- ಇಸ್ರೇಲ್ ಕೆಣಕಿ ಗೆದ್ದವರಿಲ್ಲ - ಡಿಸಂಬರ್ 10, 2021
- ಅಂತಃಸ್ಪಂದನ ೧೪ - ಆಗಸ್ಟ್ 8, 2021
- ಅಂತಃಸ್ಪಂದನ ೧೩ - ಆಗಸ್ಟ್ 1, 2021
ಶಿವನೇಕೆ ತನಗೆ ಪೂಜೆ ಸಲ್ಲ? ಎನ್ನುವನು.
ಮಾನವರು, ಅವರು ತೊಡಗಿಕೊಳ್ಳುವ ಕೆಲಸದ ಬಗ್ಗೆ ಅವರಿಗಿರುವ ಮಾಹಿತಿಯನ್ನು ಬಳಸಿ, ಆ ಕರ್ಮದ ಕ್ರಿಯೆಯಲ್ಲಿ ಶ್ರದ್ದೆಯಿಂದ ಆತನ ಗರಿಷ್ಠ ಮಟ್ಟದ ಸಾಮಾರ್ಥ್ಯವನ್ನು ಉಪಯೋಗಿಸಿ, ಸಂಪೂರ್ಣವಾಗಿ ಒಳಗೊಳ್ಳಬೇಕು… ಆಗ ಅವನು ಒಲಿದು ಬರುವನು.
ಅರ್ಥಾತ್ ಇವು ನಾಲ್ಕು ಯೋಗಗಳು
ಭಕ್ತಿ, ಜ್ಞಾನ, ಕರ್ಮ, ಕ್ರಿಯಾ
ಒಬ್ಬರಿಗೆ ವಿಪರೀತವಾಗಿ ಭಕ್ತಿ ಇದೆ ಅಂದುಕೊಳ್ಳಿ, ಮುಂದೆ ಅದೇ ಅವರಿಗೆ ಮುಳುವಾಗುವ ಲಕ್ಷಣ ಇರುತ್ತದೆ.
ಹಾಗೆ… ಒಬ್ಬರಿಗೆ ಅಪಾರ ಜ್ಞಾನ ಇದ್ದರೆ ಸಹಜ ಅನ್ನುವ ಹಾಗೆ ಅವರಲ್ಲಿ ಮೊದಲು ಋಣಾತ್ಮಕ ನೀರಾದ ಅಹಂಕಾರ ಆವರಿಸುತ್ತದೆ. ನಂತರ ಇದರ ಅವಳಿ ಸಹೋದರ ಆದ ಸ್ವಾರ್ಥವು ಬರುತ್ತದೆ, ಆಮೇಲೆ ಇನ್ನುಳಿದವು ಸೇರಿ… ಅರಿಷಡ್ವರ್ಗಗಳಾಗಿ… ಹರಿದು ಮುಕ್ಕುತ್ತವೆ, ಯಾವಾಗ ಇವುಗಳು ಬುದಿಯಾಗುತ್ತವೆ, ಆಗ ಅವರೆಂಬ ಹರಿಹರ ಮಾತ್ರ ಉಳಿಯುತ್ತಾರೆ.
ಮಾಡುವ ಕೆಲಸದ ಬಗ್ಗೆ ಅವರಿಗಿರುವ ಮಾಹಿತಿಯನ್ನು(ಜ್ಞಾನ)ಬಳಸಿ ಇಲ್ಲವೇ ಅದರ ಬಗ್ಗೆ ಜ್ಞಾನ ಪಡೆದು, ಆ ಕರ್ಮದ . ಕ್ರಿಯೆಯಲ್ಲಿ, ವಿನಯದಿಂದ(ಭಕ್ತಿ) ಒಳಗೊಳ್ಳುವುದೇ… ಶಿವನಿಗೆ ಸಲ್ಲುವ ನಿಜ ಪೂಜೆ ಆಗಿದೆ.
ಹೀಗೆ, ಕೆಲಸವನ್ನು ಆರಾಧನೆ ಮಾಡಿದಾಗ ಇರುವ ಒಂದು ಬಾಗಿಲ ಮುಖಾಂತರ.. ಬಂಧನದ ಸಂಕೋಲೆಯಿಂದ ಆಚೆ ಬಂದು, ನಮ್ಮೊಳಗೇ ಇರುವ ಮೃತ್ಯು ಮುಟ್ಟದವನನ್ನು… ಮುಟ್ಟಿನಿಂದಲೇ ಹುಟ್ಟಿ ಬಂದಿರುವ ನಾವು ಮುಟ್ಟಬಹುದು, ಆ ಒಂದು ಬಾಗಿಲೇ ಒಳಗಣ್ಣು.
ನೀವು ಮಾಡುವ ಕೆಲಸವನ್ನು ಪ್ರೀತಿಸಿ, ಆಗ ಶಿವನೇ ನಿಮ್ಮಲ್ಲಿಗೆ ಬರುವ, ನಿಮ್ಮಲ್ಲಿಯೇ ಉಳಿಯುವ.
ಈ ವಿಷಯ ಕಳೆದ ವರ್ಷದ ಮಹಾಶಿವರಾತ್ರಿಯಂದು ಇಡಿ ರಾತ್ರಿ… ಎದ್ದಿದ್ದು, ಮರುದಿನದ ಬೆಳಗಿನಲ್ಲಿ, ಶಿವನಿಂದ ತಿಳಿದು ಬಂದ ವಿಚಾರ.
ಮತ್ತೆ ಸಿಗೋಣ ಮುಂದಿನವಾರ ಕೊನೆಯ ಅಂತಃಸ್ಪಂದನ ಲೇಖನದಲ್ಲಿ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ