ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಸುಮ ಡಿ. ಗುಡಿ
ಇತ್ತೀಚಿನ ಬರಹಗಳು: ಡಾ. ಸುಮ ಡಿ. ಗುಡಿ (ಎಲ್ಲವನ್ನು ಓದಿ)

ಬಿಸಿಲು ಧಗೆ ಧಗೆ
ದ್ವೇಷ ಹಗೆ, ಹೊಗೆ
ನಿಡಿದುಸಿರು ತೀರದ ಬೇಗೆ
ಬೇಸಿಗೆಯ ಪರಿತಾಪ
ನೇಸರನಿಗೆಷ್ಟೊ ಹಿಡಿಶಾಪ
ಬೇಡವಾಯಿತು
ಬಿಸಿಯದೆಲ್ಲವೂ, ಬಿಸುಪು
ಕೊನೆಗೆ ಬೆಚ್ಚಗಿನ ಪ್ರೀತಿಯೂ…
ಅರೆರೆ, ಇದೇನಾಯಿತೆಂದು
ಪ್ರೀತಿರಹಿತ ಭುವಿಗೆ ಹೆದರಿ,
ಕೂಡಿಕಟ್ಟಿ ಮೇಘ ಕರಗಿ
ಅವನಿ ಕಾವನು ತಣಿಸಿತು…
ಮೊದಲ ಸಿಂಚನ, ರೋಮಾಂಚನ
ತೊಯ್ದ ಹೃದಯದಿ ಮತ್ತೆ ಸುಳಿಯಿತು
ಗ್ರೀಷ್ಮ ಪ್ರೇಮದ ಹಂಬಲ