮ ದೇಶದ ನಕ್ಷೆ ( ಸ್ವಾತಂತ್ರ್ಯ ಪೂರ್ವದ್ದು) ಕೂಡ ಇರುವುದು.

ವಿಷಯ ಇದಾಗಿರುವುದರಿಂದ ಅಣ್ಣ ಬಸವಣ್ಣನವರು,

ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೆಕಂಬ ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯ,
ಕೂಡಲಸಂಗಮದೇವ ಕೇಳಯ್ಯ,
ಸ್ಥಾವರಕ್ಕಳಿವುಂಟು… ಜಂಗಮಕ್ಕಳಿವಿಲ್ಲ.

ಎಂದು ಹೇಳಿರಬಹುದು, ಮತ್ತು ನಮ್ಮೊಳಗೆ ದೈವ ಶಕ್ತಿ ಇರುವುದು ಎನ್ನುವುದು ಇದಕ್ಕೆ.

ಮುಂದೆ ನಮ್ಮ ಸ್ಥೂಲ ದೇಹದೊಟ್ಟಿಗೆ, ಇರಬಹುದಾದ ಇನ್ನು ಹಲವು ದೇಹಗಳ ಬಗ್ಗೆ ತಿಳಿಯೊಣ.

(ಮುಂದುವರೆಯುವುದು)